ಬಾಲ್ಯವಿವಾಹ  
ಮೈಸೂರು

ಬಾಲ್ಯವಿವಾಹ ತಾಯಿ, ಪತಿ ವಿರುದ್ಧ ಎಫ್‌ಐಆರ್

ಪ್ರಮುಖ ಮುಖ್ಯಾಂಶಗಳು

  • ಏಳು ಆರೋಪಿಗಳ ವಿರುದ್ಧ ಪ್ರಕರಣ
  • ದುವೆ ಮಾಡಿಸಿರುವ ಪೂಜಾರಿಯ ಹುಡುಕಾಟ
  • ಬಾಲ್ಯವಿವಾಹದ ಕುರಿತು ಬಾಲಕಿಯ ತಂದೆಯೇ ಮೈಸೂರು ತಾಲೂಕಿನ ಇಲವಾಲ ಪೊಲೀಸ್ ಠಾಣೆಗೆ ದೂರು
 ಮೈಸೂರು: ಅಪ್ರಾಪ್ತೆಗೆ ಬಾಲ್ಯವಿವಾಹ ಮಾಡಿಸಿರುವ ಆಕೆಯ ತಾಯಿ, ಪತಿ ಸೇರಿದಂತೆ 7 ಜನರ ವಿರುದ್ಧ ಗುರುವಾರ ಎಫ್‌ಐಆರ್ ದಾಖಲಾಗಿದೆ.
15 ವರ್ಷ 8 ತಿಂಗಳ ಅಪ್ರಾಪ್ತೆಗೆ 2025ರ ಮಾರ್ಚ್ 26ರಂದು ಕೃಷ್ಣೇಗೌಡ ಪುತ್ರ ಚಂದು ಜತೆ ಬಾಲ್ಯವಿವಾಹ ಮಾಡಿಸಲಾಗಿದೆ. ಈ ಮದುವೆ ಮಾಡಿಸಿದ್ದು ಬಾಲಕಿ ತಾಯಿಯೇ ಎಂಬುದು ತಿಳಿದುಬಂದಿದೆ. ಇವರೊಂದಿಗೆ ದೊಡ್ಡಮ್ಮನ ಮಕ್ಕಳು ಸಾಥ್ ಕೊಟ್ಟಿದ್ದಾರೆ.
ಈ ಬಾಲ್ಯವಿವಾಹದ ಕುರಿತು ಬಾಲಕಿಯ ತಂದೆಯೇ ಮೈಸೂರು ತಾಲೂಕಿನ ಇಲವಾಲ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು, ಈ ಹಿನ್ನೆಲೆಯಲ್ಲಿ ಬಾಲಕಿಯ ಪತಿ ಚಂದು, ತಾಯಿ ರೋಜಾ, ಸಂಬಂಧಿಕರಾದ ಚಿಕ್ಕಣ್ಣ ಪುತ್ರ ಗೋವಿಂದಸ್ವಾಮಿ, ಮಂಜಮ್ಮ, ರೇಣುಕಾ, ಸತೀಶ್, ಶಿವರಾಜ್ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆ-2006ರ ರೀತ್ಯ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಾದ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಮದುವೆ ಮಾಡಿಸಿರುವ ಪೂಜಾರಿಯ ಹುಡುಕಾಟವೂ ನಡೆದಿದ್ದು, ಆರೋಪಿಗಳ ಬಂಧನ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.