ನಂಜನಗೂಡು ತಾಲೂಕಿನ ಮುದ್ದಹಳ್ಳಿ, ಯಲಚಗೆರೆ, ಸಿಂಧುವಳ್ಳಿ ಗ್ರಾಮಗಳಲ್ಲಿನ ಫಲವತ್ತಾದ ಭೂಮಿಯನ್ನು ಕೈಗಾರಿಕೆ ಉದ್ದೇಶಕ್ಕಾಗಿ ನಿಯಮಬಾಹಿರವಾಗಿ ಸ್ವಾಧೀನ ಪಡಿಸಿಕೊಳ್ಳುವುದನ್ನು ಸರ್ಕಾರ ಕೈ ಬಿಡಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದೆಂದು ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘದ ಪದಾಧಿಕಾರಿ ಮಂಜುಕಿರಣ್ ಎಚ್ಚರಿಸಿದರು.
ಈ ಗ್ರಾಮಗಳ 448 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ಮೊದಲಿನಿಂದಲೂ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇವು ಫಲವತ್ತಾದ ಭೂಮಿಗಳಾಗಿವೆ. ಇದರ ಅರಿವಿದ್ದ ಕಾರಣ ಶಾಸಕರು ಮೊದಲು ರೈತರ ನೆರವಿಗೆ ಬರುವುದಾಗಿ ತಿಳಿಸಿ ಭರವಸೆ ನೀಡಿದ್ದರೂ, ಈಗ ಯಾರದೋ ಒತ್ತಡಕ್ಕೆ ಮಣಿದು ಅಸಹಾಯಕರಾಗಿರುವುದು ಸರಿಯಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಮುಖಂಡರಾದ ಗುರುಸ್ವಾಮಿ, ವೆಂಕಟೇಶ್, ವರಕೂಡು ಕೃಷ್ಣೇಗೌಡ, ವಿಜಯಲಕ್ಷ್ಮೀ ಇದ್ದರು.