ಚಾಲಕನ ನಿಯಂತ್ರಣ ತಪ್ಪಿ ಚುಂಚನಕಟ್ಟೆ ಗ್ರಾಮದ ಬಿದಿರುಕಟ್ಟೆ ಹಳ್ಳದ ಸಮೀಪ ಗದ್ದೆಗೆ ಉರುಳಿರುವ ಬಸ್. 
ಮೈಸೂರು

ಗದ್ದೆಗೆ ಬಸ್ ಉರುಳಿ ಹದಿನೈದು ಪ್ರಯಾಣಿಕರಿಗೆ ಗಾಯ

ಆಕ್ಸೆಲ್ ತುಂಡಾಗಿದ್ದರಿಂದ ಅವಘಢ

ಕೆ.ಆರ್.ನಗರ: ಆಕ್ಸೆಲ್ ತುಂಡಾದ ಪರಿಣಾಮ ಕೆಎಸ್‌ಆರ್‌ಟಿಸಿ ಬಸ ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯ ಗದ್ದೆಗೆ ಉರುಳಿದ ಪರಿಣಾಮ 15ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಗ್ರಾಮದ ಬಿದಿರುಕಟ್ಟೆ ಹಳ್ಳದ ಸಮೀಪ ಬುಧವಾರ ಬಸ್ ಚಲಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು ಬಸ್‌ನಲ್ಲಿ ಇದ್ದ 70 ಜನರ ಪೈಕಿ ಸುಮಾರು 15 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ ಕೆ.ಆರ್.ನಗರದಿಮದ ಚುಂಚನಕಟ್ಟೆ-ಹೊಸೂರು ಮಾರ್ಗವಾಗಿ ಬಸ್ ಸಂಚರಿಸುತ್ತಿತ್ತು.
ಕೆ.ಆರ್.ನಗರ ಡಿಪೋಗೆ ಸೇರಿದ ಬಸ್ ರಸ್ತೆಗೆ ಉರುಳಿದ್ದರಿಂದ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಆಂಬುಲೆನ್ಸ್ ಗೆ ಕರೆ ಮಾಡಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸುವ ಮೂಲಕ ನೆರವಾಗಿದ್ದಾರೆ.
ಇದ್ದ 70 ಜನರಲ್ಲಿ ಸುಮಾರು 10 ರಿಂದ 15 ಮಂದಿಗೆ ಗಾಯಗಳಾಗಿವೆ ಕೆ.ಆರ್.ನಗರ ಬಸ್ ಡಿಪೋಗೆ ಸೇರಿದ ಬಸ್ ಕೆ.ಅರ್.ನಗರದಿಂದ ಚುಂಚನಕಟ್ಟೆ-ಹೊಸೂರು ಮಾರ್ಗವಾಗಿ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಬಸ್ ಆಕ್ಸೆಲ್ ತುಂಡಾದ ಕೂಡಲೇ ಎಚ್ಚೆತ್ತ ಚಾಲಕ ಕನಕರಾಜ್ ಸಮಯಪ್ರಜ್ಞೆ ತೋರಿ ವೇಗವನ್ನು ನಿಯಂತ್ರಿಸಿ ರಸ್ತೆ ಬದಿಯ ಗದ್ದೆಗೆ ಇಳಿಸಿದ್ದರಿಂದ ಪಲ್ಟಿಯಾಗಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಸ್ಥಳಕ್ಕೆ ಸಾಲಿಗ್ರಾಮ ಎಸ್‌ಐ ವಿಜಯರಾಜ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಕೆ.ಆರ್.ನಗರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.