ಹುಲಿ  
ಮೈಸೂರು

ಅನಾರೋಗ್ಯದಿಂದ ಹೆಣ್ಣು ಹುಲಿ ಮೃತ

ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರೀತಿ ಹೆಸರಿನ ಹುಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ. 2022ರಲ್ಲಿ ತಾರ ಮತ್ತು ರಾಕಿ ಎಂಬ ಹುಲಿಗಳಿಗೆ ಜನಿಸಿದ ಸುಮಾರು 3 ವರ್ಷ 9 ತಿಂಗಳ ಪ್ರೀತಿ ಹಿಮೋಪ್ರೋಟೋಜೋವ ಕಾಯಿಲೆಯಿಂದ ಬಳಲುತ್ತಿತ್ತು. ಕಳೆದ 5 ದಿನಗಳಿಂದ ಆಹಾರ ತ್ಯಜಿಸಿದ್ದ ಪ್ರೀತಿಗೆ ಮೃಗಾಲಯದ ಪಶುವೈದ್ಯಾಧಿಕಾರಿಗಳು ಚಿಕಿತ್ಸೆ ನೀಡುತ್ತಿದ್ದರು. ಆದರೆ. ಶುಕ್ರವಾರ ಮಧ್ಯರಾತ್ರಿ 1.30ರಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ ಎಂದು ಮೃಗಾಲಯದ ಪ್ರಕಟಣೆ ತಿಳಿಸಿದೆ.