ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 618 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಎಚ್.ಡಿ.ಕೋಟೆ ತಾಲೂಕಿನ ಅಣ್ಣೂರು ಹೊಸಹಳ್ಳಿ ಗ್ರಾಮದ ಸವಿತಾ, ವೆಂಕಟೇಶ್ ಪುತ್ರಿ ವೇದಾಳನ್ನು ತಾಲೂಕು ಸವಿತಾ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ವೀರಭದ್ರ, ರೇವಣ್ಣ, ಸಿದ್ದರಾಜು, ಸುಪ್ರೀತ್, ಎಂ.ಬಸವಣ್ಣ, ರಾಜಣ್ಣ, ಬಿ.ಕೆ.ಮಹೇಶ್ ಇದ್ದರು. 
ಮೈಸೂರು

ವಿ.ವೇದಾಗೆ ಸವಿತಾ ಸಮಾಜದಿಂದ ಸನ್ಮಾನ

ಲಲಾಟಾಕ್ಷ ಎಸ್
ಎಚ್.ಡಿ.ಕೋಟೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 618 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಅಣ್ಣೂರು ಹೊಸಹಳ್ಳಿ ಗ್ರಾಮದ ಸವಿತಾ, ವೆಂಕಟೇಶ್ ದಂಪತಿ ಪುತ್ರಿ ವಿ.ವೇದಾಳನ್ನು ತಾಲೂಕು ಸವಿತಾ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಭಾನುವಾರ ಪಟ್ಟಣದ ಸವಿತಾ ಸಮಾಜದ ಕಚೇರಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸಮಾಜದ ಮುಖಂಡ ವೀರಭದ್ರ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿನಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ನಮ್ಮ ಸಮುದಾಯದ ಕೀರ್ತಿ ಹೆಚ್ಚಿಸಿದ್ದಾಳೆ. ಜಾತಿ, ಅಸಮಾನತೆಯಿಂದ ಹೊರಬರಲು, ಆರ್ಥಿಕ ಹಾಗೂ ರಾಜಕೀಯವಾಗಿ ಮೇಲೆ ಬರಲು ನಮ್ಮ ಸಮಾಜದ ಮಕ್ಕಳಿಗೆ ಉನ್ನತ ಶಿಕ್ಷಣ ಮುಖ್ಯವಾಗಿದೆ. ಸಮಾಜದಲ್ಲಿ ನಾವು ಮುಖ್ಯವಾಹಿನಿಗೆ ಬರಲು ಶಿಕ್ಷಣ ಮುಖ್ಯ. ನಮ್ಮ ಮಕ್ಕಳು ಮುಂದೆ ಬರಲು ಪಾಲಕರು ಹೆಚ್ಚಿನ ಶ್ರಮ ವಹಿಸಬೇಕೆಂದು ಸಲಹೆ ನೀಡಿದರು.
ಎಚ್.ಡಿ.ಕೋಟೆ ಸವಿತಾ ಸಮಾಜದ ವತಿಯಿಂದ 10 ಸಾವಿರ ರೂ.ಗೌರವಧನ ನೀಡಲಾಯಿತು. ಸವಿತಾ ಸಮಾಜದ ತಾಲೂಕು ಅಧ್ಯಕ್ಷ ರೇವಣ್ಣ, ಗೌರವಾಧ್ಯಕ್ಷ ಸಿದ್ದರಾಜು, ಸಮಾಜ ಸೇವಕ ಸುಪ್ರೀತ್, ಸಮಿತಿ ಸದಸ್ಯರಾದ ಎಂ.ಬಸವಣ್ಣ, ರಾಜಣ್ಣ, ಬಿ.ಕೆ.ಮಹೇಶ್, ಜಿ. ಪ್ರಸಾದ್, ಸಿ.ಜಿ.ವೆಂಕಟೇಶ್, ಸ್ವಾಮಿ, ವೆಂಕಟೇಶ್, ಬಿ.ಸಿ.ಲೋಕೇಶ್, ಮಹದೇವ್, ಸುನೀಲ್, ಅನಿಲ್, ವೆಂಕಿ, ದೀಪು, ರವಿಕುಮಾರ್, ಸಂಜು, ಸಾಗರ್, ಮಧು, ಬಿ.ಸಿ.ರಮೇಶ್, ಮದನ್, ಪ್ರಶಾಂತ್, ಕೆಂಪಣ್ಣ, ರವಿ, ಅಭಿ, ಸತೀಶ್, ಶಿವು, ಪುನೀತ್, ರವಿ, ಸತ್ಯಣ್ಣ, ಮಂಜು, ಮಾದೇವ್, ನಾಗರಾಜ್, ಗೋಪಾಲ್, ಮಂಜು ಇದ್ದರು.