ಹುಣಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ರಾಜ್ಯ ದಲಿತ ಮಹಿಳಾ ಒಕ್ಕೂಟದ ವತಿಯಿಂದ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಮಹದೇವಮ್ಮ, ಡೇವಿಡ್ ರತ್ನಪುರಿ, ಸೋಮಣ್ಣ ಇದ್ದರು.
ಹುಣಸೂರು: ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ವತಿಯಿಂದ ಗ್ರಾಮಾಂತರ ಬಸ್‌ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಒಕ್ಕೂಟದ ಸಂಚಾಲಕಿ ಕಟ್ಟೆಮಳಲವಾಡಿ ಮಹದೇವಮ್ಮ, 10 ವರ್ಷಗಳಿಂದ ಹುಣಸೂರು ನಗರದ ಬಸ್ ನಿಲ್ದಾಣವನ್ನು ಪೌರಕಾರ್ಮಿಕರಾದ ಮಂಜುಳಾ ಮತ್ತವರ ತಂಡ ಉತ್ತಮವಾಗಿ ಸ್ವಚ್ಛ ಮಾಡಿ ನೈರ್ಮಲ್ಯ ಕಾಪಾಡಿದ್ದಾರೆ. ಸಾವಿರಾರು ಜನರು ಬಂದು ಹೋಗುವ ಈ ಜಾಗದಲ್ಲಿ ಮಹಿಳೆಯರು ನಿಷ್ಠೆಯಿಂದ ದುಡಿಯುತ್ತಿದ್ದು, ಇಂತಹ ಸಮಾಜ ಸೇವಕರನ್ನು ಗುರುತಿಸುವ ಹೊಣೆಗಾರಿಕೆ ಸಮಾಜದ ಮೇಲಿದೆ ಎಂದರು.
ಕೆಎಸ್‌ಆರ್‌ಟಿಸಿ ನಿಯಂತ್ರಣಾಧಿಕಾರಿ ಕಾಳೇಗೌಡ, ಸಂಚಾರ ನಿಯಂತ್ರಣಾಧಿಕಾರಿ ಬಸವರಾಜು, ಭದ್ರತಾ ಕಚೇರಿಯ ಕುಮಾರಸ್ವಾಮಿ, ಮುಖಂಡರಾದ ಜೆ.ಮಾದೇವ್, ಅಹಿಂದ ಜನ ಜಾಗೃತಿ ನಗರಾಧ್ಯಕ್ಷ ಸೋಮಣ್ಣ, ಡೇವಿಡ್ ರತ್ನಪುರಿ, ಕೆಂಡಗಣ್ಣಪ್ಪ, ಪೌರಕಾರ್ಮಿಕರಾದ ಸಂತೋಷ್ ಮಹೇಶ್, ವಿದ್ಯಾ ಇತರರು ಇದ್ದರು. ಪೌರಕಾರ್ಮಿಕರಿಗೆ ಹೊಸವಸ್ತ್ರ ನೀಡಲಾಯಿತು.