ಹನಸೋಗೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮಿಗೌಡ ಅವರನ್ನು ಅಭಿನಂದಿಸಲಾಯಿತು. ನವೀನ್, ಪ್ರಸನ್ನ, ಕರೀಗೌಡ, ರಾಜೇಗೌಡ ಇದ್ದರು.
ಸಾಲಿಗ್ರಾಮ: ಹನಸೋಗೆ ಗ್ರಾಮದ ಅಭಿವೃದ್ಧಿಗೆ ಈಗಾಗಲೇ 7 ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ಶಾಸಕ ರವಿಶಂಕರ್ ನೀಡಿದ್ದಾರೆ. ಕೃಷಿ ಪತ್ತಿನ ಸಹಕಾರ ಸಂಘ ಮತ್ತು ರೈತರ ಅಭಿವೃದ್ಧಿ ನಮ್ಮ ಜವಾಬ್ದಾರಿಯಾಗಿದೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡ ಸ್ವಾಮಿಗೌಡ ತಿಳಿಸಿದರು.
ಹನಸೋಗೆ ಗ್ರಾಮದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡುತ್ತಾ ಬರುತ್ತಿದ್ದೇವೆ. ಈಗಾಗಲೇ ರಸ್ತೆ, ವಿವಿಧ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನವನ್ನು ಶಾಸಕ ರವಿಶಂಕರ್ ನೀಡಿದ್ದಾರೆ. ಇನ್ನೂ ಹೆಚ್ಚು ಅನುದಾನ ನೀಡುವುದರ ಜತೆಗೆ ಗ್ರಾಮವನ್ನು ಸಮಗ್ರ ಅಭಿವೃದ್ಧಿ ಮಾಡುವುದರ ಕಡೆಗೆ ಎಲ್ಲರೂ ಗಮನ ಹರಿಸೋಣ ಎಂದರು.
ಕಾಂಗ್ರೆಸ್ ಯುವ ಮುಖಂಡ ನವೀನ್ ಮಾತನಾಡಿ, ಶಾಸಕ ಡಿ.ರವಿಶಂಕರ್ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡ ಸ್ವಾಮಿಗೌಡ ಅವರಿಗೆ ಗ್ರಾಮಸ್ಥರು ಮಾಡಿದ ಮನವಿಗೆ ಸ್ಪಂದಿಸಿದ ಅವರು, ಪರಿಶಿಷ್ಟ ಜಾತಿ ಮತ್ತು ಮುಸ್ಲಿಂ ಸಮುದಾಯದ ಬೀದಿ ಮುಂಭಾಗ ಇರುವ ಕಾವೇರಿ ನದಿ ದಡದಲ್ಲಿ 1 ಕೋಟಿ ರೂ.ವೆಚ್ಚದಲ್ಲಿ ಸೋಪಾನ ಕಟ್ಟೆ ನಿರ್ಮಿಸಿ ಕೊಟ್ಟಿದ್ದಾರೆ. ಹನಸೋಗೆ ದೊಡ್ಡ ಓಣಿ ರಸ್ತೆಗೆ 20 ಲಕ್ಷ ರೂ.ಅನುದಾನ ನೀಡಿ ಅಭಿವೃದ್ಧಿ ಮಾಡಿದ್ದಾರೆ. ವಾಲ್ಮೀಕಿ ಸಮುದಾಯ ಭವನ ಮುಂದುವರಿದ ಕಾಮಗಾರಿಗೆ 20 ಲಕ್ಷ ರೂ. ಅನುದಾನ ನೀಡಿದ್ದಾರೆ. ಅಭಿಮಕೇಶ್ವರ, ಶ್ರೀನಿವಾಸ ಸ್ವಾಮಿ, ರಾಘವೇಂದ್ರ ಸ್ವಾಮಿ ಮಠ, ಈಶ್ವರ ಸ್ವಾಮಿ ದೇವಸ್ಥಾನಗಳ ತಡೆಗೋಡೆ ನಿರ್ಮಾಣಕ್ಕೆ ಈಗಾಗಲೇ 6 ಕೋಟಿ ರೂ.ಅನುದಾನ ಮಂಜೂರು ಮಾಡಿದ್ದಾರೆ ಎಂದು ತಿಳಿಸಿದರು.
ಹಾಡ್ಯ ಮಹಾದೇವಸ್ವಾಮಿ, ಹನಸೋಗೆ ನವೀನ್, ಪ್ರಸನ್ನನಾಯಕ, ಪರಮೇಶ್, ಪಾಂಡುರಂಗ, ಎಚ್.ಟಿ.ಅವಿನಾಶ್, ಕರೀಗೌಡ, ಅಮ್ಜದ್ ಬಾಷಾ, ಎಚ್.ಟಿ.ರಾಜೇಗೌಡ, ಅಣ್ಣೇಗೌಡ, ಚೆಲುವ ನಾಯಕ, ಕೃಷ್ಣನಾಯಕ, ರಂಜನ್, ರಘು, ಬೀರೇಶ್, ಪಾಲಾಕ್ಷ, ಸಿದ್ದಯ್ಯ, ಸಿದ್ದಪ್ಪ, ಕಿಶೋರ್, ಸಂತೋಷ್, ಶಶಾಂಕ್, ಚನ್ನಮಗೆರೆ ಪಾಪ, ಹರೀಶ್ ಇದ್ದರು.