ತಂಬಾಕು ಬೆಳೆಗಾರರ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಕಾಡಾ ಕಚೇರಿಯಲ್ಲಿರುವ ಕೃಷಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಯಿತು.ಹೊಸೂರು ಕುಮಾರ್, ಪಿ.ಮರಂಕಯ್ಯ, ನಾಗನಹಳ್ಳಿ ವಿಜಯೇಂದ್ರ, ಹೊಸಕೋಟೆ ಬಸವರಾಜು, ಪ್ರಭಾಕರ್, ಚಂದ್ರಶೇಖರ್ ಚಿಕ್ಕನಹಳ್ಳಿ ರಾಘವೇಂದ್ರ ಇತರರು ಇದ್ದರು.
- ತಂಬಾಕು ಮಂಡಳಿ ರೈತರ ಹಿತಕ್ಕಾಗಿ ಬೆಳೆ ನಿಯಂತ್ರಣದ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು
- ರಾಜ್ಯದ ತಂಬಾಕಿನಲ್ಲಿ ಆಯಿಲ್ ನಿಕೋಟಿನ್ ಇರುವುದರಿಂದ ಹೆಚ್ಚಿನ ಬೆಲೆ ದೊರೆಯುವಂತೆ ಮಾಡಬೇಕು
ಮೈಸೂರು: ತಂಬಾಕು ಬೆಳೆಗಾರರ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಕಾಡಾ ಕಚೇರಿಯಲ್ಲಿರುವ ಕೃಷಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಕೇಂದ್ರ ಸರ್ಕಾರ, ತಂಬಾಕು ನಿಯಮಗಳಲ್ಲಿ ಪ್ರಮುಖ ಬದಲಾವಣೆ ತರಬೇಕಿದ್ದು, ತಂಬಾಕು ಮಂಡಳಿ ರೈತರ ಹಿತಕ್ಕಾಗಿ ಬೆಳೆ ನಿಯಂತ್ರಣದ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಆಂಧ್ರಪ್ರದೇಶದಲ್ಲಿ ಮಂಡಳಿ ನಿಗದಿಪಡಿಸಿರುವ ಮಿತಿಗಿಂತ ಹೆಚ್ಚು ತಂಬಾಕು ಬೆಳೆಯಲಾಗಿದೆ. ಕಂಪನಿಗಳು ಹೆಚ್ಚಿನ ಖರೀದಿ ನಡೆಸಿರುವುದರಿಂದ ಕರ್ನಾಟಕ ತಂಬಾಕು ಹರಾಜು ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ರಾಜ್ಯದಲ್ಲಿ ಅಧಿಕ ತಂಬಾಕು ಉತ್ಪಾದನೆಗೆ ಅವೈಜ್ಞಾನಿಕವಾಗಿ ದಂಡ ವಿಧಿಸಲಾಗುತ್ತಿದೆ. ಇದರಿಂದ ತಂಬಾಕು ಉತ್ಪಾದನೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ತಂಬಾಕು ಮಂಡಳಿ ಮತ್ತು ಸರ್ಕಾರ ಈ ರೀತಿ ಹೆಚ್ಚಿನ ಉತ್ಪಾದನೆ ಮಾಡುವುದನ್ನು ತಡೆಗಟ್ಟಲು ಕಠಿಣ ನಿಯಮ ರೂಪಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದ ಅಧಿಕೃತ ತಂಬಾಕು ಉತ್ಪಾದನೆ ಪ್ರಮಾಣಕ್ಕಿಂತ ಕಡಿಮೆ ಇದೆ. 2025-26ನೇ ಸಾಲಿನಲ್ಲಿ ಮಂಡಳಿ ಗರಿಷ್ಠ 100 ಮಿಲಿಯನ್ ಕೆ.ಜಿ ಬೆಳೆಯಲು ಅನುಮತಿ ನೀಡಿತ್ತು. ಆದರೆ ಮೇ, ಜೂನ್ ಮತ್ತು ಜುಲೈನಲ್ಲಿ ಸುರಿದ ಮಳೆಯಿಂದಾಗಿ 80ರಿಂದ 85 ಮಿಲಿಯನ್ ತಂಬಾಕು ಉತ್ಪಾದನೆಯಷ್ಟೇ ಸಾಧ್ಯವಾಗಲಿದೆ. ರಾಜ್ಯದ ತಂಬಾಕಿನಲ್ಲಿ ಆಯಿಲ್ ನಿಕೋಟಿನ್ ಇರುವುದರಿಂದ ಹೆಚ್ಚಿನ ಬೇಡಿಕೆಯಿಂದ, ಹೆಚ್ಚಿನ ಬೆಲೆ ಸಿಗುವಂತೆ ಸರ್ಕಾರ ಹಾಗೂ ಮಂಡಳಿ ಕ್ರಮವಹಿಸಲಿ ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಮುಖಂಡರಾದ ಪಿ.ಮರಂಕಯ್ಯ, ನಾಗನಹಳ್ಳಿ ವಿಜಯೇಂದ್ರ, ಹೊಸಕೋಟೆ ಬಸವರಾಜು, ಪ್ರಭಾಕರ್, ಚಂದ್ರಶೇಖರ್ ಚಿಕ್ಕನಹಳ್ಳಿ ರಾಘವೇಂದ್ರ ಇತರರು ಇದ್ದರು.