ಹುಣಸೂರು ನಗರದ ಹುಣಸೂರು ಕ್ಲಬ್ ಆಶ್ರಯದಲ್ಲಿ ಕಣ್ಣಿನ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು. ಕ್ಲಬ್ ಅಧ್ಯಕ್ಷ ಚರಮಣ್ಣ, ಕಾರ್ಯದರ್ಶಿ ಎಸ್.ಜಯರಾಂ ಇತರರಿದ್ದರು.
ಹುಣಸೂರು: ಹುಣಸೂರು ಕ್ಲಬ್, ಸದೃಢ ಚಾರಿಟಬಲ್ ಟ್ರಸ್ಟ್ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ 120 ಮಂದಿ ತಪಾಸಣೆಗೊಳಗಾದರು.
ನಗರದ ಹುಣಸೂರು ಕ್ಲಬ್ ಆವರಣದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 69 ಮಂದಿಗೆ ಶಸ್ತ್ರಚಿಕಿತ್ಸೆಗೆ ಕರೆದೊಯ್ಯಲಾಯಿತು. 91 ಮಂದಿಗೆ ಕನ್ನಡಕ ವಿತರಿಸಲಾಯಿತು. ಈ ವೇಳೆ ಮಾತನಾಡಿದ ಹುಣಸೂರು ಕ್ಲಬ್ ಅಧ್ಯಕ್ಷ ಚರಮಣ್ಣ, ನೇತ್ರದಾನ ಶ್ರೇಷ್ಠ ದಾನ, ಮನುಷ್ಯ ಆರೋಗ್ಯವಾಗಿರಬೇಕಾದರೆ ಉತ್ತಮ ಆಹಾರ, ಯೋಗ, ಧ್ಯಾನ ಹಾಗೂ ಇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಹಿಂದೆ ಜನರು ಕ್ರೀಡಾಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ ಈಗ ಕ್ರೀಡೆ ಬದಲು ಯುವಜನಾಂಗ ಮೊಬೈಲ್ ಹಾಗೂ ಟಿವಿ ವೀಕ್ಷಣೆಯಿಂದ ಕಣ್ಣಿನ ಆರೋಗ್ಯ ಕಳೆದುಕೊಳ್ಳುತ್ತಿದೆ ಎಂದು ಬೇಸರಿಸಿದರು.
ಶಿಬಿರದಲ್ಲಿ ಕ್ಲಬ್‌ನ ಗೌರವ ಕಾರ್ಯದರ್ಶಿಗಳಾದ ಎಸ್.ಜಯರಾಮ್, ಚಂದ್ರಶೇಖರ್, ಸದೃಢ ಚಾರಿಟಬಲ್ ಟ್ರಸ್ಟ್‌ನ ಮಂಜುನಾಥ್, ಕ್ಲಬ್‌ನ ನಿರ್ದೇಶಕರಾದ ನಟರಾಜು, ಎಚ್.ಆರ್.ವೆಂಕಟೇಶ್, ಸಿಬ್ಬಂದಿ ಶಿವಣ್ಣ, ಭುವನ್, ಪ್ರಕಾಶ್, ಮಲ್ಲೇಶ್, ಕಣ್ಣಿನ ಆಸ್ಪತ್ರೆಯಶಿಬಿರ ಸಂಯೋಜಕ ಶ್ರೀಕಂಠಮೂರ್ತಿ, ಡಾ.ಸುಷ್ಮಾ, ಡಾ.ಮಹಾಲಿಂಗಯ್ಯ, ಕ್ಷೇತ್ರಾಧಿಕಾರಿ ಮೋಹನ್ ಇತರರು ಇದ್ದರು.