ಬನ್ನೂರಿನಲ್ಲಿ ರೋಟರಿ ಸಂಸ್ಥೆ , ಕಾನ್‌ಸಿಂಗ್‌ಜೀ ರಾಜ್‌ಪುರೋಹಿತ್, ಶ್ರೀ ಗೌರಿದೇವಿ, ಲಯನ್ಸ್ ಕ್ಲಬ್ ಆಫ್ ಈರೋಡ್ ಕಾವೇರಿ ಟ್ರಸ್ಟ್, ಕೊಯಮತ್ತೂರು ಕಣ್ಣಿನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಕಣ್ಣಿನ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಡಾ.ಮಹೇಂದ್ರಸಿಂಗ್ ಕಾಳಪ್ಪ, ಸಂತೋಷಕುಮಾರಿ, ಕೆ.ರಾಜೇಶ್‌ಕುಮಾರ್, ವಿಜಯ್‌ಕುಮಾರ್ ಇದ್ದರು.
ಬನ್ನೂರು: ಅಂಧತ್ವದಲ್ಲಿ ಜೀವನ ಸಾಗಿಸುತ್ತಿರುವ ದೃಷ್ಟಿಹೀನರಿಗಾಗಿ ನಡೆಸುತ್ತಿರುವಂತ ಕಣ್ಣಿನ ಉಚಿತ ತಪಾಸಣಾ ಶಿಬಿರವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಎಂದು ರೋಟರಿ ಮಾಜಿ ಅಧ್ಯಕ್ಷ ಡಾ.ಮಹೇಂದ್ರಸಿಂಗ್ ಕಾಳಪ್ಪ ತಿಳಿಸಿದರು.
ಪಟ್ಟಣದ ರೋಟರಿ ಸಂಸ್ಥೆ , ಕಾನ್‌ಸಿಂಗ್‌ಜೀ ರಾಜ್‌ಪುರೋಹಿತ್, ಶ್ರೀ ಗೌರಿದೇವಿ , ಲಯನ್ಸ್ ಕ್ಲಬ್ ಆಫ್ ಈರೋಡ್ ಕಾವೇರಿ ಟ್ರಸ್ಟ್, ಕೊಯಮತ್ತೂರು ಕಣ್ಣಿನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ಕಣ್ಣಿನ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಕಣ್ಣಿನ ಪೊರೆ ಸಮಸ್ಯೆ ವಯಸ್ಕರಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತದೆ ಎಂದು ತಿಳಿದಿದ್ದರೆ ಅದು ತಪ್ಪು. ಮಕ್ಕಳಲ್ಲಿಯೂ ಪೊರೆ ಸಮಸ್ಯೆ ಕಾಡುವ ಸಾಧ್ಯವಿದೆ. ಕಣ್ಣಿನ ಪೊರೆ ಹೆಚ್ಚಾಗಿದ್ದರೆ ಕಣ್ಣಿನ ದೃಷ್ಟಿ ಮಾಂದ್ಯತೆಗೆ ಕಾರಣವಾಗಬಹುದು ಅಥವಾ ಸಂಪೂರ್ಣ ದೃಷ್ಟಿಯೇ ಇಲ್ಲದಂತಾಗಬಹುದು ಎಂದರು.
ಕೊಯಮತ್ತೂರು ಕಣ್ಣಿನ ಆಸ್ಪತ್ರೆಯ ವಿಜಯಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ದೃಷ್ಟಿಹೀನರ ಸಂಖ್ಯೆ ಅಧಿಕವಾಗಿದ್ದು, ಅವರಿಗೆ ಅನುಕೂಲವಾಗಬೇಕು ಎಂದು ಈ ಸೇವಾ ಕಾರ್ಯವನ್ನು ಮಾಡಲಾಗುತ್ತಿದೆ. ಕಣ್ಣಿನ ಪೊರೆ, ಗ್ಲಾಕೋಮ, ನೀರು ಸೋರುವಿಕೆ, ಕಣ್ಣಿನಲ್ಲಿ ಗೀಜು ಬರುವುದು, ವಾರೆ ಕಣ್ಣು, ರಾತ್ರಿ ಕುರುಡುತನ ಇತ್ಯಾದಿಗೆ ಚಿಕಿತ್ಸೆ ನೀಡಲಾಗುವುದು. ಕಣ್ಣಿನ ಪೊರೆ ಇರುವವರನ್ನು ಆಯ್ಕೆ ಮಾಡಿ, ಕೊಯಮತ್ತೂರು ಕಣ್ಣಿನ ಆಸ್ಪತ್ರೆಗೆ ಉಚಿತವಾಗಿ ಕರೆದುಕೊಂಡು ಹೋಗಿ, ಶಸ್ತ್ರಚಿಕಿತ್ಸೆ ಮಾಡಿಸಿ ವಾಪಸ್ ಕರೆತರಲಾಗುವುದು ಎಂದು ತಿಳಿಸಿದರು. ವಿವಿಧ ಗ್ರಾಮದಿಂದ ಸುಮಾರು 185ಕ್ಕೂ ಹೆಚ್ಚು ಶಿಬಿರಾರ್ಥಿಗಳು ಆಗಮಿಸಿ ಕಣ್ಣಿನ ತಪಾಸಣೆಗೆ ಮಾಡಿಸಿಕೊಂಡರು.
ಲಯನ್ ಕೆ.ರಾಜೇಶ್‌ಕುಮಾರ್, ವಿಜಯ್‌ಕುಮಾರ್, ವನ್ಯರಾಜ್‌ಪುರೋಹಿತ್, ವಿರಾಟ್‌ರಾಜ್ ಪುರೋಹಿತ್, ಸಂತೋಷ್‌ಕುಮಾರಿ, ಲಯನ್‌ಯಾಸೀನ್, ನಂಜುಂಡಸ್ವಾಮಿ, ಡಾ.ಸುಜಾತಾ, ಡಾ.ಸುಬ್ಬುಲಕ್ಷ್ಮೀ, ಡಾ.ಮುಸ್ಕಾನ್, ಮಂಜುಳಾ, ಲಕ್ಷ್ಮೀ ಇದ್ದರು.