ತಿ.ನರಸೀಪುರ ತಾಲೂಕಿನ ಕರೋಹಟ್ಟಿ ಗ್ರಾಮದಲ್ಲಿರುವ ಶ್ರೀ ಗುರುಮಲ್ಲೇಶ್ವರ ಮಠದಲ್ಲಿ ಭಾನುವಾರ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಕೆ. ಮಹೇಂದ್ರ ಸಿಂಗ್ ಕಾಳಪ್ಪ, ರಾಜಶೇಖರ, ಕೆ.ಎಂ. ಶಿವಮೂರ್ತಿ, ಕೆ.ಎನ್. ಆನಂದ್, ಗೌಡ್ರು ಮಾದಪ್ಪ ಇತರರಿದ್ದರು. 
ಮೈಸೂರು

ಕಣ್ಣಿನ ಉಚಿತ ತಪಾಸಣಾ ಶಿಬಿರ

ಎ. ಆರ್. ರಘುರಾಮ
ತಿ.ನರಸೀಪುರ : ತಾಲೂಕಿನ ಕರೋಹಟ್ಟಿ ಗ್ರಾಮದಲ್ಲಿರುವ ಶ್ರೀ ಗುರುಮಲ್ಲೇಶ್ವರ ಮಠದಲ್ಲಿ ಭಾನುವಾರ ಕಣ್ಣಿನ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಬನ್ನೂರಿನ ರೋಟರಿ ಸಂಸ್ಥೆ, ದಿ.ಕಾನ್ ಸಿಂಗ್ ರಾಜ್ ಪುರೋಹಿತ್ ಮತ್ತು ಗೌರಿದೇವಿ ಅವರ 18ನೇ ವರ್ಷದ ಸ್ಮರಣಾರ್ಥವಾಗಿ ರೋಟರಿ ಮಾಜಿ ಅಧ್ಯಕ್ಷ ಡಾ. ಕೆ.ಮಹೇಂದ್ರ ಸಿಂಗ್ ಕಾಳಪ್ಪ, ಮತ್ತು ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ ಸಂಯುಕ್ತ ಆಶ್ರಯ ಹಾಗೂ ಕರೋಹಟ್ಟಿ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ ಹಳ್ಳಿಗಾಡಿನ ನೂರಾರು ಮಂದಿ ಕಣ್ಣಿನ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡರು. 42 ಮಂದಿಯನ್ನು ನೇತ್ರ ಶಸ್ತ್ರಚಿಕಿತ್ಸೆಗೆ ಕೊಯಮತ್ತೂರಿಗೆ ಕರೆದೊಯ್ಯಲಾಯಿತು.
ಶಿಬಿರದ ಆಯೋಜಕ ಕೆ.ಮಹೇಂದ್ರ ಸಿಂಗ್ ಕಾಳಪ್ಪ ಮಾತನಾಡಿ, ಪ್ರಸ್ತುತ ದಿನದಲ್ಲಿ ಆರೋಗ್ಯ ಚಿಕಿತ್ಸೆ ವೆಚ್ಚ ದುಬಾರಿಯಾಗಿದೆ. ಗ್ರಾಮೀಣ ಪ್ರದೇಶದ ಬಡ ಜನತೆಗೆ ಅನುಕೂಲವಾಗಲಿ ಎಂದು ನಮ್ಮ ತಂದೆ ತಾಯಿ ಹೆಸರಿನಲ್ಲಿ 18 ವರ್ಷಗಳಿಂದ ಉಚಿತ ಕಣ್ಣಿನ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇನೆ. ಶಿಬಿರದ ಸದುಪಯೋಗವನ್ನು ಅನೇಕ ಜನರು ಪಡೆದುಕೊಂಡಿದ್ದಾರೆ. ಜೂ.13ರ ಎರಡನೇ ಶನಿವಾರ ಬನ್ನೂರಿನ ರೋಟರಿ ಶಾಲೆ ಆವರಣದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ವೈದ್ಯರಾದ ಡಾ.ಶಿವಾನಿ ನಮಲ, ಡಾ.ಕಾಜೊಲ್ ಪಾಟೀಲ್, ಡಾ.ರೋಷಿಣಿ, ಸಂಯೋಜಕ ಡಾ.ವಿಜಯ್ ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿ ಜನರ ಕಣ್ಣಿನ ಆರೋಗ್ಯ ತಪಾಸಣೆ ನಡೆಸಿದರು. ಇದೇ ವೇಳೆ ಹಲವು ವರ್ಷಗಳಿಂದ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸುತ್ತಿರುವ ಕೆ.ಮಹೇಂದ್ರ ಸಿಂಗ್ ಕಾಳಪ್ಪ ಅವರನ್ನ ಕರೋಹಟ್ಟಿ ಗ್ರಾಮಸ್ಥರು ಸನ್ಮಾನಿಸಿದರು.
ಕೆ.ಎಂ. ಶಿವಮೂರ್ತಿ, ಕೆ.ಎನ್. ಆನಂದ್, ಗೌಡ್ರು ಮಾದಪ್ಪ, ರಾಜಶೇಖರ್, ನಂಜುಂಡಪ್ಪ, ಚಂದ್ರು ಮೂಗೂರು, ಶಂಕರ್ ನಾಗ್, ರಾಜೇಶ್, ಮಹೇಂದ್ರ, ರಮೇಶ್, ಹರ್ಷವರ್ಧನ್, ಜೀವನ್, ಬಸವರಾಜು, ಪವನ್, ಉಮೇಶ್, ಮಲ್ಲೇಶ್, ಮಲ್ಲಿಕಾರ್ಜುನ ಸ್ವಾಮಿ, ಶಂಭು ನಂಜುಂಡಸ್ವಾಮಿ, ಪ್ರಭುಸ್ವಾಮಿ, ಪ್ರಕಾಶ್ ಗ್ರಾನೈಟ್ ಸೇರಿದಂತೆ ಇತರರಿದ್ದರು.