ಬನ್ನೂರಿನಲ್ಲಿ ರೋಟರಿ ಸಂಸ್ಥೆ, ಕಾನ್‌ಸಿಂಗ್‌ಜೀ ರಾಜ್‌ಪುರೋಹಿತ್, ಶ್ರೀ ಗೌರಿದೇವಿ , ಲಯನ್ಸ್ ಕ್ಲಬ್ ಆಫ್ ಈರೋಡ್ ಕಾವೇರಿ ಟ್ರಸ್ಟ್, ಕೊಯಮತ್ತೂರು ಕಣ್ಣಿನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮುಗಿಸಿಕೊಂಡು ಮಂಗಳವಾರ ತವರಿಗೆ ಮರಳಿದ ಶಿಬಿರಾರ್ಥಿಗಳಿಗೆ ಕಾಳಪ್ಪ ಕಣ್ಣಿನ ಕಳಜಿ ಕುರಿತಂತೆ ತಪಾಸಣೆಯ ಮಾಹಿತಿಯನ್ನು ನೀಡಿದರು. ಯಾಸೀನ್, ವನ್ಯರಾಜ್‌ಪುರೋಹಿತ್, ವಿರಾಟ್‌ರಾಜ್‌ಪುರೋಹಿತ್, ಸಂತೋಷ್‌ಕುಮಾರಿ, ಹಂಸ ಸೇರಿದಂತೆ ಹಲವರು ಉಪಸ್ಥಿತರಿದ್ದರು. 
ಮೈಸೂರು

ಯಶಸ್ವಿಯಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮುಗಿಸಿ ವಾಪಸ್ಸಾದ ಶಿಬಿರಾರ್ಥಿಗಳು

ಎ. ಆರ್. ರಘುರಾಮ
ಬನ್ನೂರು : ಪಟ್ಟಣದ ರೋಟರಿ ಸಂಸ್ಥೆ, ಕಾನ್‌ಸಿಂಗ್‌ಜೀ ರಾಜ್‌ಪುರೋಹಿತ್, ಶ್ರೀ ಗೌರಿದೇವಿ , ಲಯನ್ಸ್ ಕ್ಲಬ್ ಆಫ್ ಈರೋಡ್ ಕಾವೇರಿ ಟ್ರಸ್ಟ್, ಕೊಯಮತ್ತೂರು ಕಣ್ಣಿನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದ ಶಿಬಿರಾರ್ಥಿಗಳು ಯಶಸ್ವಿಯಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಮಂಗಳವಾರ ತವರಿಗೆ ವಾಪಸ್ಸಾದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿಬಿರಾರ್ಥಿಗಳು, ಕಣ್ಣು ಮಾನವನ ಪ್ರಮುಖವಾದ ಅಂಗವಾಗಿದ್ದು, ಕಣ್ಣಿಲ್ಲದೇ ಜೀವನ ಕಷ್ಟ. ಕಣ್ಣು ಕಾಣದೆ ಹಲವಾರು ವರ್ಷಗಳಿಂದ ಕತ್ತಲೆಯಲ್ಲಿಯೇ ಜೀವನ ನಡೆಸಿ, ನರಕದ ದರ್ಶನವಾದಂತೆ ಅಗಿತ್ತು. ಅದರೆ ಕಾಳಪ್ಪ ನಡೆಸುತ್ತಿರುವ ಉಚಿತ ಕಣ್ಣಿನ ತಪಾಸಣಾ ಶಿಬಿರದಿಂದ ನಮಗೆ ಸಾಕಷ್ಟು ಅನುಕೂಲವಾಗಿದೆ ಎಂದು ಹೇಳದರು. ಕೊಯಮತ್ತೂರು ಕಣ್ಣಿನ ಆಸ್ಪತ್ರೆಯಲ್ಲಿ ನಮ್ಮ ಕಣ್ಣನ್ನು ವೈದ್ಯರಿಗೆ ತೋರಿಸಿ, ನಮ್ಮ ಆರೋಗ್ಯವನ್ನು ಪರೀಕ್ಷಿಸಿ, ಪೊರೆಯಿಂದ ಅವೃತ್ತವಾಗಿದ್ದ ಕಣ್ಣನ್ನು ಶಸ್ತ್ರ ಚಿಕಿತ್ಸೆ ಮಾಡಿಸಿ, ಕಣ್ಣಿನ ಅಂದತ್ವವನ್ನು ನಿವಾರಿಸಿದ್ದಾರೆ ಎಂದು ತಿಳಿಸಿದರು. ಶಿಬಿರದಿಂದ ನಾವು ನಮ್ಮವರ ಯಾರ ಸಹಾಯವು ಇಲ್ಲದೆ ಒಬ್ಬರೆ ಹೋಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಬಂದಿದ್ದೇವೆ ಎಂದು ಸಂತಸದಿಂದ ತಿಳಿಸಿದರು. ಇಂತಹ ವ್ಯವಸ್ಥೆ ಆಗದಿದ್ದಲ್ಲಿ ನಾವು ಕತ್ತಲೆಯಲ್ಲಿಯೇ ಜೀವನ ಸಾಗಿಸಬೇಕಿತ್ತು ನೋವಿನಿಂದ ನುಡಿದರು. ನಂತರ ಮಾತನಾಡಿದ ಡಾ.ಮಹೇಂದ್ರಸಿಂಗ್‌ಕಾಳಪ್ಪ , ಗ್ರಾಮೀಣ ಭಾಗದಲ್ಲಿ ಕಣ್ಣಿನ ಸಮಸ್ಯೆ ಇರುವವರು ನಗರ ಪ್ರದೇಶದಲ್ಲಿ ಹೋಗಿ ಚಿಕಿತ್ಸೆ ಪಡೆಯಲಾರದೆ ತುಂಬಾ ಕಷ್ಟದಲ್ಲಿ ಜೀವನ ಕಳೆಯುತ್ತಾರೆ ಎನ್ನುವುದನ್ನು ಮನಗಂಡು ಗ್ರಾಮೀಣ ಭಾಗದ ಜನರಿಗೆ ಈ ಶಿಬಿರ ಸದುಪಯೋಗವಾಗಬೇಕು ಎಂದು ಉಚಿತ ಕಣ್ಣಿನ ತಪಾಸಣೆಯನ್ನು ಪ್ರತಿ ತಿಂಗಳ 2ನೇ ಶನಿವಾರ ನಿರಂತರವಾಗಿ ಹಮ್ಮಿಕೊಳ್ಳಲಾಗಿದೆ ಎಂದರು. ಯಾರು ಹುಟ್ಟುತ್ತಾ ಕುರುಡರಲ್ಲ, ನಂತರ ದಿನದಲ್ಲಿ ಜೀವನದ ಪರಿಸ್ಥಿತಿಯಿಂದ ಆಗಿರುವಂತ ಸಮಸ್ಯೆಯನ್ನು ನಿವಾರಿಸುವಂತ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು. ಸುತ್ತಮುತ್ತಲಿನ ಎಲ್ಲಾ ಗ್ರಾಮಸ್ಥರು ಇದರ ಸದ್ಬಳಕೆ ಮಾಡಿಕೊಂಡು, ವೈದ್ಯರು ಹೇಳಿದ ದಿನಾಂಕದಂದು ಮತ್ತೆ ಇದೇ ಸ್ಥಳಕ್ಕೆ ಬಂದು ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಿ ಎಂದು ಹೇಳಿದರು. ಲಯನ್ ರಾಜೇಶ್‌ಕುಮಾರ್, ಯಾಸೀನ್, ವನ್ಯರಾಜ್‌ಪುರೋಹಿತ್, ವಿರಾಟ್‌ರಾಜ್‌ಪುರೋಹಿತ್, ಸಂತೋಷ್‌ಕುಮಾರಿ, ಮೂರ್ತಿ, ಹಂಸ ಸೇರಿದಂತೆ ಹಲವರು ಉಪಸ್ಥಿತರಿದ್ದರು.