ರಾವಂದೂರಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ತೆರೆಯಲಾದ ಪರೀಕ್ಷಾ ಕೇಂದ್ರಕ್ಕೆ ಮಗುವಿನೊಂದಿಗೆ ಆಗಮಿಸಿದ್ದ ಮಹಿಳೆ.
ರಾವಂದೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೊದಲ ದಿನವಾದ ಬುಧವಾರ ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಉತ್ಸಾಹದಿಂದ ಆಗಮಿಸಿ ಸಂತೋಷದಿಂದ ಪರೀಕ್ಷೆ ಬರೆದು ತೆರಳಿದರು.
ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ತೆರೆಯಲಾದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಬೆಳಗ್ಗೆ 7.30ಕ್ಕೆ ಆಗಮಿಸಿದ ಮಕ್ಕಳು ನೋಂದಣಿ ಸಂಖ್ಯೆ ವೀಕ್ಷಿಸಿ ಸ್ಥಳವನ್ನು ಖಚಿತಪಡಿಸಿಕೊಂಡರು. ನಂತರ ಕನ್ನಡ ವಿಷಯವನ್ನು ಸಂತೋಷದಿಂದ ಬರೆದರು. ಅಲ್ಲದೇ, ಕೆ.ಆರ್.ನಗರ ತಾಲೂಕಿನ ಅಡಗೂರು ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಸೇರಿದಂತೆ ಇತರೆಡೆಯಿಂದ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅಲ್ಲದೆ, ಕಣಗಾಲಿನಿಂದ ಮಹಿಳೆಯೊಬ್ಬರು ಪರೀಕ್ಷೆ ಬರೆಯಲೆಂದು ಮಗುವನ್ನು ಹೊತ್ತುಕೊಂಡು ಪರೀಕ್ಷಾ ಕೇಂದ್ರಕ್ಕೆ ಬಂದಿದ್ದು ಗಮನ ಸೆಳೆಯಿತು.