ಇವಿ ಚಾರ್ಜಿಂಗ್  
ಮೈಸೂರು

ಫಾಸ್ಟ್ ಚಾರ್ಜಿಂಗ್ ಸ್ಟೇಷನ್ ಸ್ಥಾಪನೆ ಮೂಲಕ ಇವಿಗೆ ಬಲ

ಭಾರತದ ಅತ್ಯಂತ ಪ್ರಮುಖ ಇವಿ ಚಾರ್ಜಿಂಗ್ ನೆಟ್‌ ವರ್ಕ್‌ ಗಳಲ್ಲಿ ಒಂದಾದ ಟಾಟಾ ಪವರ್, ಮೈಸೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿ (ನ್ಯಾಷನಲ್ ಹೈವೇ 275) ಯಲ್ಲಿರುವ ಬನ್ನಿಕುಪ್ಪೆಯ ಶ್ರೀ ಕೃಷ್ಣ ಕೆಫೆಯಲ್ಲಿ ನೂತನ 60 kw ಡಿಸಿ ಫಾಸ್ಟ್ ಚಾರ್ಜಿಂಗ್ ಸ್ಟೇಷನ್ ಅನ್ನು ಸ್ಥಾಪನೆ ಮಾಡಿರುವುದಾಗಿ ಇಂದು ಘೋಷಿಸಿದೆ.

ಬೆಂಗಳೂರು ಮತ್ತು ಮೈಸೂರನ್ನು ಕೊಡಗಿನ ಜೊತೆ ಕನೆಕ್ಟ್ ಮಾಡುವ ಪ್ರಮುಖ ರಸ್ತೆಯಾದ ಎನ್ಎಚ್-275ರ ಪ್ರಮುಖ ಲೊಕೇಶನ್‌ನಲ್ಲಿರುವ ಈ ಹೊಸ ಚಾರ್ಜಿಂಗ್ ಸ್ಟೇಷನ್, ಕರ್ನಾಟಕದ ಅತ್ಯಂತ ಜನನಿಬಿಡ ಪ್ರವಾಸಿ ರಸ್ತೆಗಳಲ್ಲಿ ಒಂದಾದ ಈ ಮಾರ್ಗದಲ್ಲಿ ಇವಿ ವ್ಯವಸ್ಥೆಯನ್ನು ಬಲಪಡಿಸಲಿದೆ. ಕೊಡಗಿನ ಕಡೆಗೆ ಸಾಗಿ ಹೋಗುವ ಇವಿ ಬಳಕೆದಾರರಿಗೆ ಈ ಸ್ಟೇಷನ್ ಅನುಕೂಲಕರವಾದ ಆದ ಹೈ-ಸ್ಪೀಡ್ ಚಾರ್ಜಿಂಗ್ ವ್ಯವಸ್ಥೆ ಒದಗಿಸಲಿದ್ದು, ಕೊಡಗಿನ ಬೆಟ್ಟ ಗುಡ್ಡ ಪ್ರದೇಶಗಳಿಗೆ ಪ್ರಯಾಣ ಮುಂದುವರಿಸುವ ಮುನ್ನ ರಿಚಾರ್ಜ್ ಮಾಡಿಕೊಳ್ಳಲು ಹೆಲ್ಪ್ ಮಾಡುತ್ತದೆ.
ಪ್ರಮುಖ ಮುಖ್ಯಾಂಶಗಳು

ಅತ್ಯಂತ ಪ್ರಮುಖ ಹೈವೇ ಲೊಕೇಶನ್:

ಹುಣಸೂರಿನ ಬನ್ನಿಕುಪ್ಪೆಯಲ್ಲಿರುವ ಎನ್ಎಚ್-275 ರಲ್ಲಿ ಸ್ಥಾಪಿತವಾಗಿರುವ ಈ ಚಾರ್ಜಿಂಗ್ ಸ್ಟೇಷನ್, ಬೆಂಗಳೂರು, ಮೈಸೂರು ಮತ್ತು ಕೊಡಗಿನ ನಡುವೆ ಪ್ರಯಾಣ ಮಾಡುವ ಇವಿ ಬಳಕೆದಾರರಿಗೆ ಒಂದು ಅನುಕೂಲಕರವಾದ ಸ್ಟಾಪ್ ಆಗಿ ನೆರವಾಗಲಿದೆ. ಇದರ ಲೊಕೇಶನ್ ಕರ್ನಾಟಕದ ಪ್ರಮುಖ ಪ್ರವಾಸೋದ್ಯಮ ಮತ್ತು ಕಮರ್ಷಿಯಲ್ ರಸ್ತೆಯಲ್ಲಿ ಚಾರ್ಜಿಂಗ್ ವ್ಯವಸ್ಥೆಯನ್ನು ಉತ್ತಮಗೊಳಿಸಲು ನೆರವಾಗುತ್ತದೆ.
ಹೈ-ಸ್ಪೀಡ್ ಚಾರ್ಜಿಂಗ್:
ಈ ಸ್ಟೇಷನ್‌ ನಲ್ಲಿ 60 kw ಡಿಸಿ ಡ್ಯುಯಲ್-ಗನ್ ಸಿಸಿಎಸ್ 2 ಚಾರ್ಜರ್ ಅಳವಡಿಸಲಾಗಿದ್ದು, ಅದಕ್ಕೆ ಹೊಂದುವ ಎಲೆಕ್ಟ್ರಿಕ್ ವೆಹಿಕಲ್‌ ಗಳು ಸರಿಸುಮಾರು 30 ನಿಮಿಷದಲ್ಲಿ 20% ನಿಂದ 80% ವರೆಗೆ ಚಾರ್ಜ್ ಮಾಡುವ ಕೆಪಾಸಿಟಿ ಹೊಂದಿದೆ. ಇದು ಸುದೀರ್ಘ ದೂರದ ಪ್ರಯಾಣ ಸಮಯದಲ್ಲಿ ಚಾರ್ಜಿಂಗ್ ಟೈಮ್ ಅನ್ನು ಕಡಿಮೆ ಮಾಡುತ್ತದೆ.

ಅನುಕೂಲಕರ ಚಾರ್ಜಿಂಗ್ ಅನುಭವ:

ಶ್ರೀ ಕೃಷ್ಣ ಕೆಫೆಯ ಬಳಿ ವ್ಯವಸ್ಥೆ ಮಾಡಿರುವ ಈ ಚಾರ್ಜಿಂಗ್ ಸ್ಟೇಷನ್, ಪ್ರಯಾಣಿಕರಿಗೆ ತಮ್ಮ ವಾಹನಗಳು ರೀಚಾರ್ಜ್ ಆಗುವ ಸಮಯದಲ್ಲಿ ಆಹಾರ, ರಿಫ್ರೆಶ್‌ ಮೆಂಟ್ಸ್ ಮತ್ತು ಇತರ ಅನುಕೂಲಕರ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಸಣ್ಣ ಬ್ರೇಕ್ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

ಸೊಗಸಾದ ಡಿಜಿಟಲ್ ವ್ಯವಸ್ಥೆ:

ಈ ಚಾರ್ಜರ್ ಟಾಟಾ ಪವರ್ ಇಝಡ್ ಚಾರ್ಜ್ ಇಕೋಸಿಸ್ಟಮ್ ಜೊತೆ ಇಂಟಿಗ್ರೇಟ್ ಆಗಿದ್ದು, ಟಾಟಾ ಪವರ್ ಇಝಡ್ ಚಾರ್ಜ್ ಮೊಬೈಲ್ ಅಪ್ಲಿಕೇಷನ್ ಅಥವಾ ಆರ್.ಎಫ್.ಐ.ಡಿ ಕಾರ್ಡ್ಸ್ ಮೂಲಕ ಯೂಸರ್ಸ್ ಸ್ಟೇಷನ್ ಪತ್ತೆ ಮಾಡಲು, ಚಾರ್ಜರ್ ಲಭ್ಯತೆ ಹುಡುಕಾಟ ಮಾಡಲು, ಚಾರ್ಜಿಂಗ್ ಅನ್ನು ಸುಲಭವಾಗಿ ಮಾಡಲು ಮತ್ತು ಕ್ಯಾಶ್‌ ಲೆಸ್ ಪಾವತಿ ಮಾಡಲು ಅನುಕೂಲ ಮಾಡುತ್ತದೆ.
ಪರಿಸರ ಸ್ನೇಹಿ ಸಂಚಾರಕ್ಕೆ ಬೆಂಬಲ:
ಈ ಹೊಸ ಚಾರ್ಜಿಂಗ್ ಕೇಂದ್ರದ ಸೇರ್ಪಡೆಯು ಬೆಂಗಳೂರು– ಮೈಸೂರು –ಕೊಡಗು ಮಾರ್ಗದಲ್ಲಿ ಎಲೆಕ್ಟ್ರಿಕ್ ವಾಹನ ಜಾಲವನ್ನು ಮತ್ತಷ್ಟು ಗಟ್ಟಿಗಳಿಸುತ್ತದೆ. ಇದು ಪ್ರಮುಖ ಪ್ರವಾಸಿ ತಾಣಕ್ಕೆ ತೆರಳುವ ವಾಹನ ಸವಾರರಿಗೆ ಚಾರ್ಜಿಂಗ್ ಸೌಲಭ್ಯವನ್ನು ಸುಲಭಗೊಳಿಸುವುದರ ಜೊತೆಗೆ, ಬೃಹತ್ ಮಟ್ಟದಲ್ಲಿ ವಿದ್ಯುತ್ ವಾಹನಗಳ ಬಳಕೆಗೆ ಪ್ರೋತ್ಸಾಹ ನೀಡುತ್ತದೆ.
ದಕ್ಷಿಣ ಭಾರತದಾದ್ಯಂತ ಪ್ರಮುಖ ಆರ್ಥಿಕ ಮತ್ತು ಪ್ರವಾಸಿ ಮಾರ್ಗಗಳಲ್ಲಿ ಹೆಚ್ಚಿನ ಸಾಮರ್ಥ್ಯದ ಹಸಿರು ಪಥಗಳನ್ನು (ಗ್ರೀನ್ ಕಾರಿಡಾರ್) ಹೆಚ್ಚಿಸುವ ಟಾಟಾ ಪವರ್‌ ನ ಬದ್ಧತೆಯನ್ನು ಈ ಹೆಜ್ಜೆ ಎತ್ತಿಹಿಡಿಯುತ್ತದೆ. ದೇಶದಾದ್ಯಂತ ಜನರ ಜೀವನ ಮತ್ತು ಸಮುದಾಯಗಳನ್ನು ರೂಪಿಸುವಲ್ಲಿ ಇಂಧನ ವಹಿಸುವ ಪರಿವರ್ತನಾತ್ಮಕ ಪಾತ್ರವನ್ನು ಜೀವಂತಗೊಳಿಸುವ ಸಂಸ್ಥೆಯ ಉದ್ದೇಶಪೂರ್ವಕ ಪಯಣದಲ್ಲಿ ಇದು ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ.