ತಿ.ನರಸೀಪುರ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಏಜೆಂಟರ ಸಂಘದಿಂದ ಕನ್ನಡ ರಾಜ್ಯೋತ್ಸವವನ್ನು ಆಯೋಜಿಸಲಾಗಿತ್ತು. ಶ್ರೀನಿವಾಸ್, ಕೆ.ಎನ್. ಪ್ರಭುಸ್ವಾಮಿ, ಪಿ. ಸ್ವಾಮಿನಾಥನ್, ಎ.ಜೆ.ವೆಂಕಟೇಶ್, ಬಿ.ಮಂಟೇಲಿಂಗಪ್ಪ ಇತರರು ಇದ್ದರು. 
ಮೈಸೂರು

ಪ್ರತಿಯೊಬ್ಬರಿಗೂ ನಾಡು,ನುಡಿ,ಭಾಷೆ ಬಗ್ಗೆ ಅಭಿಮಾನವಿರಲಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎನ್.ಪ್ರಭುಸ್ವಾಮಿ
ತಿ.ನರಸೀಪುರ: ಪ್ರತಿಯೊಬ್ಬರು ನಾಡು, ನುಡಿ ಬಗ್ಗೆ ಅಭಿಮಾನ ಹೊಂದಿದಾಗ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎನ್.ಪ್ರಭುಸ್ವಾಮಿ ಹೇಳಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಏಜೆಂಟರ ಸಂಘದಿಂದ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗಣ್ಯರೊಂದಿಗೆ ದ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕರ್ನಾಟಕ ಹಲವು ವೈವಿಧ್ಯತೆಗಳ ತವರೂರಾಗಿದ್ದು. ಪರಭಾಷೆ ಮೋಹಕ್ಕೆ ಒಳಗಾಗದೆ ನಮ್ಮ ಭಾಷೆ ಉಳಿವಿಗೆ ಮುಂದಾಗುವ ಮೂಲಕ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು.
ಸಂಘದ ಅಧ್ಯಕ್ಷ ತಿರುಮಕೂಡಲು ಶ್ರೀನಿವಾಸ್ ಮಾತನಾಡಿ, ಈ ಹಿಂದೆ ಅಧ್ಯಕ್ಷರಾಗಿದ್ದ ದಿವಂಗತ ಪಿ.ಪುಟ್ಟರಾಜು ಅವರು ಆರಂಭಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಪ್ರತಿ ವರ್ಷ ನಡೆಸಿಕೊಂಡು ಬರುತ್ತಿದ್ದೇವೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಮ್ಮ ಸಂಘಕ್ಕೆ ರೂಪು ರೇಷೆಗಳನ್ನು ಸಿದ್ಧಪಡಿಸಿಕೊಂಡು ಸಂಘದ ಬೆಳವಣಿಗೆಗೆ ಮುನ್ನಡಿ ಇಟ್ಟಿದ್ದೇವೆ.ಕನ್ನಡ ಭಾಷೆಗೆ ಎಲ್ಲರೂ ಗೌರವ ನೀಡಬೇಕು.ಕನ್ನಡ ಭಾಷೆ ನಮ್ಮ ಉಸಿರಾಗಬೇಕು.ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಮಾತೃಭಾಷೆಯನ್ನು ಪ್ರೀತಿಸಿ,ಗೌರವಿಸುವ ಕೆಲಸ ಮಾಡಬೇಕು ಎಂದರು.
ಸಂಘದ ಗೌರವಾಧ್ಯಕ್ಷ ಹೋಟೆಲ್ ರಾಜಣ್ಣ, ಒಕ್ಕಲಿಗ ಮುಖಂಡ ಪಿ.ಸ್ವಾಮಿನಾಥನ್, ಗ್ರಾ.ಪಂ.ಮಾಜಿ ಅಧ್ಯಕ್ಷ ಎ.ಜೆ.ವೆಂಕಟೇಶ್, ಕಗ್ಗಲೀಪುರ ರಾಜಣ್ಣ, ಶೃಂಗಾರ್ ಹೋಟೆಲ್ ಉಮೇಶ್, ಬಾರ್ ರಾಜು, ಸೋಮನಾಥಪುರ ಗಣೇಶ್, ಗುತ್ತಿಗೆದಾರ ಬಿ.ಮಂಟೇಲಿಂಗಪ್ಪ, ನಂದಕುಮಾರ್, ಶಿವನಂಜಪ್ಪ, ಬಸ್ ಏಜೆಂಟರ ಸಂಘದ ಉಪಾಧ್ಯಕ್ಷ ಕೆ.ಕುಮಾರ್, ಕಾರ್ಯದರ್ಶಿ ರಾಜಣ್ಣ, ಖಜಾಂಚಿ ನಾಗಲಿಂಗು, ನಿರ್ದೇಶಕರಾದ ಜೆ.ರಮೇಶ್, ಕೆ.ಶಂಕರ್, ನಾಗರಾಜು, ಟಿ.ಸಿ.ಮಹದೇವಪ್ಪ, ಶೇಷಾದ್ರಿ, ಗಿರೀಶ್, ಹನುಮಂತ, ಮಾಧು, ಚೇತು, ಸುರೇಂದ್ರ, ಅಶೋಕ್ ಹಾಗೂ ಇತರರು ಇದ್ದರು.