ದ ಸೊರೆಂಟೊ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ವೆನ್ ಸೈನ್ಸ್ ಮೀಟ್ಸ್ ಸೋಲ್’ ಕೃತಿ ಬಿಡುಗಡೆ ಮಾಡಲಾಯಿತು.ಡಾ.ವಿಪುಲ್ ಮಂಕಡ್, ಪ್ರೊ.ನಳಿನಿ ಚಂದರ್, ಶುಭಾ ಸಂಜಯ್ ಅರಸ್, ಡಾ.ಉಷಾ ಶ್ರೀನಾಥ್, ಭಾಸ್ಕರ್ ಕಳಲೆ ಇದ್ದರು. 
ಮೈಸೂರು

ಜಾತಿ ವ್ಯವಸ್ಥೆಯಿಂದ ಸಮಾನತೆ ಗೌಣ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ವಿಜ್ಞಾನ ಲೇಖಕ ಡಾ.ವಿಪುಲ್ ಮಂಕಡ್ ಕಳವಳ
  • ಜನಾಂಗೀಯವಾದವಲ್ಲದೆ, ರಾಷ್ಟ್ರೀಯತೆ, ಧಾರ್ಮಿಕತೆ ಹೆಸರಿನಲ್ಲಿ ತಾರತಮ್ಯ ತೀವ್ರ
  • ಪ್ರತಿಯೊಬ್ಬರೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಮನುಷ್ಯರಾಗಿ
ಮೈಸೂರು: ಜಾತಿ ವ್ಯವಸ್ಥೆ ಶುದ್ಧತೆ ಹಾಗೂ ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತದೆ. ಸಮಾನತೆ ಆಲೋಚನೆಯನ್ನೇ ಗೌಣ ಮಾಡುತ್ತದೆ ಎಂದು ವಿಜ್ಞಾನ ಲೇಖಕ ಡಾ.ವಿಪುಲ್ ಮಂಕಡ್ ಕಳವಳ ವ್ಯಕ್ತಪಡಿಸಿದರು.
ಮೈಸೂರು ಬುಕ್ ಕ್ಲಬ್ಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ವಾಣಿವಿಲಾಸ ಮೊಹಲ್ಲಾದ ದ ಸೊರೆಂಟೊ ಸಭಾಂಗಣದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ತಮ್ಮ ಕೃತಿ ‘ವೆನ್ ಸೈನ್ಸ್ ಮೀಟ್ಸ್ ಸೋಲ್’ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಮೆರಿಕದಲ್ಲೂ ಅಸಮಾನತೆಯಿದೆ. ಅಲ್ಲಿ ಜನಾಂಗೀಯವಾದವಲ್ಲದೆ, ರಾಷ್ಟ್ರೀಯತೆ, ಧಾರ್ಮಿಕತೆ ಹೆಸರಿನಲ್ಲಿ ತಾರತಮ್ಯ ತೀವ್ರವಾಗಿದೆ. ಭಾರತದಲ್ಲಿ ಉತ್ತರ-ದಕ್ಷಿಣ, ಮೇಲು-ಕೀಳು, ಜಾತಿ-ವರ್ಗ ಭೇದ-ಭಾವ ಹೆಚ್ಚಾಗಿ ರಾರಾಜಿಸುತ್ತಿದೆ. ಮಾನವೀಯ ಮನಸ್ಸಿನ ವ್ಯಕ್ತಿಗಳು ಇದನ್ನೆಲ್ಲ ಎದುರಿಸಬೇಕು. ಸಹಿಸಿಕೊಳ್ಳಬೇಕಿದೆ ಎಂದರು.
ರಾಮಾಯಣ, ಮಹಾಭಾರತಗಳೂ ಎಲ್ಲರೂ ಒಂದೇ ಎಂದು ಹೇಳುತ್ತವೆ. ಬೆಸ್ತ ಸಮುದಾಯದ ವ್ಯಾಸ, ಬೇಡ ಸಮುದಾಯದ ವಾಲ್ಮೀಕಿ ಮಹಾಕೃತಿ ರಚಿಸಿದ್ದರು. ಜ್ಞಾನ, ಸೃಜನಶೀಲತೆಯು ಮೇಲ್ವರ್ಗದವರಿಂದಲೇ ಬಂದಿಲ್ಲ. ಪ್ರತಿಯೊಬ್ಬರೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಮನುಷ್ಯರಾಗಿ ಬದುಕಬೇಕಿದೆ ಎಂದರು.
ಪುರುಷ -ಮಹಿಳೆ, ಬಿಳಿಯ-ಕರಿಯ, ಮೇಲು-ಕೀಳು, ಶ್ರೀಮಂತ-ಬಡವ ಸೇರಿದಂತೆ ನಾವು ಹಾಕಿಕೊಂಡಿರುವ ಬಂಧನದಿಂದ ಹೊರಬರಬೇಕು. ಸಂತೋಷ, ಕಾರುಣ್ಯವನ್ನು ಜನರಿಗೆ ಹಂಚಬೇಕಿದೆ. ಮನುಷ್ಯತ್ವದ ಪಾಲನೆಯಲ್ಲೇ ನಿಜ ಆನಂದ ದೊರೆಯುತ್ತದೆ ಎಂದರು.
ಲೇಖಕಿ ಪ್ರೊ.ನಳಿನಿ ಚಂದರ್ ಸಂವಾದ ನಡೆಸಿಕೊಟ್ಟರು. ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷೆ ಶುಭಾ ಸಂಜಯ್ ಅರಸ್, ಸದಸ್ಯೆ ಡಾ.ಉಷಾ ಶ್ರೀನಾಥ್, ಇಂಡಸ್ ಉದ್ಯಮಿಗಳ ಸಂಸ್ಥೆ(ಟಿಐಇ)ಯ ಮೈಸೂರು ವಿಭಾಗದ ಮುಖ್ಯಸ್ಥ ಭಾಸ್ಕರ್ ಕಳಲೆ ಇದ್ದರು.