ಬೆಟ್ಟದತುಂಗ ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಕೇಂದ್ರದ ವತಿಯಿಂದ ಆಯೋಜಿಸಿದ ಡೆಂಘೆ ಜಾಗೃತಿ ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಕ ಎಚ್.ಎಸ್ ರವಿ ಮಾತನಾಡಿದರು. ಮಮತಾ, ಗಿರಿಜಾ, ವಿ.ಮೋಹನಕುಮಾರ್ ಇತರರಿದ್ದರು. 
ಮೈಸೂರು

ಡೆಂಘೆ ತಡೆಗೆ ಪರಿಸರ ಸ್ವಚ್ಛತೆ ಅಗತ್ಯ

ಟ್ಟದಪುರ: ಬೆಪರಿಸರವನ್ನು ಸ್ವಚ್ಛವಾಗಿಡುವುದು ಡೆಂಘೆ ನಿಯಂತ್ರಣಕ್ಕೆ ಅತ್ಯಂತ ಅಗತ್ಯ ಎಂದು ಬೆಟ್ಟದತುಂಗ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಎಚ್.ಎಸ್.ರವಿ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದತುಂಗ ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಕೇಂದ್ರದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಡೆಂಘೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಮನೆ ಪರಿಸರದಲ್ಲಿ ನೀರು ನಿಲ್ಲುವ ಪಾತ್ರೆಗಳು, ಹಳೆಯ ಟೈರ್‌ಗಳು, ತೆಂಗಿನ ಚಿಪ್ಪುಗಳು ಸೇರಿದಂತೆ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುವ ವಸ್ತುಗಳನ್ನು ತೆರವುಗೊಳಿಸುವ ಮೂಲಕ ಡೆಂಘೆ ತಡೆಗೆ ಸಹಕರಿಸಬೇಕು. ಜ್ವರ, ತೀವ್ರ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮೈಕೈ ನೋವು ಹಾಗೂ ಚರ್ಮದ ಮೇಲೆ ಕೆಂಪು ಕಲೆಗಳು ಕಾಣಿಸಿಕೊಂಡರೆ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮಮತಾ, ಆಶಾ ಕಾರ್ಯಕರ್ತೆ ಗಿರಿಜಾ, ಶಿಕ್ಷಕರಾದ ಮೋಹನಕುಮಾರ್ ವಿ., ಕಾಂತರಾಜು ಎ., ವೀಣಾ ಟಿ.ಎಂ., ಲಕ್ಷ್ಮೀ ಜೆ., ವಸಂತ್ ಹಾಗೂ ವಿದ್ಯಾರ್ಥಿಗಳು ಇದ್ದರು.