ಸರಗೂರು ತಾಲೂಕಿನ ಮಸಹಳ್ಳಿ ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ವಾಲಿಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ತಂಡಗಳಿಗೆ ಅಭಿನಂದಿಸಿದರು. ಮಸಹಳ್ಳಿ ಎಂ.ಪಿ. ಸೂರ್ಯ ಕುಮಾರ್, ರುಕ್ಮಿಣಿ ಪುಟ್ಟಯ್ಯ, ಹನುಮಂತಯ್ಯ ಇತರರು ಇದ್ದರು. 
ಮೈಸೂರು

ಮಕ್ಕಳು ಹೆಚ್ಚು ಕ್ರೀಡಾಸಕ್ತಿ ಬೆಳೆಸಿಕೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ಬಲಗೈ ಸಮಾಜದ ಮಹಾಸಭಾ ಕಾರ್ಯದರ್ಶಿ ಮಸಹಳ್ಳಿ ಎಂ.ಪಿ. ಸೂರ್ಯ ಕುಮಾರ್ ಅಭಿಮತ
ಸರಗೂರು: ಗ್ರಾಮಗಲ್ಲಿ ಹಬ್ಬದ ಸಂದರ್ಭ ಪಂದ್ಯಾವಳಿ ಆಯೋಜನೆ ಮಾಡಿದರೆ, ಮಕ್ಕಳಲ್ಲಿ ಹೆಚ್ಚು ಕ್ರೀಡಾಸಕ್ತಿ
ಬೆಳೆಯುತ್ತದೆ ಎಂದು ಬಲಗೈ ಸಮಾಜದ ಮಹಾಸಭಾ ಕಾರ್ಯದರ್ಶಿ ಮಸಹಳ್ಳಿ ಎಂ.ಪಿ. ಸೂರ್ಯ ಕುಮಾರ್ ತಿಳಿಸಿದರು.
ತಾಲೂಕಿನ ಮಸಹಳ್ಳಿ ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಇತ್ತೀಚೆಗೆ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ, ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಯುವ ಆಟಗಾರರು ಹೆಚ್ಚು ಇದ್ದಾರೆ. ಓದಿನ ಜತೆಗೆ ಕ್ರೀಡೆಯಲ್ಲಿ ತೊಡೆಗಿಸಿಕೊಳ್ಳಿ ಎಂದು ಹೇಳಿದರು.
ರಾವಣ ಸ್ಟಾರ್ ತಂಡ ಪ್ರಥಮ, ಜೈ ಭೀಮ್, ಸ್ಟಾರ್ ದ್ವಿತೀಯ, ಪಡೆದ ಭೀಮ ಬಾಯ್ಸ ತಂಡಗಳು ತೃತೀಯ ಸ್ಥಾನ ಪಡೆದವು
ಗ್ರಾಪಂ ರುಕ್ಮಿಣಿ ಪುಟ್ಟಯ್ಯ, ಗ್ರಾಮದ ಯಜಮಾನರು ಹನುಮಂತಯ್ಯ, ಮುಖಂಡರಾದ ವೈರುಮುಡಿಯ್ಯ, ಎಂ. ಸೂರ್ಯ ಕುಮಾರ್ , ನಾಗೇಶ್ ಅಭಿ, ಮಹೇಶ್, ಸುರೇಶ್, ಸತೀಶ್,ಸಣ್ಣಯ್ಯ, ಬಸವರಾಜು, ಚಲುವರಾಜು, ಮಧು ಇತರರು ಇದ್ದರು.