ನಗರದ ಟೆರಿಷಿಯನ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ವೈಜ್ಞಾನಿಕ ಪ್ರಗತಿಯ ಯುಗದಲ್ಲಿ ಬೌದ್ಧಿಕ ಸ್ವತ್ತು ನಿರ್ವಹಣೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಸಿಎಫ್‌ಟಿಆರ್‌ಐನ ಎಂ.ವಿ.ರಘುನಂದನ ಉದ್ಘಾಟಿಸಿದರು. ರೋಹಿಣಿ, ಜುವಾನಿಟಾ, ಸಿ.ಜಯಂತಿ, ವಿವೇಕ ಚಾರ್ಲ್ಸ್, ಅಂಜಲಿ, ಬಿ.ಸಪ್ನಾ ಇನ್ನಿತರರಿದ್ದರು.
- ನಗರದ ಟೆರಿಷಿಯನ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ವೈಜ್ಞಾನಿಕ ಪ್ರಗತಿಯ ಯುಗದಲ್ಲಿ ಬೌದ್ಧಿಕ ಸ್ವತ್ತು ನಿರ್ವಹಣೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ
ಮೈಸೂರು: ವಿದ್ಯಾರ್ಥಿಗಳು ಪಠ್ಯದೊಂದಿಗೆ ಸಂಶೋಧನೆ ಹಾಗೂ ಅನ್ವೇಷಣೆ ಮನೋಭಾವ ಮೈಗೂಡಿಸಿಕೊಳ್ಳಬೇಕು ಎಂದು ಸಿಎಫ್‌ಟಿಆರ್‌ಐನ ಮಾಹಿತಿ ತಂತ್ರಜ್ಞಾನ ಮತ್ತು ಕಂಪ್ಯೂಟೇಶನಲ್ ಸಲ್ಯುಷನ್ಸ್ ವಿಭಾಗದ ಮುಖ್ಯಸ್ಥ ಎಂ.ವಿ.ರಘುನಂದನ ಹೇಳಿದರು.
ನಗರದ ಟೆರಿಷಿಯನ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ವೈಜ್ಞಾನಿಕ ಪ್ರಗತಿಯ ಯುಗದಲ್ಲಿ ಬೌದ್ಧಿಕ ಸ್ವತ್ತು ನಿರ್ವಹಣೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.
ತಾಂತ್ರಿಕ ಹಾಗೂ ಎಐ ಯುಗದಲ್ಲಿ ವಿದ್ಯಾರ್ಥಿಗಳು ಪಠ್ಯ ಓದಿದರೆ ಸಾಲದು, ಬದಲಾವಣೆಗೆ ತಕ್ಕ ಉನ್ನತೀಕರಣಗೊಳ್ಳಬೇಕು. ಎಐ ತಂತ್ರಜ್ಞಾನದಿಂದ ಅನೇಕ ಅವಕಾಶಗಳು ತೆರೆದುಕೊಂಡಿವೆ. ಅದನ್ನು ಬಳಸಿಕೊಂಡು ಮುಂದೆ ಸಾಗಿ ಭವಿಷ್ಯ ರೂಪಿಸಿಕೊಳ್ಳಲು ಕೌಶಲಬೇಕು.
ಸ್ಪರ್ಧಾತ್ಮಕ ಯುಗದಲ್ಲಿ ಮುಂದಿನ ದಿನಗಳಲ್ಲಿ ಎದುರಾಗುಗುವ ಸವಾಲುಗಳಿಗೆ ಪರಿಹಾರ ಕಲ್ಪಿಸಿಕೊಳ್ಳಬೇಕು ಎಂದರು.
ಇದೀಗ ಬೌದ್ಧಿಕ ಆಸ್ತಿ ಹಕ್ಕುಗಳ ನಿರ್ವಹಣೆಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ದೊರೆಯುತ್ತಿದೆ. ಇದು ಹೊಸ ಆವಿಷ್ಕಾರ ರಕ್ಷಿಸುವ, ವಾಣಿಜ್ಯೀಕರಿಸುವ ಮತ್ತು ತಾಂತ್ರಿಕ ಪ್ರಗತಿ ಪ್ರೋತ್ಸಾಹಿಸುವ ಪ್ರಕ್ರಿಯೆಯಾಗಿ ಹೊರಹೊಮ್ಮಿದೆ. ವೈಜ್ಞಾನಿಕ ಯುಗದಲ್ಲಿ ನಾವೀನ್ಯತೆ ಕಾಪಾಡುವ ಮತ್ತು ಉತ್ತೇಜಿಸುವಲ್ಲಿ ಬೌದ್ಧಿಕ ಸ್ವತ್ತು ನಿರ್ವಹಣೆ ಪ್ರಮುಖ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಗಳಾಗಿ ಸಹಾಯಕ ಪ್ರಾಧ್ಯಾಪಕ ಎಂ.ವಿ.ಸುನಿಲ್, ಲೈಫ್ ಸೈನ್ಸ್ ತಂಡದ ವ್ಯವಸ್ಥಾಪಕಿ ಸುನೇತ್ರಾ ಸುಧಾಕರ್ ದೇರೆಬೈಲ್, ಫೆಲೋ ಜ್ಯೋತಿಸ್ ದೇವಾಸಿಯಾ, ಪ್ರಾಂಶುಪಾಲೆ ರೋಹಿಣಿ, ಜುವಾನಿಟಾ, ಡೀನ್ ಸಿ.ಜಯಂತಿ, ಐಕ್ಯುಎಸಿ ಸಂಯೋಜಕ ವಿವೇಕ ಚಾರ್ಲ್ಸ್, ವ್ಯವಸ್ಥಾಪಕಿ ಅಂಜಲಿ, ಸಹಾಯಕ ಪ್ರಾಧ್ಯಾಪಕರಾದ ಬಿ.ಸಪ್ನಾ, ನಿಲಿನಾ ಜೇಮ್ಸ್, ಡಿ.ಆರ್.ಆಶಾ,ಪ್ರೀತಾ ಫ್ಲೋರಿನಾ, ಕೆ.ಅಂಜು ಸೇರಿದಂತೆ ಇನ್ನಿತರರಿದ್ದರು