ಸಾಂದರ್ಭಿಕ ಚಿತ್ರ 
ಮೈಸೂರು

ಮೈಸೂರಿನ ಲಲಿತಾದ್ರಿನಗರ ಮುಡಾ ಬಡಾವಣೆಯಲ್ಲಿ 3 ಲಕ್ಷ ರೂ.ಮೌಲ್ಯದ ವಿದ್ಯುತ್ ಉಪಕರಣಗಳು ಕಳವು

ಮೈಸೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸಿರುವ ಲಲಿತಾದ್ರಿನಗರ ಉತ್ತರ ಬಡಾವಣೆಯಲ್ಲಿ ಅಳವಡಿಸಿದ್ದ 3 ಲಕ್ಷ ರೂ. ಮೌಲ್ಯದ ವಿದ್ಯುತ್ ಉಪಕರಣಗಳು ಕಳುವಾಗಿದೆ.
ಲಲಿತಾದ್ರಿನಗರ ಉತ್ತರ ಬಡಾವಣೆಯು 825 ನಿವೇಶನಗಳನ್ನು ಒಳಗೊಂಡಿದ್ದು, ಬಡಾವಣೆಯಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿ ವಿದ್ಯುತ್ ವಾಹಕಗಳು, ಪರಿವರ್ತಕ ಕೇಂದ್ರಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲು ವ್ಯವಸ್ಥೆ ಮಾಡಲಾಗಿತ್ತು. ಜು.9 ರಂದು ಬಡಾವಣೆಯ ವಾಟರ್ ಟ್ಯಾಂಕ್ ಹತ್ತಿರದ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಪರಿವರ್ತಕಗಳನ್ನು ಚಾಲನೆಗೊಳಿಸುವ ಸಂಬಂಧ ಸ್ಥಳ ಪರಿಶೀಲಿಸುವ ಸಂದರ್ಭದಲ್ಲಿ ಬಡಾವಣೆಯಲ್ಲಿ ವಿದ್ಯುತ್ ಕಂಬಗಳಿಗೆ ಅಳವಡಿಸಿಸಿದ 3.5 ಕಿ.ಮೀ. ಉದ್ದದ ವಿದ್ಯುತ್ ವಾಹಕಗಳು, 10 ಕ್ರಾಸ್ ಆ್ಯಂಗಲ್, 10 ಟ್ರಾನ್ಸ್‌ಫಾರ್ಮರ್ ಹಾಗೂ ಇನ್ನು ಮುಂತಾದ ವಿದ್ಯುತ್ ಉಪಕರಣಗಳನ್ನು ಕಳವು ಮಾಡಲಾಗಿದೆ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೇಶ್ಯಾವಾಟಿಕೆ, ವ್ಯಕ್ತಿ ಬಂಧನ
ಮೈಸೂರು ತಾಲೂಕಿನ ಪರಸಯ್ಯನಹುಂಡಿಯ ಮನೆಯೊಂದರಲ್ಲಿ ವೇಶ್ಯಾವಾಟಿ ನಡೆಸುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿ ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ.
ಬೆಂಗಳೂರಿನ ನೆಲಮಂಗಲದ ಭೈರಪ್ಪನಪಾಳ್ಯ ನಿವಾಸಿ ಕೆಂಪರಾಜು ಅಲಿಯಾಸ್ ಕೀರ್ತಿ ಬಂಧಿತ ಆರೋಪಿ. ಈತ ಮೈಸೂರಿನ ಮಂಜು ಎಂಬಾತನೊಂದಿಗೆ ಸೇರಿ ಪರಸಯ್ಯನಹುಂಡಿಯಲ್ಲಿ ಬಾಡಿಗೆ ಮನೆಯೊಂದನ್ನು ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದ. ದಾಳಿಯ ಸಂದರ್ಭ ಮಂಜು ಪರಾರಿಯಾಗಿದ್ದಾನೆ. ಆರೋಪಿಗಳು ಹೆಣ್ಣು ಮಕ್ಕಳಿಗೆ ಹಣದ ಆಮಿಷೆ ತೋರಿಸಿ, ಪುಸಲಾಯಿಸಿ ಹೊರಗಿನಿಂದ ಪರಸಯ್ಯನಹುಂಡಿಗೆ ಕರೆ ತಂದು ವೇಶ್ಯಾವಾಟಿಕೆಗೆ ದೂಡುತ್ತಿದ್ದರು. ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.