ಸರಗೂರು, ಕೋಟೆ ತಾಲೂಕು ವಿಶ್ವಕರ್ಮ ಯುವ ಬ್ರಿಗೇಡ್‌ಗೆ ಅವಿರೋಧ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. 
ಮೈಸೂರು

ಯುವ ಬ್ರಿಗೇಡ್‌ಗೆ ಪದಾಧಿಕಾರಿಗಳ ಆಯ್ಕೆ

ಸರಗೂರು: ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ವಿಶ್ವಕರ್ಮ ಯುವ ಬ್ರಿಗೇಡ್‌ಗೆ ನೂತನ ಪದಾಧಿಕಾರಿಗಳನ್ನು ಅವಿರೋಧ ಆಯ್ಕೆ ಮಾಡಲಾಯಿತು.
ತಾಲೂಕಿನ ಸಮೀಪದ ಹ್ಯಾಂಡ್‌ಪೋಸ್ಟ್‌ನಲ್ಲಿ ಇತ್ತೀಚೆಗೆ ನಡೆದ ಯುವ ಬ್ರಿಗೇಡ್ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷರಾಗಿ ವಕೀಲ ರಾಜಾಚಾರಿ, ಕಾರ್ಯದರ್ಶಿಯಾಗಿ ಎನ್.ಲೋಕೇಶ್, ಖಜಾಂಚಿಯಾಗಿ ಜನಾರ್ದನ್ ಸರ್ವಾನುಮತದಿಂದ ಆಯ್ಕೆಯಾದರು. ನಿರ್ದೇಶಕರಾದ ಕಿರಣ್, ದಾಸಾಚಾರಿ, ನಿಂಗರಾಜು, ವಸಂತ್ ಕುಮಾರ್, ಸಿದ್ದಪ್ಪಾಜಿ, ಪ್ರದೀಪ್ ಕುಮಾರ್, ರವಿ, ಸಾ.ನಾ. ಗೋವಿಂದರಾಜು, ಆರ್.ಟಿ.ವಿಜಯ ಕುಮಾರ್, ನಾಗೇಶ್ ಎಸ್.ಆಚಾರ್, ಶೇಖರ್, ನಾಗೇಂದ್ರ, ವಿನೋದ್ ಕುಮಾರ್, ವೆಂಕಟೇಶ, ಚಂದನ್ ಇನ್ನಿತರರು ಹಾಜರಿದ್ದರು.