ಸರಗೂರು ತಾಲೂಕು ಕರ್ನಾಟಕ ಮಾದರ ಮಹಾಸಭಾಗೆ ಆಯ್ಕೆಯಾದ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ಕುರ್ಣೇಗಾಲ ಬೆಟ್ಟಸ್ವಾಮಿ, ಶಿವರಾಜು, ಸಿ.ತಿಮ್ಮಯ್ಯ, ಪಿ.ನಾಗರಾಜು, ಉಡ ನಾಗರಾಜ್, ಶಿವರಾಜ್, ಶಿವಯ್ಯ, ವೆಂಕಟೇಶ್, ಡಿ.ನಾಗರಾಜು, ಚೆಲುವರಾಜು ಇದ್ದರು. 
ಮೈಸೂರು

ಮಾದರ ಮಹಾಸಭಾಕ್ಕೆ ಪದಾಧಿಕಾರಿಗಳ ಆಯ್ಕೆ

ಸರಗೂರು: ಕರ್ನಾಟಕ ಮಾದರ ಮಹಾಸಭಾಕ್ಕೆ ಸರಗೂರು ತಾಲೂಕು ಅಧ್ಯಕ್ಷರಾಗಿ ಕುರ್ಣೇಗಾಲ ಬೆಟ್ಟಸ್ವಾಮಿ ಅವಿರೋಧ ಆಯ್ಕೆಯಾದರು.
ಪಟ್ಟಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಮಟಕೆರೆ ಶಿವರಾಜ್, ಕಾರ್ಯದರ್ಶಿ ಮೊಳೆಯೂರು ನಾಗರಾಜ್, ಸಂಘಟನಾ ಕಾರ್ಯದರ್ಶಿ ಗುರುಮಲ್ಲು, ಖಜಾಂಚಿ ಸಿದ್ದಪ್ಪ, ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಅಂಜು ರಮೇಶ್, ಶಿವಲಿಂಗಯ್ಯ, ನಾಗರಾಜ್ ಅವರನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷ ಬೆಟ್ಟಸ್ವಾಮಿ ಮಾತನಾಡಿ, ಪಕ್ಷಾತೀತವಾಗಿ ಈ ಸಂಘಟನೆ ನಿರ್ಮಾಣವಾಗಿದೆ. ಅತಿ ಚಿಕ್ಕ ವಯಸ್ಸಿಗೆ ದೊಡ್ಡ ಹುದ್ದೆಯನ್ನು ಸಮಾಜ ನನಗೆ ಕಲ್ಪಿಸಿಕೊಟ್ಟಿದೆ. ಸಮಾಜಕ್ಕೆ ನಾನು ಚಿರಋಣಿ. ಸಂಘಟನೆ ಮತ್ತು ಸಮುದಾಯಕ್ಕೆ ಯಾವುದೇ ಕಪ್ಪು ಚುಕ್ಕೆ ತರುವ ಕೆಲಸವನ್ನು ಮಾಡುವುದಿಲ್ಲ. ನಿಮ್ಮ ಸಲಹೆ ಮೇರೆಗೆ ಸಮುದಾಯದವನ್ನು ಮುನ್ನಡೆಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು.
ಡಾ.ಬಾಬು ಜಗಜೀವನ ರಾಮ್ ವಿಚಾರ ವೇದಿಕೆ ಅಧ್ಯಕ್ಷ ಸಿ.ತಿಮ್ಮಯ್ಯ ಮಾತನಾಡಿ, ರಾಜ್ಯಾದ್ಯಂತ ಸಮುದಾಯ ಸಂಘಟನೆಯಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ಸಚಿವ ಕೆ.ಎಚ್.ಮುನಿಯಪ್ಪ ಅವರ ಅಧ್ಯಕ್ಷತೆಯಲ್ಲಿ ಸಂಘ ಪ್ರಾರಂಭವಾಗಿದೆ. ಪ್ರತಿ ಗ್ರಾಮದಲ್ಲಿ ಹೆಚ್ಚು ಸದಸ್ಯತ್ವ ಮಾಡಿಸಿ ಸಂಘ ಮತ್ತು ಸಮುದಾಯವನ್ನು ಬೆಳೆಸಬೇಕು ಎಂದರು.
ಡಾ.ಬಾಬು ಜಗಜೀವನ ರಾಮ್ ವಿಚಾರ ವೇದಿಕೆ ಅಧ್ಯಕ್ಷ ಸಿ.ತಿಮ್ಮಯ್ಯ, ಮಾಜಿ ಅಧ್ಯಕ್ಷ ಪಿ.ನಾಗರಾಜು, ಉಡ ನಾಗರಾಜ್, ಶಿವರಾಜ್, ಶಿವಯ್ಯ, ವೆಂಕಟೇಶ್, ಡಿ.ನಾಗರಾಜು, ಚೆಲುವರಾಜು, ಶಿವರಾಜ್, ಪ್ರಕಾಶ್, ಸೋಮು ಪಟೇಲ್, ವೆಂಕಟಪ್ಪ, ಸ್ವಾಮಿ, ಸಿ.ಕಾಳಪ್ಪಾಜಿ, ದೇವನಾಥ್, ದೇವರಾಜ್, ಗಿರಿ ಪ್ರಸಾದ್, ಮಹೇಶ್, ಸಣ್ಣಸ್ವಾಮಿ, ಶಿವರಾಜ್, ಮಹದೇವ, ರವೀಶ್, ಸುಭಾಷ್, ಸಿಂಗಯ್ಯ, ಚೌಡಯ್ಯ, ಶಿವಲಿಂಗಯ್ಯ, ನಾಗರಾಜ್, ನಾಗೇಂದ್ರ, ಮಹದೇವ, ಶ್ರೀನಿವಾಸ್, ಸಿದ್ದಣ್ಣ, ಜಯಕುಮಾರ್, ಗುರುಮಲ್ಲು, ಕೆಂಚಣ್ಣ, ಶ್ರೀನಿವಾಸ್, ಸುಂದರ್, ರಾಜು, ಮಹದೇವ, ಶಿವರಾಜ್, ಸಿದ್ದಪ್ಪ, ಶಿವರಾಜಯ್ಯ, ಶಿವಾಜಿ, ಸ್ವಾಮಿ, ಜಯಕುಮಾರ್, ರಮೇಶ್, ಹನುಮಂತ, ಚೇತನ್, ಆನಂದ್, ನಾಗೇಂದ್ರ, ಸತೀಶ್, ನಾಗರಾಜು, ಮಹೇಂದ್ರ, ರಾಜೇಂದ್ರ, ಮಹೇಶ್, ನಾಗರಾಜು, ಸಿದ್ದರಾಜು, ದಿನೇಶ್, ಧರ್ಮ, ಮಣಿ ಹಾಜರಿದ್ದರು.