ಕೆ ಆರ್ ನಗರದ ಸರ್ಕಾರಿ ನೌಕರರ ಭವನದಲ್ಲಿ ನಡೆದ ತಾಲೂಕು ಸರ್ಕಾರಿ ನೌಕರರ ಸಂಘದ ಭವನದಲ್ಲಿ ನಡೆದ ಅಧ್ಯಕ್ಷರ ಚುಮಾವಣೆಯಲ್ಲಿ ಅವಿರೋಧವಾಗಿ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಉಮೇಶ್ ಅವರನ್ನು ಸಂಘದ ಪದಾಧಿಕಾರಿಗಳು ಅಭಿನದಿಸಿದರು. ಡಾ.ಡಿ.ನಟರಾಜ್, ಶಂಕರೇಗೌಡ, ಜಿ.ಜೆ.ಮಹೇಶ್, ಹರೀಶ್, ಯಶವಂತ್‌ಕುಮಾರ್, ರಾಜಶೇಖರ್, ಮಹೇಶ್, ಪೂರ್ಣಿಮಾ, ಡಾ.ಹರೀಶ್, ಬಿ.ಎಲ್.ಮಹದೇವ್, ಕೆ.ವಿ.ರಮೇಶ್, ವಸಂತ್‌ಕುಮಾರ್ ಇನ್ನಿತರರಿದ್ದರು. 
ಮೈಸೂರು

ಸರ್ಕಾರಿ ನೌಕರರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ಕೆ.ಆರ್.ನಗರ: ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಉಮೇಶ್ ಅವಿರೋಧವಾಗಿ ಆಯ್ಕೆಯಾದರು.
ಈವರೆಗೆ ಅಧ್ಯಕ್ಷರಾಗಿದ್ದ ಡಾ.ಡಿ.ನಟರಾಜ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಭಾನುವಾರ ಸಂಘದ ಕಚೇರಿಯಲ್ಲಿ ಚುನಾವಣೆ ನಡೆಯಿತು. ಉಮೇಶ್ ಅವರನ್ನು ಹೊರತುಪಡಿಸಿ ಬೇರ‌್ಯಾರು ನಾಮಪತ್ರ ಸಲ್ಲಿಸದಿದ್ದರಿಂದ ಚುನಾವಣೆ ಅಧಿಕಾರಿಯಾಗಿದ್ದ ಶಿವಕುಮಾರ್ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ನೂತನ ಅಧ್ಯಕ್ಷ ಉಮೇಶ ಅವರನ್ನು ಸಂಘದ ಪಧಾದಿಕಾರಿಗಳು ಮತ್ತು ಸದಸ್ಯರು ಸೇರಿದಂತೆ ನೌಕರರು ಅಭಿನಂದಿಸಿದರು.
ಈ ವೇಳೆ ಅಧ್ಯಕ್ಷ ಉಮೇಶ್ ಮಾತನಾಡಿ, ಸಂಘದ ಕಟ್ಟಡ ದುರಸ್ತಿಯಾಗಬೇಕಾಗಿದ್ದು ಅದಕ್ಕಾಗಿ ಶಾಸಕ ಡಿ.ರವಿಶಂಕರ್ ಮತ್ತು ವಿಧಾನ ಪರಿಷತ್ ಸದಸ್ಯರಿಂದ ಅನುದಾನ ಪಡೆಯಲು ಪ್ರಯತ್ನ ಮಾಡಲಾಗುತ್ತದೆ. ಹಿಂದಿನ ಅಧ್ಯಕ್ಷರಾದ ಡಾ.ಡಿ.ನಟರಾಜ್ ಅವರ ಆಶಯದಂತೆ ಸರ್ಕಾರಿ ನೌಕರರ ಸಹಕಾರ ಸಂಘ ಹಾಗೂ ಗೃಹ ನಿರ್ಮಾಣ ಸಹಕಾರ ಸಂಘದ ರಚನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಚುನಾವಣೆ ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಡಾ.ಡಿ.ನಟರಾಜ್, ಗೌರವ ಅಧ್ಯಕ್ಷ ಶಂಕರೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಜೆ.ಮಹೇಶ್, ಖಜಾಂಚಿ ಹರೀಶ್, ರಾಜ್ಯ ಪರಿಷತ್ ಸದಸ್ಯ ಯಶವಂತ್‌ಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜಶೇಖರ್, ತಾಲೂಕು ಕಾರ್ಯದರ್ಶಿ ಮಹೇಶ್, ನಿರ್ದೇಶಕರಾದ ಪೂರ್ಣಿಮಾ, ಡಾ.ಹರೀಶ್, ಬಿ.ಎಲ್.ಮಹದೇವ್, ಕೆ.ವಿ.ರಮೇಶ್, ವಸಂತ್‌ಕುಮಾರ್, ಬಿ.ಎಲ್.ಮಹದೇವ್, ಗಂಗಾಧರ್, ರಮೇಶ್, ರಘು, ಲೋಕೇಶ್, ಸಂತೋಷ್, ಡಾ.ಹರೀಶ ಪಾರ್ವತಿ, ಪೂರ್ಣಿಮಾ, ಶ್ರೀತುಳಸಿ, ರವಿಕುಮಾರ್, ಚುನಾವಣಾಧಿಕಾರಿ ಶಿವಕುಮಾರ್, ಸಹಾಯಕ ಚುನಾವಣಾಧಿಕಾರಿ ಕೆ.ಸಿ.ಮಧು ಸೇರಿದಂತೆ ಇನ್ನಿತರರು ಹಾಜರಿದ್ದರು.