ಸರಗೂರು ತಾಲೂಕಿನ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಆಡಳಿತ ಮಂಡಳಿ ನಿರ್ದೇಶಕರನನ್ನು ಸನ್ಮಾನಿಸಲಾಯಿತು.
ಸರಗೂರು: ಸರಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ 12 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿಗೆ ಇತ್ತೀಚೆಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಸಾಮಾನ್ಯ, ಮಹಿಳಾ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗ ಪ್ರವರ್ಗ ಎ, ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು, ಸಾಲಗಾರರಲ್ಲದ ಕ್ಷೇತ್ರ ಸ್ಥಾನಗಳಿಂದ ಒಟ್ಟು 12 ಮಂದಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ರೇಣುಕಾ ಘೋಷಣೆ ಮಾಡಿದರು.
ಸಾಮಾನ್ಯ ಕ್ಷೇತ್ರದಿಂದ ಹಳೆಯೂರು ಕೆಂಡಗಣ್ಣಸ್ವಾಮಿ, ಕೊತ್ತೇಗಾಲದ ಶಂಕರಲಿಂಗಪ್ಪ, ಸರಗೂರು ನಿತೀನ್, ಬಿಡಗಲುಹುಂಡಿಯ ಎಚ್.ಸಿ ರಾಮಲಿಂಗಪ, ಗೋಪಾಲಯ್ಯ, ಮಹಿಳಾ ಕ್ಷೇತ್ರದಿಂದ ಹಳೆಯೂರು ಕೂಸಮ್ಮ, ನರಸೀಪುರ ಗ್ರಾಮದ ಭಾನುಮತಿ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಶಿವಶಂಕರ್, ಪಂಗಡ ಕ್ಷೇತ್ರದ ಇಟ್ನ ಗ್ರಾಮದ ಎಸ್. ಸಿದ್ದನಾಯಕ, ಹಿಂದುಳಿದ ವರ್ಗದಿಂದ ನಾಗರಾಜ ರಾಮ, ಕೊತ್ತೆಗಾಲ ಗ್ರಾಮದ ನೇಮಿಚಂದ್ರ, ಸಾಲಗಾರರಲ್ಲದ ಕ್ಷೇತ್ರದಿಂದ ಕಲೀಲ್ ಆಯ್ಕೆಯಾಗಿದ್ದಾರೆ. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾದೇವು ಪ್ರಮಾಣಪತ್ರ ನೀಡಿದರು.