ಚಪ್ಪರದಹಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳು ಸಂಭ್ರಮಾಚರಣೆ ಮಾಡಿದರು. ಕುಶಾಲ ಸಿ.ಎಸ್, ಸುರೇಶ್ ಸಿ.ಪಿ, ರವಿ ಸಿ.ಪಿ, ಸಂಗೀತಾ ವೆಂಕಟೇಶ್, ಮುಕುಂದಾಚಾರಿ, ಪುಟ್ಟಮ್ಮ, ಅಶ್ವಥ್ ಕುಮಾರ್ ಸಿ, ರಘು ಸಿ.ಪಿ, ಗೌರಮ್ಮ ನಂದೀಶ್, ಶೀಲಾನಾಗೇಂದ್ರ ಇತರರು ಇದ್ಧರು. 
ಮೈಸೂರು

ಚಪ್ಪರದಹಳ್ಳಿ ಸೊಸೈಟಿಗೆ ನಿರ್ದೇಶಕರ ಆಯ್ಕೆ

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಎಂಟು ಅಭ್ಯರ್ಥಿಗಳು ಮತ್ತು ಕಾಂಗ್ರೆಸ್ ಬೆಂಬಲಿತ ನಾಲ್ಕು ಅಭ್ಯರ್ಥಿಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಸಾಲಗಾರ ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತರಾದ ಸಿ.ಎಸ್.ಕುಶಾಲ , ಸಿ.ಪಿ.ಸುರೇಶ್, ಸಿ.ಪಿ.ರವಿ, ಸಂಗೀತಾ ವೆಂಕಟೇಶ್, ಮುಕುಂದಾಚಾರಿ, ಪುಟ್ಟಮ್ಮ, ಅಶ್ವತ್ಥ್ ಕುಮಾರ್ ಮತ್ತು ಕಾಂಗ್ರೆಸ್ ಬೆಂಬಲಿತರಾದ ಸಿ.ಪಿ.ರಘು , ಜಗದೀಶ್, ಗೌರಮ್ಮ ನಂದೀಶ್ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತ ಶೀಲಾನಾಗೇಂದ್ರ ಹೆಚ್ಚಿನ ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಪಂಗಡದಿಂದ ಕಾಂಗ್ರೆಸ್ ಬೆಂಬಲಿತ ಚೆಲುವನಾಯಕ ಎಂಬುವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಗಳಾಗಿ ಸಹಕಾರ ಇಲಾಖೆಯ ಹಿತೇಂದ್ರ ಅವರ ತಂಡ ಕಾರ್ಯನಿರ್ವಹಿಸಿತು. ಜೆಡಿಎಸ್ ಪಕ್ಷದವರು ಹೆಚ್ಚಿನ ಸ್ಥಾನಗಳನ್ನು ಗೆಲುವು ಸಾಧಿಸಿದ ಹಿನ್ನೆಲೆ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಸಂಘದ ಸಿಇಒ ಹುಚ್ಚಪ್ಪ, ಸಿಬ್ಬಂದಿ ಸಿ.ಕೆ.ಮಂಜುನಾಥ್, ಎಂ.ಆರ್ ಯೋಗಾನಂದ, ಎಚ್.ಜೆ ಅವಿನಾಶ್, ರವಿಕುಮಾರ್ ಸೇರಿದಂತೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು, ಸದಸ್ಯರು ಇದ್ದರು.