ಶಾಲಾ ವಾರ್ಷಿಕೋತ್ಸವದಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಹೊಸೂರಿನ ಎ. ಕುಚೇಲ್, ಎಚ್.ಡಿ. ರಾಜಕುಮಾರ್, ಸಾಲಿಗ್ರಾಮದ ಹಿಂದಿ ಭಾಷೆ ಶಿಕ್ಷಕ ಯೋಗಣ್ಣ, ದೈಹಿಕ ಶಿಕ್ಷಣ ಶಿಕ್ಷಕ ಸುಬ್ಬೆಗೌಡ ಅವರನ್ನು ಸನ್ಮಾನಿಸಲಾಯಿತು. 
ಮೈಸೂರು

ಶಿಕ್ಷಣ ಸಂಸ್ಥೆಗಳು ನೈತಿಕ ಶಿಕ್ಷಣಕ್ಕೂ ಒತ್ತು ನೀಡಲಿ

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ಜಿಎಕೆ ಚಾರಿಟಬಲ್ ಟ್ರಸ್ಟ್, ಜ್ಞಾನಲೋಕ ಕಿಡ್ಸ್ ಸೆಂಟರ್
ಹೊಸೂರು: ಶಿಕ್ಷಣ ಸಂಸ್ಥೆಗಳು ಪಠ್ಯವನ್ನು ಬೋಧಿಸುವ ಜತೆಗೆ ಮಕ್ಕಳ ನೈತಿಕ ಶಿಕ್ಷಣಕ್ಕೂ ಒತ್ತು ನೀಡಬೇಕು ಎಂದು ಒಕ್ಕಲಿಗ ಸಂಘದ ಉಪಾಧ್ಯಕ್ಷ ಎ.ಕುಚೇಲ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಹಳಿಯೂರು ಬಡಾವಣೆಯ ಜಿಎಕೆ ಚಾರಿಟಬಲ್ ಟ್ರಸ್ಟ್, ಜ್ಞಾನಲೋಕ ಕಿಡ್ಸ್ ಸೆಂಟರ್ ವತಿಯಿಂದ ಶನಿವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳು ಕೇವಲ ಅಂಕ ಗಳಿಕೆಯ ಕೇಂದ್ರಗಳಾಗುತ್ತಿವೆ. ಮಕ್ಕಳಲ್ಲಿ ಪಠ್ಯಪುಸ್ತಕ ಹೊರತುಪಡಿಸಿ ಕಲೆ, ಸಂಸ್ಕೃತಿ, ಆಧ್ಯಾತ್ಮಿಕ ಜೀವನದ ಕುರಿತು ಬೋಧಿಸುವುದು ಅಗತ್ಯವಾಗಿದ್ದು ಸಂಸ್ಥೆ ಈ ನಿಟ್ಟಿನಲ್ಲಿ ಮುಂದೆ ಸಾಗಲಿ ಎಂದು ಹಾರೈಸಿದರು.
ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಹೊಸೂರಿನ ಎ. ಕುಚೇಲ್, ಎಚ್.ಡಿ. ರಾಜಕುಮಾರ್, ಸಾಲಿಗ್ರಾಮದ ಹಿಂದಿ ಭಾಷೆ ಶಿಕ್ಷಕ ಯೋಗಣ್ಣ, ದೈಹಿಕ ಶಿಕ್ಷಣ ಶಿಕ್ಷಕ ಸುಬ್ಬೆಗೌಡ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷೆ ಗಿರಿಜಾ, ಉಪಾಧ್ಯಕ್ಷೆ ಕಾವ್ಯಶ್ರೀ ಜಗದೀಶ್, ಕಾರ್ಯದರ್ಶಿ ಅವಿನಾಶ್, ಕಿಸಾನ್ ಅಗ್ರಿ ಮಾಲ್ ಮಾಲೀಕ ಸಂತೋಷ್ ಹೊಸೂರು , ಬೆಟ್ಟದಪುರ ಪ್ರೌಢಶಾಲೆಯ ಶಿಕ್ಷಕರಾದ ಕೆಂಪರಾಜು, ಮಹೇಶ್, ಕಾಂತರಾಜು, ಪತ್ರಕರ್ತ ಆನಂದ್, ಮುಖಂಡರಾದ ಜಗದೀಶ್, ಶಿಕ್ಷಕಿ ಪವಿತ್ರಾ, ತೌಸೀಫ್ , ಆಫ್ಜಲ್ ಶರೀಫ್, ಗಜ ಅಭಿ, ತಿಲಕ್, ಪ್ರದೀಪ್, ಅನಿಲ್, ಸಚಿನ್, ಸಂಸ್ಥೆಯ ಸಿಬ್ಬಂದಿ, ಮತ್ತಿತರರು ಹಾಜರಿದ್ದರು.