ಹುಣಸೂರು ತಾಲೂಕು ಮುಳ್ಳೂರು ಕ್ಲಸ್ಟರ್‌ವ್ಯಾಪ್ತಿಯ ಕೃಷ್ಣಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಕ್ಷರತಾ ದಿನಾಚರಣೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕವೃಂದ ಮತ್ತು ಪಾಲಕರು ಭಾಗವಹಿಸಿದ್ದರು. ಎಸ್.ವಸಂತಕುಮಾರ, ಮೇರಿ ರೀಟಾ, ಸಿದ್ದನಾಯಕ, ಮಂಜುನಾಥ್ ಇತರರಿದ್ದರು.
- ಎಸ್.ವಸಂತಕುಮಾರ ಅಭಿಮತ
- ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ
ಹುಣಸೂರು : ಶಿಕ್ಷಣ ಎಂಬುದು ಸಾಮಾಜಿಕ ಪರಿವರ್ತನೆಯೇ ಮೂಲ ಸಾಧನ ಎಂದು ತಾಲೂಕಿನ ಮುಳ್ಳೂರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಎಸ್.ವಸಂತಕುಮಾರ ಅಭಿಪ್ರಾಯಪಟ್ಟರು.
ತಾಲೂಕಿನ ಗಾವಡಗೆರೆ ಹೋಬಳಿಯ ಮುಳ್ಳೂರು ಕ್ಲಸ್ಟರ್‌ನ ಕೃಷ್ಣಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ನಿರ್ದೇಶನದಂತೆ ಆಯೋಜಿಸಿದ್ದ ಉಲ್ಲಾಸ್ ಸಾಕ್ಷರತಾ ಪಾಕ್ಷಿಕ ಮತ್ತು ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಎನ್ನುವುದು ಅಭಿವೃದ್ಧಿಯ ಮೂಲ ಮಂತ್ರ. ಸರ್ವರನ್ನೂ ಸಾಕ್ಷರರನ್ನಾಗಿಸುವ ಮೂಲಕ ಪ್ರಬುದ್ಧ ಸಮಾಜದ ನಿರ್ಮಾಣಕ್ಕೆ ಅಡಿಪಾಯ ಶಿಕ್ಷಣವಾಗಿದೆ. ಜನರು, ಭೂಮಿ, ಸಮೃದ್ಧಿಗಾಗಿ ಸಾಕ್ಷರತೆ ಎಂಬುದು ಸಾಕ್ಷರತೆ ದಿನಾಚರಣೆ ಕಾರ್ಯಕ್ರಮದ ಧ್ಯೇಯ ವಾಕ್ಯವಾಗಿದ್ದು, ಸಾಕ್ಷರತೆ ಮಾನವನ ಮೂಲ ಹಕ್ಕಾಗಿದ್ದು, ಪ್ರತಿಯೊಬ್ಬರನ್ನೂ ಸಾಕ್ಷರರನ್ನಾಗಿ ಮಾಡುವುದರ ಮೂಲಕ ಸುಸಜ್ಜಿತ ಸಮಾಜವನ್ನಾಗಿ ಪರಿವರ್ತಿಸೋಣ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸಿದ್ದನಾಯಕ, ಉಪಾಧ್ಯಕ್ಷ ಮಂಜುನಾಥ್, ಸದಸ್ಯರಾದ ಯೋಗೇಶ್, ರಕ್ಷಿತಾ, ನಮೀತಾ, ಪದ್ಮಮ್ಮ, ರತ್ನಮ್ಮ, ಗ್ರಾಪಂ ಮಾಜಿ ಸದಸ್ಯ ಸೋಮಶೇಖರ, ಶಾಲೆಯ ಮುಖ್ಯ ಶಿಕ್ಷಕಿ ಮೇರಿ ರೀಟಾ, ಸಹಶಿಕ್ಷಕರಾದ ರುಕ್ಮಿಣಿ, ಶ್ವೇತಾ, ಶ್ರುತಿ, ಪಾಲಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.