ಕೆಪಿಎಸ್‌ಶಾಲೆ, ಪ್ರೌಢಶಾಲೆ ವಿಭಾಗದ ಶ್ರೀ ತ್ರಿಪುರ ಸುಂದರಿ ಅಮ್ಮ ನವರ ರಂಗ ವೇದಿಕೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸಿ.ಪುಟ್ಟಸ್ವಾಮಿ, ಎಂ.ಡಿ. ಲೋಕೇಶ್, ಭಾಗ್ಯಾ, ಎಂ.ರಂಗಸ್ವಾಮಿ ಇದ್ದರು.
- ಸರ್ಕಾರಿ ಕೆ.ಪಿ. ಎಸ್ ಉಪಪ್ರಾಂಶುಪಾಲ ಸಿ.ಪುಟ್ಟಸ್ವಾಮಿ ಅಬಿಮತ
ಮೂಗೂರು: ವಿದ್ಯಾರ್ಥಿಗಳು ಭವಿಷ್ಯತ್ತಿನ ಸಮಸ್ಯೆಗಳನ್ನು ಸವಾಲಾಗಿ ತೆಗೆದುಕೊಂಡಾಗ ಸಾಧನೆ ಸಾಧ್ಯ ಎಂದು ಸರ್ಕಾರಿ ಕೆ.ಪಿ.ಎಸ್. ಉಪಪ್ರಾಂಶುಪಾಲ ಸಿ.ಪುಟ್ಟಸ್ವಾಮಿ ಅವರು ಅಭಿಪ್ರಾಯಿಸಿದರು.
ಕೆಪಿಎಸ್‌ಶಾಲೆ, ಪ್ರೌಢಶಾಲೆ ವಿಭಾಗದ ಶ್ರೀ ತ್ರಿಪುರ ಸುಂದರಿ ಅಮ್ಮ ನವರ ರಂಗ ವೇದಿಕೆಯಲ್ಲಿ ಶನಿವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ಶಿಕ್ಷಕರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವ್ಯಾಸಂಗದ ಅವಧಿಯಲ್ಲಿ ಶೈಕ್ಷಣಿಕ ಕಠಿಣ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹೊಸ ಪರಿಹಾರ ಹುಡುಕುವಲ್ಲಿ ವಿದ್ಯಾರ್ಥಿಗಳು ಪ್ರಯತ್ನ ಮಾಡಬೇಕು. ಶಿಕ್ಷಣ ಎಂಬುದು ಸುಖಕರವಾದ ಪ್ರಯಾಣವಲ್ಲ. ಆಳವಾದ ಅಧ್ಯಯನ ಮೂಲಕ ಸಾಧನೆ ಮಾಡಿ ದಂಡ ಸೇರಬೇಕಿದೆ. ವಿದ್ಯಾರ್ಥಿಗಳು ದಾರಿ ತಪ್ಪಿವುದು ಸಹಜ, ಕೆಟ್ಟ ಅಭ್ಯಾಸ ರೂಢಿಸಿಕೊಂಡರೆ ಜೀವನ ಅಧೋಗತಿಗೆ ಹೋಗುತ್ತದೆ. ಹೀಗಾಗದಂತೆ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಿ ಒಳ್ಳೆಯದನ್ನು ಮೈಗೂಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸನ್ಮಾನವನ್ನು ಸ್ವೀಕರಿಸಿದ ದೈಹಿಕ ಶಿಕ್ಷಣ ಶಿಕ್ಷಕರಾದ ಮಲ್ಲೇಶ್ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಎಂ.ಡಿ. ಲೋಕೇಶ್ ಉಪಾಧ್ಯಕ್ಷೆ ಭಾಗ್ಯಾ ಎಸ್‌ಡಿಎಂಸಿ ಅಧ್ಯಕ್ಷ ಎಂ ರಂಗಸ್ವಾಮಿ ಸಮಿತಿ ಸದಸ್ಯ ಪುಟ್ಟಮಾದಯ್ಯ ಶಿಕ್ಷಕರಾದ ಕೇಶವ್, ದೇವರಾಜ್, ಯೋಗೇಶ್, ಮಲ್ಲೇಶ್, ವೀಣಾ, ರಮೇಶ್, ಆನಂದ್, ರಂಗಯ್ಯ, ರೋಹಿತ್, ಮಧುಕುಮಾರ್, ನಿರ್ಮಲಾ ಸಿಬ್ಬಂದಿ ಹಾಜರಿದ್ದರು.