ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ರಾಜಶೇಖರ್. 
ಮೈಸೂರು

ಕುಡಿದ ಅಮಲಿನಲ್ಲಿ ವ್ಯಕ್ತಿಗೆ ಚಾಕುವಿನಿಂದ ಇರಿತ

ಎಂ.ರವಿ
ಸರಗೂರು: ಪಟ್ಟಣದಲ್ಲಿ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿಯಲಾಗಿದ್ದು, ಆತ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸರಗೂರು ಪೊಲೀಸರು ಬಂಧಿಸಿದ್ದಾರೆ.ಸರಗೂರು ತಾಲೂಕಿನ ಎಂ.ಸಿ.ತಳಲು ಗ್ರಾಮದ ರಾಜಶೇಖರ್ ಎಂಬುವರು ಚಾಕು ಇರಿತಕ್ಕೊಳಗಾದವರು. ಆರೋಪಿ ಆನಂದ ಬಂಧಿತ.
ಬುಧವಾರ ಮಧ್ಯಾಹ್ನ ಎಂ.ಸಿ.ತಳಲು ಗ್ರಾಮದಲ್ಲಿ ಆನಂದ ಎಂಬುವರು ಕುಡಿದು ಗ್ರಾಮಸ್ಥರಿಗೆ ಬೈಯ್ಯುತ್ತಿದ್ದರು ಎನ್ನಲಾಗಿದ್ದು, ಇದನ್ನು ಅದೇ ಗ್ರಾಮದ ಮಂಜು ಎಂಬುವರು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಆನಂದ ಕುಡಿದ ಮತ್ತಿನಲ್ಲಿ ಗ್ರಾಮದಲ್ಲಿ ಯಾರೇ ನನ್ನನ್ನು ಪ್ರಶ್ನಿಸಿದ್ದರೂ ಅವರಿಗೆ ಚಾಕುವಿನಿಂದ ಚುಚ್ಚುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಆಗ ಮಂಜುವಿನ ಪಕ್ಕದಲ್ಲೇ ನಿಂತಿದ್ದ ರಾಜಶೇಖರ್ ಅವರು ಆನಂದನಿಗೆ ಬುದ್ಧಿ ಹೇಳಿ ಸಮಾಧಾನ ಮಾಡಲು ಮುಂದಾಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಆನಂದ ತನ್ನ ಬಳಿಯಿದ್ದ ಚಾಕುವಿನಿಂದ ರಾಜಶೇಖರ್‌ನ ಹೊಟ್ಟೆ ಭಾಗಕ್ಕೆ ಬಲವಾಗಿ ಚುಚ್ಚಿದ್ದಾನೆ. ಇದರಿಂದ ರಾಜಶೇಖರ್ ಅವರಿಗೆ ತುಂಬ ರಕ್ತಸ್ರಾವವಾಗಿದ್ದು, ಪಟ್ಟಣದ ವಿವೇಕಾನಂದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.
ಈ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.