- ಆಲನಹಳ್ಳಿ ಠಾಣೆ ಹಾಗೂ ಸಿಸಿಬಿ ಪೊಲೀಸರ ಜಂಟಿ ಕಾರ್ಯಾಚರಣೆ
- 77.69 ಗ್ರಾಂ ತೂಕದಷ್ಟು ( ಲ್ಯಾಬ್ ಮೇಡ್ ಸಿಂಥೆಟಿಕ್ ಡ್ರಗ್ಸ್ ) ಮಾದಕ ವಸ್ತುಗಳನ್ನು ವಶ
- ಪೊಲೀಸರು ಅವರನ್ನು ಬೆನ್ನತ್ತಿ ಹಿಡಿದು, ಪರಿಶೀಲನೆ ನಡೆಸಿದಾಗ ಮಾದಕ ವಸ್ತು ಪತ್ತೆ
ಮೈಸೂರು: ನಗರದಲ್ಲಿ ಸುಮಾರು 5 ಲಕ್ಷ ರೂ. ಮೌಲ್ಯದ ಮಾದಕವಸ್ತುವನ್ನು ಜಪ್ತಿ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಆಲನಹಳ್ಳಿ ಠಾಣೆ ಹಾಗೂ ಸಿಸಿಬಿ ಪೊಲೀಸರ ಜಂಟಿ ಕಾರ್ಯಾಚರಣೆ ಇದಾಗಿದ್ದು, ರಾಜೀವ್‌ನಗರದ ನಯಾಜ್ ಪಾಷಾ(29), ವೆಂಕಟೇಶ್ವರ ಬಡಾವಣೆಯ ನವೀನ್‌ಕುಮಾರ್(36), ಉದಯಗಿರಿಯ ಫರೀದ್ ಪಾಷಾ(25), ಶಾಂತಿನಗರದ ತೌಹಿದ್ ಪಾಷಾ(31) ಬಂಧಿತ ಆರೋಪಿಗಳು.
77.69 ಗ್ರಾಂ ತೂಕದಷ್ಟು ( ಲ್ಯಾಬ್ ಮೇಡ್ ಸಿಂಥೆಟಿಕ್ ಡ್ರಗ್ಸ್ ) ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾವೇರಿ ಎನ್‌ಕ್ಲೇವ್ ಲೇಔಟ್ ಮುಖ್ಯರಸ್ತೆ ಪಕ್ಕದ ಖಾಲಿ ಜಾಗದಲ್ಲಿ ಬಿಳಿಬಣ್ಣದ ಕಾರು ನಿಂತುಕೊಂಡಿದ್ದನ್ನು ಗಸ್ತಿನಲ್ಲಿದ್ದ ಪೊಲೀಸರು ಗಮನಿಸಿದ್ದು, ಅದರ ಬಳಿ ತೆರಳಿದ್ದಾರೆ. ಕಾರು ಚಲಿಸಲಾರಂಭಿಸಿದಾಗ ಪೊಲೀಸರು ಅಡ್ಡಗಟ್ಟಿ ನಿಲ್ಲಿಸಿದ್ದಾರೆ.
ಈ ವೇಳೆ ಕಾರಿನಲ್ಲಿದ್ದ ನಾಲ್ವರು ಕೆಳಗಿಳಿದು ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ, ಪೊಲೀಸರು ಅವರನ್ನು ಬೆನ್ನತ್ತಿ ಹಿಡಿದು, ಪರಿಶೀಲನೆ ನಡೆಸಿದಾಗ ಕಾರಿನ ಡ್ಯಾಷ್‌ಬೋರ್ಡ್ ಹಾಗೂ ಆರೋಪಿಯೊಬ್ಬನ ಪ್ಯಾಂಟ್‌ನಲ್ಲಿ ಮಾದಕ ವಸ್ತು ಪತ್ತೆಯಾಗಿದೆ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.