ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
- ಕಾನೂನು ಸುವ್ಯವಸ್ಥೆ ಮತ್ತು ದುರ್ಬಲ ಆಡಳಿತದ ನೇರ ಫಲಿತಾಂಶ
- ಈ ಬೆಳವಣಿಗೆಗಳು ತೀವ್ರ ಕಳವಳಕಾರಿ
- ಮಾದಕ ದ್ರವ್ಯ ಜಾಲದ ತನಿಖೆಗಳು ಪದೇ ಪದೆ ಮೈಸೂರಿನತ್ತಲೇ ಬೆರಳು ತೋರಿಸುತ್ತಿವೆ.
ಮೈಸೂರು: ಮೈಸೂರಿನಲ್ಲಿ ಈ ಹಿಂದೆ ಬಂಧಿತನಾಗಿದ್ದ ಆರೋಪಿಯೊಬ್ಬ ನೀಡಿದ ಮಾಹಿತಿಯ ಮೇರೆಗೆ ಎನ್‌ಸಿಬಿ ಮೈಸೂರಿನಲ್ಲಿ ಮತ್ತೊಮ್ಮೆ ದಾಳಿ ನಡೆಸಿದೆ. ಅಲ್ಲಿ ಯಾವುದೇ ನಿಷೇಧಿತ ವಸ್ತುಗಳು ಪತ್ತೆಯಾಗದಿದ್ದರೂ, ಮೈಸೂರಿನಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ತೀವ್ರ ಕಳವಳಕಾರಿಯಾಗಿವೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ
ಮಾದಕ ದ್ರವ್ಯ ಜಾಲದ ತನಿಖೆಗಳು ಪದೇ ಪದೆ ಮೈಸೂರಿನತ್ತಲೇ ಬೆರಳು ತೋರಿಸುತ್ತಿವೆ. ಸಂಸ್ಕೃತಿ ಮತ್ತು ಪರಂಪರೆಗೆ ಹೆಸರಾಗಿದ್ದ ನಗರವು ಇಂದು ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಮಾದಕ ದ್ರವ್ಯ ತನಿಖೆಗಳಿಂದಾಗಿ ಅಪಖ್ಯಾತಿ ಪಡೆಯುವಂತಾಗಿದೆ.
ಇದು ಕೇವಲ ಕಾಕತಾಳೀಯವಲ್ಲ. ಇದು ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆ ಮತ್ತು ದುರ್ಬಲ ಆಡಳಿತದ ನೇರ ಫಲಿತಾಂಶವಾಗಿದೆ ಎಂದು ಪ್ರಕಟಣೆಯಲ್ಲಿ ದೂರಿದ್ದಾರೆ