ಮೈಸೂರು ರಂಗಾಯಣದಲ್ಲಿ ಶನಿವಾರ ‘ರಂಗಾಯಣ ರೆಪರ್ಟರಿಗಳ ನಾಟಕ ಉತ್ಸವದ ಪೋಸ್ಟರ್ ಅನ್ನು ಗಣ್ಯರು ಬಿಡುಗಡೆ ಮಾಡಿದರು. 
ಮೈಸೂರು

ಮೈಸೂರು ರಂಗಾಯಣದಲ್ಲಿ ನ.30 ರಿಂದ ನಾಟಕ ಉತ್ಸವ

ಪ್ರಮುಖ ಮುಖ್ಯಾಂಶಗಳು

  • ರಂಗಾಯಣ ರೆಪರ್ಟರಿಗಳ ನಾಟಕ ಉತ್ಸವ
  • ವಿವಿಧ ರಂಗಾಯಣ ತಂಡಗಳು ಭಾಗಿ
ಮೈಸೂರು: ಮೈಸೂರು ರಂಗಾಯಣ ವತಿಯಿಂದ ನ.30 ರಿಂದ ಡಿ.4ರವರೆಗೆ ‘ರಂಗಾಯಣ ರೆಪರ್ಟರಿಗಳ ನಾಟಕ ಉತ್ಸವ’ ಆಯೋಜಿಸಲಾ ಗಿದೆ ಎಂದು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಹೇಳಿದರು.
ಇದೇ ಪ್ರಥಮ ಬಾರಿಗೆ ‘ರಂಗಾಯಣ ರೆಪರ್ಟರಿಗಳ ನಾಟಕ ಉತ್ಸವ’ ಆಯೋಜಿಸಲಾಗಿದೆ. ಕಾರ್ಕಳದ ಯಕ್ಷ ರಂಗಾಯಣ, ಶಿವಮೊಗ್ಗ ರಂಗಾಯಣ, ಧಾರವಾಡ ರಂಗಾಯಣ, ದಾವಣಗೆರೆಯ ವೃತ್ತಿ ರಂಗಾಯಣ, ಕಲಬುರಗಿ ರಂಗಾಯಣ ಹಾಗೂ ಮೈಸೂರು ರಂಗಾಯಣ ತಂಡಗಳು ಭೂಮಿಗೀತ ರಂಗಮಂದಿರದಲ್ಲಿ ನಿಗದಿತ ದಿನಾಂಕದಲ್ಲಿ ಸಂಜೆ 6.30ಕ್ಕೆ ನಾಟಕ ಪ್ರದರ್ಶನ ನೀಡಲಿವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಾಟಕಗಳ ವಿವರ

ನ.30 ರಂದು ಕಾರ್ಕಳದ ಯಕ್ಷ ರಂಗಾಯಣ ತಂಡದಿಂದ ಬಿ.ಆರ್.ವೆಂಕಟರಮಣ ಐತಾಳ್ ನಿರ್ದೇಶನದ ಗುಲಾಮನ ಸ್ವಾತಂತ್ರೃ, ಡಿ.1ರಂದು ಕಾರ್ಕಳದ ಯಕ್ಷ ರಂಗಾಯಣ ತಂಡದಿಂದ ಎನ್.ವಿ. ಶ್ರೀಕಾಂತ್ ನಿರ್ದೇಶನದ ಮಹಾತ್ಮರ ಬರವಿಗಾಗಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಡಿ.7ರಂದು ಮೈಸೂರು ರಂಗಾಯಣ ತಂಡದಿಂದ ಗಣೇಶ್ ಮಂದಾರ್ತಿ ನಿರ್ದೇಶನದ ಮೈ ಫ್ಯಾಮಿಲಿ ನಾಟಕ, 14ರಂದು ಶಿವಮೊಗ್ಗ ರಂಗಾಯಣದ ತಂಡದಿಂದ ಚಿದಂಬರರಾವ್ ಜಂಬೆ ನಿರ್ದೇಶನದ ನಮ್ಮೊಳಗೊಬ್ಬ ಗಾಂಧಿ, 21ರಂದು ದಾವಣಗೆರೆ ರಂಗಾಯಣ ತಂಡದಿಂದ ಮಾಲತೇಶ್ ಬಡಿಗೇರ್ ನಿರ್ದೇಶನದ ಪ್ರತಿ ಗಂಧರ್ವ ನಾಟಕ, 28ರಂದು ಧಾರವಾಡ ರಂಗಾಯಣದಿಂದ ಡಾ. ಪ್ರಕಾಶ್ ಗರುಡ ನಿರ್ದೇಶನದ ಕಂದಗಲ್ಲ ಭಾರತ ನಾಟಕ, ಜ.4ರಂದು ಕಲಬುರ್ಗಿ ರಂಗಾಯಣ ತಂಡದಿಂದ ಹುಲುಗಪ್ಪ ಕಟ್ಟಿಮನಿ ನಿರ್ದೇಶನದ ಕಾಲಚಕ್ರ ನಾಟಕ ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಉಪನಿರ್ದೇಶಕ ಎಂ.ಡಿ. ಸುದರ್ಶನ್, ಹಿರಿಯ ರಂಗ ಕಲಾವಿದೆಯರಾದ ಕೆ.ಆರ್. ನಂದಿನಿ, ಬಿ.ಆರ್. ಶಶಿಕಲಾ ಇದ್ದರು.