ನಾಟಕಕಾರ ಹೊರೆಯಾಲ ದೊರೆಸ್ವಾಮಿ ಅವರು ‘ದೊರೆ ದಡಿಯಪ್ಪ’ ನಾಟಕವನ್ನು ವಾಚಿಸಿದರು. ಹಿರಿಯ ರಂಗಕರ್ಮಿ ಕೆ.ಜೆ. ನಾರಾಯಣ ಶೆಟ್ಟಿ, ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಕೃಷ್ಣ ಜನಮನ ಇದ್ದರು. 
ಮೈಸೂರು

ದೊರೆ ದಡಿಯಪ್ಪ ನಾಟಕ ವಾಚನ

ಅವಿನಾಶ್ ಜೈನಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಗಂಟೆಗೂ ಹೆಚ್ಚು ಕಾಲ ಸೆಳೆದ ನಾಟಕಕಾರ ಹೊರೆಯಾಲ ದೊರೆಸ್ವಾಮಿ
ಸಿರಂಗ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ನಗರದ ರಂಗಾಯಣ ಆವರಣದ ಬಿ.ವಿ.ಕಾರಂತ ರಂಗ ವೇದಿಕೆಯಲ್ಲಿ ‘ದೊರೆ ದಡಿಯಪ್ಪ’ ನಾಟಕ ವಾಚನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಾಟಕಕಾರ ಹೊರೆಯಾಲ ದೊರೆಸ್ವಾಮಿ ತಮ್ಮದೇ ನಾಟಕವಾದ ‘ದೊರೆ ದಡಿಯಪ್ಪ’ ನಾಟಕವನ್ನು ಗ್ರಾಮೀಣ ಸೊಗಡಿನಲ್ಲಿ ವಾಚಿಸುವ ಮೂಲಕ ನೆರೆದಿದ್ದವರನ್ನು ಗಂಟೆಗೂ ಹೆಚ್ಚು ಕಾಲ ಸೆಳೆದಿಡುವಲ್ಲಿ ಯಶಸ್ವಿಯಾದರು.
ಐತಿಹಾಸಿಕ ನಾಟಕದ ಹಿನ್ನೆಲೆಯನ್ನು ಹೇಳಿದ ಅವರು, 1984ರಲ್ಲಿ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದ ಮುಂಭಾಗದ ಉದ್ಯಾನದಲ್ಲಿ ಮಾಡಿದ ಮೊದಲ ನಾಟಕ ವಾಚನವನ್ನು ನೆನಪು ಮಾಡಿಕೊಂಡರು. ಪ್ರೊ.ರಾಮದಾಸ್, ವಿಜಯಾ ದಬ್ಬೆ, ಅನಂತರಂಗಾಚಾರ್, ಶಿವರಾಮ ಕಾಡನಕುಪ್ಪೆ ಮೊದಲಾದವರನ್ನು ಸ್ಮರಿಸಿದರು.
ನಾಟಕದ ಪಾತ್ರಗಳ ಪರಿಚಯ ತಿಳಿಸಿ, ಸೂತ್ರಧಾರಿಯ ಸಂಭಾಷಣೆ ಓದಿದ ಅವರು, ಹಳ್ಳಿಯೊಂದರ ಸಾಮಾನ್ಯ ಒಕ್ಕಲು ಮಾಡುವ ರೈತ ದೊರೆಯಾಗಿ ಬೆಳೆದು ನಿಂತ ಪರಿಯನ್ನು ತಮ್ಮ ವಿಶಿಷ್ಟ ಓದಿನ ದಾಟಿಯಲ್ಲಿ ಕಟ್ಟಿಕೊಡುವ ಮೂಲಕ ಎಲ್ಲರ ಗಮನ ಸೆಳೆದರು.
ಚಾಲುಕ್ಯರ ಪುಲಿಕೇಶಿ, ರಾಷ್ಟ್ರಕೂಟರ ಅಮೋಘವರ್ಷ, ಗಂಗರ ದುರ್ವಿನೀತ, ಕದಂಬರ ಮಯೂರವರ್ಮ, ಸೇವುಣರ ಸಿಂಘಣ, ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿದಂತೆ ಎಲ್ಲ ರಾಜಮನೆತನಗಳ ಪ್ರಮುಖರನ್ನು ನೆನಪು ಮಾಡಿಕೊಳ್ಳುತ್ತೇವೆ. ಆದರೆ, ಮೊದಲ ದೊರೆಯು ಆದ ಬಗೆ ಹೇಗೆ ಎಂಬ ಬಗ್ಗೆ ನನಗೆ ಎಂದಿಗೂ ಕುತೂಹಲವಿತ್ತು. ಹೀಗಾಗಿ, ಮಾಂಡಲೀಕರು ರಾಜನಾಗುವ ಕಥನವೇ ರೋಚಕವಾಗಿರುತ್ತದೆ. ಮಯೂರ ಶರ್ಮ, ವರ್ಮನಾದ ಬಗ್ಗೆ ಎಷ್ಟೊಂದು ಕಥಾನಕಗಳಿವೆ ಎಂದು ಉದಾಹರಿಸಿದರು.
ಹಿರಿಯ ರಂಗಕರ್ಮಿ ಕೆ.ಜೆ. ನಾರಾಯಣ ಶೆಟ್ಟಿ, ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಕೃಷ್ಣ ಜನಮನ ಇದ್ದರು.