ಮನೆ ಕಳ್ಳತನ 
ಮೈಸೂರು

ಬಾಗಿಲು ಮುರಿದು ಬೆಳ್ಳಿಯ ಆಭರಣ, ನಗದು ಕಳವು

ಮೈಸೂರು: ನಗರದ ಶ್ರೀರಾಂಪುರದಲ್ಲಿ ಮನೆಯೊಂದರ ಬಾಗಿಲು ಮುರಿದು ಒಳನುಗ್ಗಿದ ಖದೀಮರು, 120 ಗ್ರಾಂ ತೂಕದ ಬೆಳ್ಳಿಯ ಆಭರಣ, 10 ಸಾವಿರ ರೂ. ನಗದು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.
ಮೇಘನಾ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. ಜ.2ರಂದು ಅವರು ಮನೆಯಿಂದ ಹೊರ ಹೋಗಿ ಮರಳಿ ಬಂದಾಗ ಮನೆಯ ಬಾಗಿಲು ತೆರೆದಿತ್ತು. 
ಒಳಗೆ ಹೋಗಿ ನೋಡಿದಾಗ ಕೋಣೆಯ ಅಲ್ಮೆರಾದಲ್ಲಿದ್ದ ನಗದು, ಆಭರಣಗಳು ಕಳ್ಳತನವಾಗಿದ್ದವು. ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.