ಹನಗೋಡು ಹೋಬಳಿಯ ರಾಮೇನಹಳ್ಳಿಯಲ್ಲಿ ನಡೆದ ಓಂಕಾರೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರು ನೂತನ ರಥ ನಿರ್ಮಾಣಕ್ಕೆ 5 ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಿಸಿದರು.
ಹನಗೋಡು: ರಾಮೇನಹಳ್ಳಿ ಓಂಕಾರೇಶ್ವರ ದೇವಾಲಯದ ನೂತನ ರಥ ನಿರ್ಮಿಸಲು 5 ಲಕ್ಷ ರೂ. ದೇಣಿಗೆ ನೀಡುವುದಾಗಿ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಘೋಷಿಸಿದರು.
ಓಂಕಾರೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ದೇವಾಲಯ ಸೇವಾ ಸಮಿತಿಯವರು ಕಳೆದ ಮೂರು ವರ್ಷಗಳಿಂದ ನೂತನ ರಥ ನಿರ್ಮಿಸಲು ಮುಂದಾಗಿದ್ದರೂ ಕಾರ್ಯ ಕೈಗೂಡಿಲ್ಲ. ದೇವರ ಕಾರ್ಯವು ವಿಳಂಬ ಮಾಡಿದರೆ ಗ್ರಾಮಕ್ಕೆ ಶ್ರೇಯಸ್ಸು ಆಗುವುದಿಲ್ಲ. ಆದ್ದರಿಂದ ಗ್ರಾಮಸ್ಥರು ಮುಂದೆ ಬಂದರೆ ರಥ ನಿರ್ಮಾಣಕ್ಕೆ ತಮ್ಮ ತಾಯಿ ಹೆಸರಿನಲ್ಲಿ 5 ಲಕ್ಷದ ಒಂದು ರೂ. ದೇಣಿಗೆ ನೀಡವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ದೇವಾಲಯ ಸೇವಾ ಸಮಿತಿ ಹಾಗೂ ರಾಮೇನಹಳ್ಳಿ ನಿಲುವಾಗಿಲು ಗ್ರಾಮದ ಸ್ನೇಹಜೀವಿ ಅಭಿಮಾನಿಗಳು ಮಂಜುನಾಥ್ ಅವರನ್ನು ಸನ್ಮಾನಿಸಿದರು. ಗ್ರಾಮದ ಮುಖಂಡ ಶಿವಾನಂದ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಲ್ಕುಣಿಕೆ ರಾಘು, ಕಾಂಗ್ರೆಸ್ ಮಾಜಿ ಕಾರ್ಯಾಧ್ಯಕ್ಷ ವಕೀಲ ಪುಟ್ಟರಾಜ್, ದೇವಾಲಯದ ಸೇವಾ ಸಮಿತಿಯವರಾದ ರಾಜೇಶ, ಪ್ರಭಾಕರ, ಮುತ್ತ, ಅಶೋಕ, ಕುಮಾರ ಶ್ರೀನಿವಾಸ, ರಾಮಚಂದ್ರನಾಯಕ, ಉಮೇಶ್, ಜ್ಞಾನೇಶ ಇದ್ದರು.