ನಗರದ ಘಟಿಕೋತ್ಸವ ಭವನದಲ್ಲಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆದಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಡಾ.ಡಿ.ತಿಮ್ಮಯ್ಯ, ಡಾ.ಕೆ.ಆರ್.ದಾಕ್ಷಾಯಣಿ, ಡಾ.ಕೆ.ಮಹದೇವ್, ಡಾ.ಎಚ್.ಸುನೀಲ್, ತನುಜಾ ಮಹೇಶ್, ಡಾ.ಕೆ.ಸತೀಶ್ ಇತರರಿದ್ದರು. 
ಮೈಸೂರು

ರೋಗಿಗಳಿಗೆ ವೈದ್ಯರು ಬಾಧಕರಾಗದಿರಲಿ

ಪ್ರಮುಖ ಮುಖ್ಯಾಂಶಗಳು

  • ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಇಂಗಿತ
  • ಪದವಿ ಪ್ರದಾನ ಕಾರ್ಯಕ್ರಮ
ಮೈಸೂರು: ನೋವಿಂದ ಬಂದವರಿಗೆ ವೈದ್ಯರು ನಿವಾರಕರಾಗಬೇಕೇ ಹೊರತು ಬಾಧಕರಾಗಬಾರದು ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ  ಸಲಹೆ ನೀಡಿದರು.
ನಗರದ ಮುಕ್ತಗಂಗೋತ್ರಿಯಲ್ಲಿರುವ ಘಟಿಕೋತ್ಸವ ಭವನದಲ್ಲಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಇತ್ತೀಚಿಗೆ ಆಯೋಜಿಸಿದ್ದ ‘ಸಮ್ಮರ್ ಡ್ರೀಮಸ್’ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೈದ್ಯಕೀಯ ವೃತ್ತಿಯು ವರ ಪ್ರಧಾನವಾದ ವೃತ್ತಿ. ಆದರೆ ಇದಕ್ಕೊಂದು ಗುರಿ, ಜವಾಬ್ದಾರಿ ಇರುತ್ತದೆ. ಕಷ್ಟ ಮತ್ತು ನೋವು ಎಂದು ಬಂದವರಿಗೆ ಸ್ಪಂದಿಸಬೇಕು. ರೋಗಿಗಳನ್ನು ತಮ್ಮ ಸ್ವಂತ ಪಾಲಕರು, ಅಣ್ಣ, ತಮ್ಮ ಎಂದು ತಿಳಿದು ಚಿಕಿತ್ಸೆ ನೀಡಬೇಕು. ಬಹಳಷ್ಟು ಜನ ನಂಬಿಕೆಯೊಂದಿಗೆ ವೈದ್ಯರ ಬಳಿ ಬರುತ್ತಾರೆ.
 ಆ ನಂಬಿಕೆ ಉಳಿಸಿಕೊಳ್ಳಬೇಕು. ಆರೋಗ್ಯವಂತ ಸಮಾಜ ಕಟ್ಟಬೇಕು ಮತ್ತು ಉತ್ತಮ ಗುಣವುಳ್ಳವರಾಗಿರಬೇಕು. ಆಗ ಮಹತ್ಮರಾಗಬಹುದು ಎಂದು ಕಿವಿಮಾತು ಹೇಳಿದರು.
‘ಒಳಿತು ಮಾಡು ಮನುಷ್ಯ, ನೀ ಇರೋದು ಮೂರು ದಿವಸ’ ಎಂಬುವಂತೆ ಒಳಿತು ಮಾಡು ವೈದ್ಯ ನಿನ್ನ ಕೈಲಾಗುವ ತನಕ, ಉಸಿರು ಉಳಿದರೆ ನಿನ್ನ ಹೆಸರು ಬೆಳೆಯುತಾದ ಎಂಬಂತೆ ಬದುಕಬೇಕು ಎಂದರು. 2020-2026ನೇ ಸಾಲಿನ ಎಂಬಿಬಿಎಸ್  ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಕಾಲೇಜಿನ ನಿರ್ದೇಶಕಿ ಹಾಗೂ ಡೀನ್ ಡಾ.ಕೆ.ಆರ್.ದಾಕ್ಷಾಯಣಿ, ಆಡಳಿತ ಮಂಡಳಿ ಸದಸ್ಯರಾದ ಡಾ.ಕೆ.ಮಹದೇವ್, ಡಾ.ಎಚ್.ಸುನೀಲ್, ತನುಜಾ ಮಹೇಶ್, ಪ್ರಾಂಶುಪಾಲ ಡಾ.ಕೆ.ಸತೀಶ್, ಎಂಎಎ ಅಧ್ಯಕ್ಷ ಡಾ.ಪಿ.ಮಾಲೇಗೌಡ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ.ಎಂ.ಶ್ವೇತಾ, ಕಾರ್ಯದರ್ಶಿ ಡಾ.ಜಿ.ನಟರಾಜು, ಪ್ರಧಾನ ಕಾರ್ಯದರ್ಶಿ ಡಾ.ಸಮೃದ್ಧಿ, ಸಹ ಪ್ರಧಾನ ಕಾರ್ಯದರ್ಶಿ ಡಾ.ಪಿ.ಶರಂದೀಪ್, ಡಾ.ಚಿನ್ಮಯಿ ನಾಯಕ್ ಇದ್ದರು.