ಮಾನಸಗಂಗೋತ್ರಿಯ ಸ್ಕೂಲ್ ಆ್ ಪ್ಲಾ್ಲೃನಿಂಗ್ ಆ್ಯಂಡ್ ಆರ್ಕಿಟೆಕ್ಟರ್ ವಿಭಾಗ ಪ್ರೊ.ಕೆ.ಎಸ್.ರಂಗಪ್ಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಉದ್ಘಾಟಿಸಿದರು. ಡಾ.ಎಸ್.ಗೋಪಿ ಪ್ರಸಾದ್, ಪ್ರೊ.ಪ್ರಮೋದ್ ಎಂ.ಗವಾರಿ ಇದ್ದರು.
ಮೈಸೂರು: ರಾಜರು ನಗರವನ್ನು ಕಟ್ಟುವಾಗ ದೂರದೃಷ್ಟಿಯಿಂದ ಏನೆಲ್ಲ ಇರಬೇಕು, ಹೇಗೆ ಇರಬೇಕು ಎಂಬುವುದನ್ನು ಯೋಜಿಸಿ, ಮುಂದಿನ ತಲೆಮಾರಿಗೆ ಉಪಯೋಗವಂತೆ ನಿರ್ಮಾಣ ಮಾಡುತ್ತಿದ್ದರು. ಈಗಿನ ತಲೆಮಾರುಗಳು ಅದನ್ನು ಅನುಸರಿಸಿದರೆ ನಗರದಲ್ಲಿ ಅನೇಕ ಸಮಸ್ಯೆಗಳಿಗೆ ಕಡಿವಾಣ ಹಾಕಬಹುದು ಎಂದು ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.
ನಗರದ ಮಾನಸಗಂಗೋತ್ರಿಯ ಸ್ಕೂಲ್ ಆ್ ಪ್ಲಾೃನಿಂಗ್ ಆ್ಯಂಡ್ ಆರ್ಕಿಟೆಕ್ಟರ್ ವಿಭಾಗ ವತಿಯಿಂದ ವಿಭಾಗದ ಪ್ರೊ.ಕೆ.ಎಸ್.ರಂಗಪ್ಪ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ‘ಅರ್ಬನ್ ವಲ್ನೆರೆಬಿಲಿಟಿ ಅಸೆಸ್‌ಮೆಂಟ್ ಆ್ಯಂಡ್ ಕ್ಲೈಮೇಟ್ ಚೇಂಜ್’ ಕುರಿತು ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಬೆಳವಣಿಗೆ ಎಂದರೆ ಸುಂದರ ಕಟ್ಟಡಗಳನ್ನು ಕಟ್ಟುವುದಿಲ್ಲ, ಪರಿಸರವನ್ನು ಉಳಿಸುವುದು ಕೂಡ ಆಗಿದೆ ಎಂದರು.
ಸರ್ ಎಂ. ವಿಶ್ವೇಶ್ವರಯ್ಯ ತಮ್ಮ ದೂರದೃಷ್ಟಿ ಲವಾಗಿ ಹಲವು ಯೋಜನೆಗಳನ್ನು ಯಶ ಗೊಳಿಸಿದರು. ನಮ್ಮ ಆಲೋಚನೆಗಳು ಕೂಡ ಉತ್ತಮವಾಗಿರಬೇಕು. ಮೊದಲು ನಾವು ಬದಲಾಗಬೇಕು, ನಂತರ ಸಮಾಜವನ್ನು ಬದಲಾಯಿಸಬೇಕು. ಉತ್ತಮ ಯೋಜನೆ ಇದ್ದಾಗ ನಮ್ಮ ಯೋಜನೆಗಳು ಸರಿದಾರಿಯಲ್ಲಿ ಹೋಗುತ್ತದೆ ಎಂದರು.
ನಗರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು: ಮಾನವ ನಿರ್ಮಿತ ಸಮಸ್ಯೆಗಳ ಬಗ್ಗೆ ನಾವೇ ಸರಿಪಡಿಸುವ ಮಾತನಾಡುತ್ತಿದ್ದೇವೆ. ನಮ್ಮ ಸ್ವಂತದ ಬಗ್ಗೆ ಮಾತ್ರ ಯೋಚಿಸಿ ಪರಿಸರಕ್ಕೆ ವಿರುದ್ಧವಾದ ರೀತಿ ಕಟ್ಟಡ ನಿರ್ಮಿಸುತ್ತಿದ್ದೇವೆ. ನಗರವನ್ನು ಮನೆಯೆಂದು ಯೋಚಿಸಬೇಕು. ಕಸವನ್ನು ಇನ್ನೊಬ್ಬರ ಕಾಂಪೌಂಡ್‌ಗೆ ಬಿಸಾಡುವ ಮನಸ್ಥಿತಿಯಿಂದ ದೂರ ಸರಿದು, ನಗರವನ್ನು ಸುಂದರ, ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ಎನ್.ಕೆ.ಲೋಕನಾಥ್ ತಿಳಿಸಿದರು.
ಪುರವಂಕರ ಆ್ಯಂಡ್ ಪ್ರಾವಿಡೆಂಟ್ ಹೌಸಿಂಗ್ ಲಿಮಿಟೆಡ್ ಮುಖ್ಯಸ್ಥ ಡಾ.ಎಸ್.ಗೋಪಿಪ್ರಸಾದ್ ಮಾತನಾಡಿದರು. ಸ್ಕೂಲ್ ಆ್ ಪ್ಲಾ್ಲೃನಿಂಗ್ ಆ್ಯಂಡ್ ಆರ್ಕಿಟೆಕ್ಟರ್ ವಿಭಾಗದ ನಿರ್ದೇಶಕ ಪ್ರೊ.ಪ್ರಮೋದ್ ಎಂ.ಗವಾರಿ, ಮುಖ್ಯಸ್ಥ ಪ್ರೊ.ಎಚ್.ಎನ್.ನಾಗೇಂದ್ರ, ಸಂಚಾಲಕ ಡಾ.ಎಚ್.ಎಸ್.ಕುಮಾರ್ ಮತ್ತಿತರರು ಇದ್ದರು.