ಡಿ.ಕೆ.ಶಿವಕುಮಾರ್‌ಗೆ ಸಿಎಂ ಸ್ಥಾನ ದೊರೆಯಲಿ ಎಂದು ಅಭಿಮಾನಿಗಳು ಚಾಮುಂಡಿಬೆಟ್ಟದಲ್ಲಿ ಶುಕ್ರವಾರ ಬೆಳ್ಳಿರಥ ಎಳೆದರು.
- ಡಿ.ಕೆ. ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನಕ್ಕೆ ಪೂಜೆ
- ಬೆಳ್ಳಿರಥ ಎಳೆದು ಭಕ್ತಿ ಮೆರೆದ ಅಭಿಮಾನಿಗಳು
ಮೈಸೂರು: ಮುಖ್ಯಮಂತ್ರಿ ಸ್ಥಾನ ಡಿ.ಕೆ. ಶಿವಕುಮಾರ್‌ಗೆ ದೊರೆಯಲಿ ಎಂದು ಪ್ರಾರ್ಥಿಸಿ ಅವರ ಅಭಿಮಾನಿಗಳು ಶುಕ್ರವಾರ ಚಾಮುಂಡಿ ಬೆಟ್ಟದಲ್ಲಿ ಬೆಳ್ಳಿರಥ ಎಳೆದು ವಿಶೇಷ ಸೇವೆ ಸಲ್ಲಿಸಿದರು.
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 136 ಸ್ಥಾನಗಳನ್ನು ಪಡೆಯುವಲ್ಲಿ ಡಿ.ಕೆ. ಶಿವಕುಮಾರ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಹಾಗಾಗಿ ಅವರಿಗೆ ಸಿಎಂ ಸ್ಥಾನ ದೊರೆಯಲಿ ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸಿದರು.ಈ ಸಂದರ್ಭ ಅಭಿಮಾನಿಗಳಾದ ಜಿ.ಶ್ರೀನಾಥ್ ಬಾಬು, ಜಿ. ರಾಘವೇಂದ್ರ, ಹರೀಶ್ ಗೌಡ, ಎಸ್.ಎನ್. ರಾಜೇಶ್, ಶಶಾಂಕ್ ಗೌಡ, ಚಂದ್ರು, ಕಿರಣ್, ಪ್ರಸನ್ನ ಕುಮಾರ್, ದಿನೇಶ್ ಹಾಗೂ ಇತರರು ಇದ್ದರು.