ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಲಾಯಿತು. ಡಿ.ಟಿ.ಪ್ರಕಾಶ್,ಗೋಪಾಲ್ರಾವ್, ಕೆ. ಆರ್. ಸತ್ಯನಾರಾಯಣ್, ಎಂ.ಆರ್. ಬಾಲಕೃಷ್ಣ, ಡಾ.ಲಕ್ಷ್ಮೀದೇವಿ, ರಾಜಗೋಪಾಲ್, ಕಡಕೋಳ ಜಗದೀಶ್, ರವಿಶಾಸ್ತ್ರಿ, ವಿ. ಹರೀಶ್, ಸೌಭಾಗ್ಯಾಮೂರ್ತಿ, ಎಸ್. ರಂಗನಾಥ, ಸುರೇಶ್, ಕೆ.ಎಂ. ನಿಶಾಂತ್, ಅಜಯ್ ಶಾಸ್ತ್ರಿ, ಕಲ್ಕೆರೆ ನಾಗರಾಜ್ ಇತರರಿದ್ದರು.
- ಸಮುದಾಯವನ್ನು ಸಾಮಾಜಿಕವಾಗಿ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ನೂತನ ಸಮಿತಿ
- ಶಿಕ್ಷಣ ಆರೋಗ್ಯ ಉದ್ಯೋಗ, ಧಾರ್ಮಿಕ, ಸಾಂಸ್ಕೃತಿಕ ಸಾಹಿತ್ಯ ಸಹಕಾರಿ
ಮೈಸೂರು:ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಪದಾಧಿಕಾರಿಗಳಿಗೆ ನೇಮಕ ಪತ್ರ ವಿತರಿಸಲಾಯಿತು. ನಗರದ ಸರಸ್ವತಿಪುರಂನಲ್ಲಿರುವ ಮೈಸೂರಿನ ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2026-27ನೇ ಸಾಲಿನ ಪದಾಧಿಕಾರಿಗಳಿಗೆ ಪತ್ರ ನೀಡಿ ಶುಭ ಕೋರಲಾಯಿತು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಮಾತನಾಡಿ, ನಗರದಲ್ಲಿ ಬ್ರಾಹ್ಮಣ ಸಮುದಾಯವನ್ನು ಸಾಮಾಜಿಕವಾಗಿ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ನೂತನ ಸಮಿತಿಯನ್ನು ರಚಿಸಲಾಗಿದೆ. ಶಿಕ್ಷಣ ಆರೋಗ್ಯ ಉದ್ಯೋಗ, ಧಾರ್ಮಿಕ, ಸಾಂಸ್ಕೃತಿಕ ಸಾಹಿತ್ಯ ಸಹಕಾರಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ವಿಪ್ರ ಸಮುದಾಯವರಿಗೆ ಬೆನ್ನುಲುಬಾಗಿ ನಿಂತು ವಿಪ್ರರ ಪ್ರಾತಿನಿಧ್ಯಕ್ಕೆ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಪ್ರೊತ್ಸಾಹಿಸಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದ್ದು, ಮೈಸೂರು ಜಿಲ್ಲಾ ವ್ಯಾಪ್ತಿಯ ಬ್ರಾಹ್ಮಣರು, ಸಂಘ ಸಂಸ್ಥೆಗಳು ತಮ್ಮನ್ನು ಸಂಪರ್ಕಿಸುವಂತೆ ಕೋರಿದರು.
ಸಂಘದ ಅಧ್ಯಕ್ಷರಾಗಿ ಡಿ.ಟಿ.ಪ್ರಕಾಶ್, ಉಪಾಧ್ಯಕ್ಷರಾಗಿ ಗೋಪಾಲ್ರಾವ್, ಕೆ. ಆರ್. ಸತ್ಯನಾರಾಯಣ್, ಎಂ.ಆರ್. ಬಾಲಕೃಷ್ಣ, ಡಾ.ಲಕ್ಷ್ಮೀದೇವಿ, ರಾಜಗೋಪಾಲ್, ಕಡಕೋಳ ಜಗದೀಶ್, ರವಿ ಶಾಸ್ತ್ರಿ, ಪ್ರಧಾನ ಕಾರ್ಯದರ್ಶಿಯಾಗಿ ವಿ. ಹರೀಶ್, ಸಂಘಟನಾ ಕಾರ್ಯದರ್ಶಿಗಳಾಗಿ ಸೌಭಾಗ್ಯಾಮೂರ್ತಿ, ಎಸ್. ರಂಗನಾಥ, ಸುರೇಶ್, ಕೆ.ಎಂ. ನಿಶಾಂತ್, ಅಜಯ್ ಶಾಸ್ತ್ರಿ, ಕಲ್ಕೆರೆ ನಾಗರಾಜ್, ಖಚಾಂಚಿಯಾಗಿ ಎಂ.ಎ. ಸುಮಾ, ಮಂಜುನಾಥ, ಜಂಟಿ ಕಾರ್ಯದರ್ಶಿಗಳಾಗಿ ಜ್ಯೋತಿ, ಲತಾ ಬಾಲಕೃಷ್ಣ, ಟಿ.ಎಸ್.ಅರುಣ್, ಮಾಧ್ಯಮ ಸಂಚಾಲಕರಾಗಿ ವಿಕ್ರಮ್ ಅಯ್ಯಂಗಾರ್ ಅವರನ್ನು ಆಯ್ಕೆಮಾಡಲಾಯಿತು.