ಎಚ್.ಡಿ.ಕೋಟೆ ಪಟ್ಟಣದ ಪೆಢಿನಾ ವಿಕಾಸ ಸಂಸ್ಥೆಯಲ್ಲಿ ರೈತರಿಗೆ ಕೃಷಿ ಪರಿಕರಗಳ ವಿತರಣೆ ಹಾಗೂ ಕೃಷಿ ಬಗ್ಗೆ ತರಬೇತಿ ಕಾರ್ಯಾಗಾರ ನಡೆಯಿತು. ಎಂ.ಬಿ.ರವೀಂದ್ರ, ಹೈರಿಗೆ ಎಚ್.ಡಿ.ಶಿವರಾಜು, ಸೋಮೇಶ್ ಭೀಮನಹಳ್ಳಿ ಇತರರು ಇದ್ದರು.
ಎಚ್.ಡಿ.ಕೋಟೆ: ಪಟ್ಟಣದ ಪೆಢಿನಾ ವಿಕಾಸ ಸಂಸ್ಥೆಯಲ್ಲಿ ಶುಕ್ರವಾರ ಚಾಮರಾಜನಗರ ಜಿಲ್ಲೆ ಹರದನಹಳ್ಳಿ ಕೃಷಿ ವಿಶ್ವವಿದ್ಯಾಲಯ ಹಾಗೂ ಎಚ್.ಡಿ.ಕೋಟೆ ತಾಲೂಕು ಸಮತಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ರೈತರಿಗೆ ಕೃಷಿ ಪರಿಕರಗಳ ವಿತರಣೆ ಹಾಗೂ ಕೃಷಿ ಬಗ್ಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಸಮತಾ ಟ್ರಸ್ಟ್ ಅಧ್ಯಕ್ಷ ಎಂ.ಬಿ.ರವೀಂದ್ರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳಾದ ಡಾ. ಶಶಿಕುಮಾರ್ ಹಾಗೂ ಡಾ. ನಾವಿ ಅವರು ಹತ್ತಿ ಬೆಳೆಗಳಿಗೆ ತಗಲುವ ರೋಗ ಬಾಧೆಗಳ ಬಗ್ಗೆ ಹಾಗೂ ಅದನ್ನು ತಡೆಗಟ್ಟಲು ಯಾವ ಯಾವ ಕ್ರಮಗಳನ್ನು ಅನುಸರಿಸಬೇಕು ಎಂದು ರೈತರಿಗೆ ಮಾಹಿತಿ ನೀಡಿದರು.
ಟಿಎಸ್ಪಿ ಯೋಜನೆ ಅಡಿ ಆಯ್ದ ರೈತರಿಗೆ ಔಷಧ ಪರಿಕರಗಳನ್ನು ಉಚಿತವಾಗಿ ನೀಡಲಾಯಿತು.
ಕಾರ್ಯಾಗಾರದಲ್ಲಿ ತಾಲೂಕು ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಹೈರಿಗೆ ಎಚ್.ಡಿ.ಶಿವರಾಜು, ಸೋಮೇಶ್ ಭೀಮನಹಳ್ಳಿ, ಕುಮಾರಸ್ವಾಮಿ ಮಲಾರ, ರಾಘವೇಂದ್ರ ಎಂ ಮಾದಾಪುರ, ಮಹದೇವ ಕುಮಾರ್ ಹೂವಿನ ಕೊಳ, ಮರಿಲಿಂಗಯ್ಯ, ಸೋಮು ಲಂಕೆ, ಬಸವರಾಜು ಮಾದಾಪುರ, ಮಾಲಗಯ್ಯ ಹಾಗೂ ನೂರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.