- ಮಧುರೈ ವಿಭಾಗದ ರೈಲು ಸಂಚಾರದಲ್ಲಿ ವ್ಯತ್ಯಯ
- ವ್ಯತ್ಯಯ ಗಮನಿಸಿ ಪ್ರಯಾಣಿಸಲು ಮನವಿ
ಮೈಸೂರು: ದಕ್ಷಿಣ ರೈಲ್ವೆಯ ಮಿಲವಿಟ್ಟಾನ ಮತ್ತು ಟ್ಯುಟಿಕೊರಿನ್ ಯಾರ್ಡ್ ಮರು ವಿನ್ಯಾಸ ಕೆಲಸದ ಹಿನ್ನೆಲೆಯಲ್ಲಿ ಮಧುರೈ ವಿಭಾಗದ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ.
ರೈಲು ಸಂಖ್ಯೆ 16235 ಟ್ಯುಟಿಕೊರಿನ್- ಮೈಸೂರು ಎಕ್ಸ್‌ಪ್ರೆಸ್ ಡಿ 21, 22 ಮತ್ತು 23ರಂದು ಟ್ಯುಟಿಕೊರಿನ್ ಮತ್ತು ವಾಂಚಿ ಮನಿಯಚ್ಚಿ ಜಂಕ್ಷನ್ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು. ಈ ರೈಲು ಟ್ಯುಟಿಕೊರಿನ್ ನಿಲ್ದಾಣದ ಬದಲಾಗಿ ವಾಂಚಿ ಮನಿಯಚ್ಚಿ ನಿಲ್ದಾಣದಿಂದ ಅದರ ನಿಗದಿತ ಸಮಯಕ್ಕೆ ಹೊರಡುವುದು.
ರೈಲು ಸಂಖ್ಯೆ 16236 ಮೈಸೂರು- ಟ್ಯುಟಿಕೊರಿನ್ ಎಕ್ಸ್‌ಪ್ರೆಸ್ 2025ರ ಡಿ.20, 21 ಮತ್ತು 22ರಂದು ವಾಂಚಿ ಮನಿಯಚ್ಚಿ ಜಂಕ್ಷನ್ ಮತ್ತು ಟ್ಯುಟಿಕೊರಿನ್ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು. ಈ ರೈಲು ಟ್ಯುಟಿಕೊರಿನ್ ನಿಲ್ದಾಣದ ಬದಲಾಗಿ ವಾಂಚಿ ಮನಿಯಚ್ಚಿ ನಿಲ್ದಾಣದಿಂದ ಅದರ ನಿಗದಿತ ಸಮಯಕ್ಕೆ ಹೊರಡುವುದು.
ರೈಲು ಸಂಖ್ಯೆ 19567 ಟ್ಯುಟಿಕೊರಿನ್-ಓಖಾ ಎಕ್ಸ್‌ಪ್ರೆಸ್ 2025ರ ಡಿ. 21ರಂದು ಟ್ಯುಟಿಕೊರಿನ್ ಮತ್ತು ಕೋವಿಲಪಟ್ಟಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು. ಈ ರೈಲು ಟ್ಯುಟಿಕೊರಿನ್ ನಿಲ್ದಾಣದ ಬದಲಾಗಿ ಕೋವಿಲಪಟ್ಟಿಯಿಂದ ನಿಲ್ದಾಣದಿಂದ ಅದರ ನಿಗದಿತ ಸಮಯಕ್ಕೆ ಹೊರಡುವುದು.
ರೈಲು ಸಂಖ್ಯೆ 19568 ಓಖಾ ಟ್ಯುಟಿಕೊರಿನ್-ಎಕ್ಸ್‌ಪ್ರೆಸ್ 2025ರ ಡಿ.19ರಂದು ಕೋವಿಲಪಟ್ಟಿ ಮತ್ತು ಟ್ಯುಟಿಕೊರಿನ್ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು. ಈ ರೈಲು ಟ್ಯುಟಿಕೊರಿನ್ ನಿಲ್ದಾಣದ ಬದಲಾಗಿ ಕೋವಿಲಪಟ್ಟಿಯಲ್ಲಿ ನಿಲ್ದಾಣದಿಂದ ಅದರ ನಿಗದಿತ ಸಮಯಕ್ಕೆ ಹೊರಡುವುದು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.