ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್‌ನ ಹೊಸ ಪ್ರವೇಶ ದರ ವ್ಯವಸ್ಥೆಯನ್ನು ಐವರು ಅಜ್ಜ-ಅಜ್ಜಿಯರು ಉದ್ಘಾಟಿಸಿದರು. ಕಾರ್ಯಾಚರಣೆ ಮುಖ್ಯಸ್ಥ ಬಾಲಕೃಷ್ಣ ಕಿಣಿ ಇತರರು ಇದ್ದರು.  
ಮೈಸೂರು

ಹಿರಿಯ ನಾಗರಿಕರ ಟಿಕೆಟ್ ದರದಲ್ಲಿ ರಿಯಾಯಿತಿ

ಅವಿನಾಶ್ ಜೈನಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್ ಘೋಷಣೆ
ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್ ಹಿರಿಯ ನಾಗರಿಕರಿಗೆ ಟಿಕೆಟ್ ದರವನ್ನು ಶೇ.50ರಷ್ಟು ಕಡಿತಗೊಳಿಸಿದ್ದು, ಹೊಸ ದರಗಳು ಜಾರಿಗೆ ಬಂದಿವೆ.
ಶೇ.50 ರಿಯಾಯಿತಿ ಜಿಆರ್‌ಎಸ್ ಅಪ್‌ಡೌನ್, ಜಿಆರ್‌ಎಸ್ ಸ್ನೋ ಪಾರ್ಕ್ ಮತ್ತು ಜಿಆರ್‌ಎಸ್ ಸೆಲ್ಫಿ ಫ್ಯಾಕ್ಟರಿಗಳಲ್ಲಿಯೂ ಅನ್ವಯವಾಗುತ್ತದೆ. ಮಂಗಳವಾರ ಬೆಳಗ್ಗೆ ತಮ್ಮ ಕುಟುಂಬದವರೊಂದಿಗೆ ಜಿಆರ್‌ಎಸ್‌ಗೆ ಭೇಟಿ ನೀಡಿದ್ದ ಐವರು ಅಜ್ಜ-ಅಜ್ಜಿಯರು ಈ ಹೊಸ ಪ್ರವೇಶ ದರ ವ್ಯವಸ್ಥೆಯನ್ನು ಉದ್ಘಾಟಿಸಿದರು.
ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿ, ಪಾರ್ಕ್ ಪ್ರವೇಶ ದ್ವಾರದಲ್ಲಿ ಒಟ್ಟಾಗಿ ರಿಬ್ಬನ್ ಕತ್ತರಿಸುವ ಮೂಲಕ ಹೊಸ ವ್ಯವಸ್ಥೆಗೆ ಚಾಲನೆ ನೀಡಲಾಯಿತು. 60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಫೋಟೋ ಗುರುತಿನ ಚೀಟಿಯನ್ನು ಟಿಕೆಟ್ ಕೌಂಟರ್‌ನಲ್ಲಿ ತೋರಿಸಿದರೆ ಈ ರಿಯಾಯಿತಿ ಸೌಲಭ್ಯ ಪಡೆಯಬಹುದು. ಪ್ರತಿ ಬೇಸಿಗೆಯಲ್ಲೂ ಮಕ್ಕಳು ಮೈಸೂರಿನಲ್ಲಿರುವ ತಮ್ಮ ಅಜ್ಜ-ಅಜ್ಜಿಯರ ಮನೆಗಳಿಗೆ ಬರುತ್ತಾರೆ. ಇತ್ತೀಚೆಗೆ ಇಂತಹ ಕುಟುಂಬಗಳು ಒಟ್ಟಾಗಿ ಜಿಆರ್‌ಎಸ್‌ಗೆ ಭೇಟಿ ನೀಡುತ್ತಿರುವುದು ಹೆಚ್ಚಾಗಿದೆ ಎಂದು ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್‌ನ ಕಾರ್ಯಾಚರಣೆ ಮುಖ್ಯಸ್ಥ ಬಾಲಕೃಷ್ಣ ಕಿಣಿ ಹೇಳಿದರು.