ಎಚ್.ಎಸ್.ಸ್ವಾಮಿ 
ಮೈಸೂರು

ನಾಗಮೋಹನದಾಸ್ ಆಯೋಗದ ವರದಿ ಕೈಬಿಡಿ

ರವಿಕುಮಾರ್ ಪಿ. ಕೆ
ಕೆ.ಆರ್.ನಗರ: ಒಳ ಮೀಸಲಾತಿ ವಿಚಾರದಲ್ಲಿ ಏನೇ ಗೊಂದಲ, ಸಮಸ್ಯೆ ಇದ್ದರೂ ಸೀಮಿತ ಜಾತಿಗಳ ಮಂತ್ರಿಗಳ ಹೆಸರಿಗೆ ಕಟ್ಟುವುದು ಬೇಡ, ಅಶೋಕ್ ಸಾಮ್ರಾಟನ ವಂಶದ ಮೂಲದವರಾಗಿರುವ ನಾವೆಲ್ಲ ಸಮುದಾಯದ ಒಳತಿಗೆ ಶ್ರಮಿಸಬೇಕಿದೆ ಎಂದು ಬಲಗೈ ಸಮುದಾಯದ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಚ್.ಎಸ್.ಸ್ವಾಮಿ ಹೇಳಿದರು.
ನಾವು ನಮ್ಮ ಬಲಗೈ ಸಮುದಾಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿದ್ದೇವೆಯೇ ಹೊರತು ಇತರ ಸಮುದಾಯದ ವಿರುದ್ಧ ಅಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಪಪಡಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ದಲಿತ ಸಮುದಾಯಕ್ಕೆ ಒಳ ಮೀಸಲಾತಿ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಹೀಗಿದ್ದರೂ ಸರ್ಕಾರ ನಾಗಮೋಹನದಾಸ್ ಆಯೋಗದ ವರದಿಯನ್ನು ಏಕೆ ಜಾರಿ ಮಾಡಬೇಕು. ಸಂವಿಧಾನಕ್ಕಿಂತ ಯಾರೂ ದೊಡ್ಡವರಲ್ಲ ಹಾಗಾಗಿ ನಾವೆಲ್ಲರೂ ಬುದ್ದನ ಅನುಯಾಯಿಗಳು. ನಮ್ಮಲ್ಲಿ ಒಳಜಗಳ ಬೇಡ. ಈ ಬಗ್ಗೆ ಒಳ ಮೀಸಲಾತಿ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ತಡೆಯಾಜ್ಞೆ ಇದೆ. ಎಲ್ಲರೂ ಇದರ ವಿರುದ್ಧ ಹೋರಾಟ ಮಾಡೋಣ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ರಾಮಕೃಷ್ಣ ಮಾತನಾಡಿ, ನಾವೆಲ್ಲರೂ ಬುದ್ಧನ ಅನುಯಾಯಿಗಳಾಗಿದ್ದು, ಅನುಸರಿಕೊಂಡು ಹೋಗೋಣ. ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿರುವ ಮಾತನ್ನು ತಪ್ಪದೆ ನಾವೆಲ್ಲ ಪಾಲಿಸೋಣ. ನಾಗಮೋಹನದಾಸ್ ವರದಿ ತಿರಸ್ಕರಿಸಿದ್ದೇವೆ. ಹಾಗಾಗಿ ಸರ್ಕಾರ ಕೂಡ ಈ ಅವೈಜ್ಞಾನಿಕ ವರದಿಯನ್ನು ಕೈಬಿಡಬೇಕೆಂದು ಮನವಿ ಮಾಡಿದರು.
ರಾಜ್ಯ ಸರ್ಕಾರ ಜನಗಣತಿ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ನೂರಕ್ಕೆ ನೂರು ಸಮೀಕ್ಷೆ ನಡೆದಿಲ್ಲ. ಸಮೀಕ್ಷೆ ವಿಚಾರದಲ್ಲಿ ಅಪಸ್ವರ ಕಾಣುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರ ಮಾಡುತ್ತಿರುವ ಜನಗಣತಿ (ಜಾತಿ ಗಣತಿ) ಮಾಡುತ್ತಿದ್ದು, ರಾಜ್ಯ ಸರ್ಕಾರ ಒತ್ತಡ ಹಾಕಿ ಜನ ಗಣತಿ ಸಮೀಕ್ಷೆ ಮಾಡಿಸಿ ಮರು ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪರಿಶಿಷ್ಟ ಬಲಗೈ ಸಮುದಾಯದ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳಾದ ದೊರೆಸ್ವಾಮಿ, ದೊಡ್ಡಯ್ಯ ಸಿದ್ದರಾಜು, ಭೀಮ್ ಆರ್ಮಿ ಅಧ್ಯಕ್ಷ ಗುರುಸ್ವಾಮಿ , ಇತರರು ಹಾಜರಿದ್ದರು.