ಹುಣಸೂರು ತಾಲೂಕು ಜಾಬಗೆರೆ ಗ್ರಾ.ಪಂ.ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಜಾಬ್‌ಕಾರ್ಡ್ ಕುರಿತು ಅರಿವು ಮೂಡಿಸಲಾಯಿತು. ಪಿಡಿಒ ಯೋಗಾನಂದ, ಐಇಸಿ ಸಂಯೋಜಕಿ ಪುಷ್ಪವತಿ, ಮಹೇಶ್, ಮಂಜು ಇತರರಿದ್ದರು.
ಅಂಗವಿಕಲರ ಸಬಲೀಕರಣಕ್ಕಾಗಿ ಸರ್ಕಾರದಿಂದ ಸಾಕಷ್ಟು ಯೋಜನೆಗಳು ಜಾರಿಗೊಳ್ಳುತ್ತಿದ್ದು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಸಬಲೀಕರಣಗೊಳ್ಳಿ ಎಂದು ಜಾಬಗೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯೋಗಾನಂದ ಸಲಹೆ ನೀಡಿದರು.
ತಾಲೂಕಿನ ಜಾಬಗೆರೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಂಗವಿಕಲರಿಗಾಗಿ ಮಂಗಳವಾರ ಆಯೋಜಿಸಿದ್ದ ಗ್ರಾಮ ಸಭೆ ಹಾಗೂ ವಿಬಿ-ಜಿ ರಾಮ್ ಜಿ ಯೋಜನೆಯಡಿ ಜಾಬ್‌ಕಾರ್ಡ್ ಮೇಳದಲ್ಲಿ ಮಾತನಾಡಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಗವಿಕಲರ ಸಬಲೀಕರಣಕ್ಕಾಗಿ ಶೇ.5 ಅನುದಾನ ಮೀಸಲಿಟ್ಟಿದೆ. ಈ ಅನುದಾನವನ್ನು ಸಮಪರ್ಕವಾಗಿ ಬಳಸಿಕೊಳ್ಳಬೇಕು ಎಂದರು.
ತಾಲೂಕು ಐಇಸಿ ಸಂಯೋಜಕಿ ಪುಷ್ಪವತಿ ಮಾತನಾಡಿ, ವಿಬಿ-ಜಿ ರಾಮ್ ಜಿ ಯೋಜನೆಯಡಿ ಸೆಪ್ಟೆಂಬರ್ 15ರವರೆಗೆ ಜಾಬ್‌ಕಾರ್ಡ್ ಮೇಳ ನಡೆಯಲಿದೆ. ಜಾಬ್‌ಕಾರ್ಡ್ ಹೊಂದಿಲ್ಲದ ಕೂಲಿ ಕಾರ್ಮಿಕರು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ನಮೂನೆ 01ರಲ್ಲಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು. ಯೋಜನೆಯಡಿ ಅಂಗವಿಕಲರಿಗೆ ಶೇ.50 ರಿಯಾಯಿತಿ ಇದೆ. ಇದೀಗ 125 ಮಾನವ ದಿನಗಳ ಸೃಜನೆಗೆ ಅವಕಾಶ ನೀಡಿದ್ದು, ಒಂದು ದಿನಕ್ಕೆ ಕೂಲಿ ಮೊತ್ತ 382 ರಂತೆ ವರ್ಷಕ್ಕೆ ಒಂದು ಜಾಬ್ ಕಾರ್ಡ್‌ಗೆ 47,750 ರೂ. ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಗ್ರಾ.ಪಂ.ಕಾರ್ಯದರ್ಶಿ ಮಹೇಶ್, ಕರ ವಸೂಲಿಗಾರ ಮಂಜು, ಡಿಇಒ ಶ್ವೇತಾ, ಗಣೇಶ್, ರಾಜು, ಬಸವರಾಜು ಪಾಲ್ಗೊಂಡಿದ್ದರು.