ಅಮೆರಿಕದ ಮೆರಿಲ್ಯಾಂಡ್‌ನ ಪೊಟೊಮ್ಯಾಕ್‌ನಲ್ಲಿ ಬಿಸಿನೆಸ್ ಇಂಟೆಗ್ರಾ ಕಂಪನಿಯ ಸೆಲ್ವ ಜಯರಾಮನ್ ಹಾಗೂ ಪ್ರತಿಭಾ ಜಯರಾಮನ್ ಅವರ ನಿವಾಸದಲ್ಲಿ ಏರ್ಪಡಿಸಿದ್ದ ವಿಶೇಷ ಪೂಜೆ ಹಾಗೂ ಸತ್ಸಂಗದ ಸಂದರ್ಭದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಭಾಗವಹಿಸಿದ್ದರು.
- ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಮತ
ಭಗವಂತನ ಆರಾಧನೆಗೆ ಶ್ರದ್ಧೆ, ಭಕ್ತಿ ಮುಖ್ಯ ಎಂದು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಅಮೆರಿಕದ ಮೆರಿಲ್ಯಾಂಡ್‌ನ ಪೊಟೊಮ್ಯಾಕ್‌ನಲ್ಲಿ ಬಿಸಿನೆಸ್ ಇಂಟೆಗ್ರಾ ಕಂಪನಿಯ ಸೆಲ್ವ ಜಯರಾಮನ್ ಹಾಗೂ ಪ್ರತಿಭಾ ಜಯರಾಮನ್ ಅವರ ನಿವಾಸದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಿಶೇಷ ಪೂಜೆ ಹಾಗೂ ಸತ್ಸಂಗದಲ್ಲಿ ಆಶೀರ್ವಚನ ನೀಡಿದರು.
ಭಗವಂತನ ಸೃಷ್ಟಿ ವಿಶಾಲವಾಗಿದೆ. ಮನುಷ್ಯ ಜನ್ಮ ಪವಿತ್ರವಾದುದು. ಬದುಕನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಿಕೊಂಡು ಮೋಕ್ಷ ಸಾಧನೆಯ ಪಥದಲ್ಲಿ ಸಾಗಬೇಕು. ಭಗವಂತನಲ್ಲಿ ಭಕ್ತಿ, ಶ್ರದ್ಧೆ ಮತ್ತು ನಂಬಿಕೆಯನ್ನು ಬೆಳೆಸಿಕೊಳ್ಳಬೇಕು. ಹಾಗಾದಾಗ ಜೀವನದಲ್ಲಿ ನೆಮ್ಮದಿ, ಸಂತೋಷ ದೊರಕಲು ಸಾಧ್ಯ. ಸೆಲ್ವ ಜಯರಾಮನ್ ಹಾಗೂ ಪ್ರತಿಭಾ ಜಯರಾಮನ್ ಅವರು ಭಗವಂತನಲ್ಲಿ ಅಂತಹ ಶ್ರದ್ಧೆ ನಂಬಿಕೆಗಳನ್ನು ಉಳ್ಳವರು. ಸಾರ್ವಜನಿಕರೊಂದಿಗೆ ಉತ್ತಮ ಸಂಬಂಧ ಹೊಂದಿರುವವರು. ಎಲ್ಲರೊಂದಿಗೆ ಸರಳವಾಗಿ ಬೆರೆಯುವವರು.
ಜೆಎಸ್‌ಎಸ್ ಸ್ಪಿರಿಚ್ಯುಯಲ್ ಮಿಷನ್‌ನ ಎಲ್ಲ ಕಾರ್ಯಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಸಂತೋಷದ ಸಂಗತಿ ಎಂದು ತಿಳಿಸಿದರು.