ಕೆ.ಆರ್.ನಗರ ತಾಲೂಕಿನ ಕಾಳೇನಹಳ್ಳಿ ಹೊಸಕೊಪ್ಪಲು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಾರಮ್ಮ ದೇವಾಲಯದ 5ನೇ ವರ್ಷದ ವಾರ್ಷಿಕೋತ್ಸವದಲ್ಲಿ ಶಾಸಕ ಡಿ.ರವಿಶಂಕರ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಕೆ.ಪಿ.ಜಗದೀಶ್, ಮಹದೇವ್, ರಾಮೇಗೌಡ, ಎಚ್.ಪಿ.ಸ್ವಾಮಿ, ದೇವೇಂದ್ರ, ಸಿದ್ದೇಗೌಡ, ಕೆ.ಎಸ್.ಮಂಜುನಾಥ್, ಕುಮಾರ್, ಪ್ರಕಾಶ್, ಕೆ.ಎಂ.ಶರತ್, ಚಿಕ್ಕತಮ್ಮೇಗೌಡ, ಮಾದೇಗೌಡ, ಪುಟ್ಟರಾಮು, ಪುಟ್ಟಸ್ವಾಮಿ, ಗಿರೀಶ್, ಶಿವರಾಮು, ಮಹದೇವ್, ಶಂಕರ್ ಇದ್ದರು. 
ಮೈಸೂರು

ಪಟ್ಟಣದ ಸುತ್ತಲಿರುವ ಗ್ರಾಮಗಳ ಅಭಿವೃದ್ಧಿ

ಕೆ.ಆರ್.ನಗರ: ತಾಲೂಕು ಕೇಂದ್ರವಾದ ಕೆ.ಆರ್.ನಗರಕ್ಕೆ ಹೊಂದಿಕೊಂಡಿರುವ ಗ್ರಾಮಗಳು ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು ಅಂತಹ ಗ್ರಾಮಗಳ ಸಮಗ್ರ ಅಭಿವೃದ್ಧಿ ಮಾಡಲು ಬದ್ಧನಾಗಿದ್ದು ಹಂತ ಹಂತವಾಗಿ ಅನುದಾನ ಕೊಡಿಸಲಾಗುವುದು ಎಂದು ಶಾಸಕ ಡಿ.ರವಿಶಂಕರ್ ಭರವಸೆ ನೀಡಿದರು.
ತಾಲೂಕಿನ ಕಾಳೇನಹಳ್ಳಿ ಹೊಸಕೊಪ್ಪಲು ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಮಾರಮ್ಮ ದೇವಾಲಯದ 5ನೇ ವರ್ಷದ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಳೇನಹಳ್ಳಿ, ಕೆಂಪನಕೊಪ್ಪಲು ಮತ್ತು ಮಾರಿಗುಡಿಕೊಪ್ಪಲು ಗ್ರಾಮಗಳ ಅಭಿವೃದ್ಧಿಗೆ ಕ್ರಮವಹಿಸುತ್ತೇನೆ ಎಂದರು.
ಮುಳ್ಳೂರು ರಸ್ತೆಯ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಮಾಡಲು ಸಹಕಾರ ನೀಡುತ್ತೇನೆ. ಗ್ರಾಮ ಪರಿಮಿತಿಯ ಪ್ರಮುಖ ಬೀದಿಗಳನ್ನು ಸಿ.ಸಿ.ರಸ್ತೆ ಮತ್ತು ಬಾಕ್ಸ್ ಚರಂಡಿ ಮಾಡಲು ತಲಾ 25ಲಕ್ಷ ರೂ.ಅನುದಾನ ಮಂಜೂರು ಮಾಡಿಸಲಾಗಿದ್ದು ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.
ಮಾರಮ್ಮ ದೇವಸ್ಥಾನ ಆವರಣಕ್ಕೆ ಕಾಂಕ್ರೀಟ್, ಕಾಂಪೌಂಡ್ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ನೀಡಲಾಗಿದ್ದು ಕಾಮಗಾರಿ ಪೂರ್ಣಗೊಂಡಿದೆ. ಗ್ರಾಮದ ಸುತ್ತ ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿರುವುದರಿಂದ ಗ್ರಾಮಕ್ಕೊಂದು ಸಶ್ಮಾನದ ಅವಶ್ಯಕತೆ ಇದ್ದು ಸರ್ಕಾರಿ ಜಾಗ ಗುರುತಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
ಪಿಡಿಒ ಮಂಜುನಾಥ್, ಕಾರ್ಯದರ್ಶಿ ಸೋಮಶೇಖರ್, ಮಾಜಿ ಸದಸ್ಯರಾದ ಕೆ.ಪಿ.ಜಗದೀಶ್, ಮಹದೇವ್, ಮುಖಂಡರಾದ ರಾಮೇಗೌಡ, ಎಚ್.ಪಿ.ಸ್ವಾಮಿ, ದೇವೇಂದ್ರ, ಸಿದ್ದೇಗೌಡ, ಕೆ.ಎಸ್.ಮಂಜುನಾಥ್, ಕುಮಾರ್, ಪ್ರಕಾಶ್, ಕೆ.ಎಂ.ಶರತ್, ಚಿಕ್ಕತಮ್ಮೇಗೌಡ, ಮಾದೇಗೌಡ, ಪುಟ್ಟರಾಮು, ಪುಟ್ಟಸ್ವಾಮಿ, ಗಿರೀಶ್, ಶಿವರಾಮು, ಮಹದೇವ್, ಶಂಕರ್ ಹಾಜರಿದ್ದರು.