ಬೆಟ್ಟದಪುರ ಸಮೀಪದ ಹರದೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಐದು ವರ್ಷ ಸೇವೆ ಸಲ್ಲಿಸಿ ಆಡಳಿತ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸದಸ್ಯರನ್ನು ಸನ್ಮಾನಿಸಲಾಯಿತು. ಡಿ.ವೀಣಾ, ಕಾಮಾಕ್ಷಮ್ಮ, ವೀಣಾ, ಸದಸ್ಯರಿದ್ದರು,. 
ಮೈಸೂರು

ಜನಪ್ರತಿನಿಧಿಗಳ ಸಹಕಾರವಿದ್ದರೆ ಅಭಿವೃದ್ಧಿ ಸಾಧ್ಯ

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ಪಿಡಿಒ ಡಿ.ವೀಣಾ ಅಭಿಪ್ರಾಯ
  • ಕೊನೆಯ ಸಾಮಾನ್ಯಸಭೆ ಹಾಗೂ ಸದಸ್ಯರಿಗೆ ಅಭಿನಂದನಾ ಸಮಾರಂಭ
ಬೆಟ್ಟದಪುರ: ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡಲಾಗಿದೆ ಎಂದು ಹರದೂರು ಗ್ರಾ.ಪಂ. ಪಿಡಿಒ ಡಿ.ವೀಣಾ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಹರದೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕೊನೆಯ ಸಾಮಾನ್ಯಸಭೆ ಹಾಗೂ ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಬಹುಬೇಗ ಅಭಿವೃದ್ಧಿ ಹೊಂದಲು ಆಡಳಿತ ಮಂಡಳಿ ಸದಸ್ಯರ ಪಾತ್ರ ಮಹತ್ವವಾಗಿದೆ. ಚುನಾಯಿತ ಪ್ರತಿನಿಧಿಗಳ ಜತೆ ಪ್ರತಿಯೊಬ್ಬರ ಸಹಕಾರ ಪ್ರಮುಖವಾಗಿದ್ದರೆ ಗ್ರಾಮಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯ ಎಂದರು.
ಹರದೂರು ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಯೋಜನೆಯಡಿ ಸುಮಾರು 8 ಕಿ.ಮೀ. ಮೆಟ್ಲಿಂಗ್ ರಸ್ತೆ, ಚರಂಡಿ ನಿರ್ಮಾಣ, ಕೆರೆಗಳ ಪುನಶ್ಚೇತನ, ವೈಯಕ್ತಿಕ ಸೌಲಭ್ಯದಡಿ ಕೊಟ್ಟಿಗೆಗಳ ನಿರ್ಮಾಣ, 15ನೇ ಹಣಕಾಸು ಯೋಜನೆಯಡಿ ಶಾಲಾ ಕೊಠಡಿಗಳ ದುರಸ್ತಿ, ಶಾಲಾ ಕಾಂಪೌಂಡ್ ನಿರ್ಮಾಣ, ಚರಂಡಿ ನಿರ್ಮಾಣ ಕಾಮಗಾರಿಗಳು ಸ್ವಂತ ಸಂಪನ್ಮೂಲದಿಂದ ಅಂಗನವಾಡಿಗಳಿಗೆ ಮೂಲಸೌಕರ್ಯ, ಶೇ.25ರ ಅನುದಾನದಲ್ಲಿ ವಿದ್ಯಾಭ್ಯಾಸಕ್ಕೆ ಸಹಾಯಧನ, ಶೇ.5ರ ಅನುದಾನದಲ್ಲಿ ಅಂಗವಿಕಲರಿಗೆ ಸೌಲಭ್ಯ, ಶೇ.2ರ ಅನುದಾನದಲ್ಲಿ ಕ್ರೀಡಾ ಪರಿಕರಗಳ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಐದು ವರ್ಷ ಸೇವೆ ಸಲ್ಲಿಸಿ ಆಡಳಿತ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಎಲ್ಲ ಸದಸ್ಯರಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಇದೆ ವೇಳೆ ಸಿಬ್ಬಂದಿಯನ್ನೂ ಸನ್ಮಾನಿಸಲಾಯಿತು. ಗ್ರಾ.ಪಂ. ಅಧ್ಯಕ್ಷರಾದ ಕಾಮಾಕ್ಷಮ್ಮ, ಉಪಾಧ್ಯಕ್ಷರಾದ ವೀಣಾ, ಸದಸ್ಯರಾದ ಎಚ್.ಎಸ್ ಕೃಷ್ಣೆಗೌಡ, ಎಚ್.ಜಿ ಕಾವ್ಯಾ, ಡಿ.ಎಸ್ ಪವಿತ್ರಾ, ಗಿರಿಜಮ್ಮ, ಕಾಂತಮ್ಮ, ನಾಗೇಗೌಡ, ಎಚ್.ಎಸ್.ಮಂಜು, ಗೋವಿಂದಾಚಾರಿ, ಕಾರ್ಯದರ್ಶಿ ಎಸ್.ಕುಮಾರ್, ಬಿಲ್ ಕಲೆಕ್ಟರ್ ಮಾದೇಗೌಡ, ಕ್ಲರ್ಕ್ ಶಿವಣ್ಣ, ಸಿಬ್ಬಂದಿ ಯೋಗಣ್ಣ, ಪುಟ್ಟರಾಜು, ಶ್ರೀರಾಮ್, ಬಸವರಾಜು, ದಿನೇಶ್ ಇತರರು ಇದ್ದರು.