ಬೆಟ್ಟದಪುರ ಸಮೀಪದ ಸೀಗೂರು ಗ್ರಾಮದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಭಾನುವಾರ ರೈತ ಸಂಘದ ಗ್ರಾಮ ಘಟಕವನ್ನು ಉದ್ಘಾಟನೆ ಮಾಡಲಾಯಿತು. ಮಂಜುನಾಥ್ ಆರ್. ಗೌಡ, ಶರಣಪ್ಪ ದೊಡ್ಡಮನೆ, ಕೋಮಲಾಪುರ ಸೋಮೇಗೌಡ, ಜೈ ರಾಮೇಗೌಡ, ಕಾವೇರಮ್ಮ ಇತರರಿದ್ದರು. 
ಮೈಸೂರು

ಅನ್ಯಾಯ ಕಂಡಾಗ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘದ ಗ್ರಾಮ ಘಟಕ ಉದ್ಘಾಟನೆ
ಬೆಟ್ಟದಪುರ: ರೈತ ಸಂಘವು ರೈತರಿಗೆ ಮಾತ್ರವಲ್ಲದೆ ಪ್ರತಿಯೊಬ್ಬರಿಗೆ ಕಾನೂನಿನ ಪಾಠಶಾಲೆ ಇದ್ದಂತೆ. ಚಳವಳಿ ಜತೆಗೆ ಕಾನೂನಿನ ಬಗ್ಗೆಯೂ ತಿಳಿಸಲಿದೆ. ಅನ್ಯಾಯ ಕಂಡಾಗ ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಮಂಜುನಾಥ್ ಆರ್. ಗೌಡ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಸೀಗೂರು ಗ್ರಾಮದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಭಾನುವಾರ ಆಯೋಜಿಸಿದ ರೈತ ಸಂಘದ ಗ್ರಾಮ ಘಟಕ ಉದ್ಘಾಟನೆ ಹಾಗೂ ಹಸಿರು ಶಾಲುದೀಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮಿಂದ ಆಯ್ಕೆಯಾದವರನ್ನು ಮೊದಲು ಪ್ರಶ್ನೆ ಮಾಡಬೇಕು. ಕೆಲ ಅವೈಜ್ಞಾನಿಕ ನಿರ್ಧಾರಗಳ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದರೆ ಮಾತ್ರ ನ್ಯಾಯ ಸಿಗುತ್ತದೆ. ರೈತರು ಸಾಕಷ್ಟು ಸಮಸ್ಯೆಯಲ್ಲಿದ್ದಾರೆ. ಸರ್ಕಾರಗಳು ಆಶ್ವಾಸನೆ ಮಾತ್ರ ನೀಡುತ್ತಿವೆ. ಹೀಗಾಗಿ ಕೃಷಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡಲು ರೈತರ ಗ್ರಾಮ ಘಟಕದ ಅಗತ್ಯವಿದೆ. ಸಂಘಟನೆ ಇಲ್ಲದಿದ್ದರೆ ರೈತರಿಗೆ ಬಲ ಬರುವುದಿಲ್ಲ. ಸಂಘಟನೆ ಬಲಿಷ್ಠವಾದರೆ ರೈತರು ಸದೃಢರಾಗುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಘಟನೆಯ ನಾಮಫಲಕವನ್ನು ಸ್ಥಾಪಿಸಿ, ಪೂಜೆ ಸಲ್ಲಿಸಿ ಘಟಕದ ಉದ್ಘಾಟನೆ ಮಾಡಲಾಯಿತು. ಇದೇ ವೇಳೆ ಸುಮಾರು 25ಕ್ಕೂ ಹೆಚ್ಚು ರೈತರು ಹಸಿರು ಶಾಲುದೀಕ್ಷೆ ಮೂಲಕ ಸಂಘಕ್ಕೆ ಸೇರ್ಪಡೆಯಾದರು. ಸೇರ್ಪಡೆಯಾದ ಎಲ್ಲ ಸದಸ್ಯರಿಗೂ ಸಂಘದ ಪ್ರತಿಜ್ಞಾವಿಧಿ ಭೋಧಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಸಂಸ್ಥಾಪಕ ಅಧ್ಯಕ್ಷ ಶರಣಪ್ಪ ದೊಡ್ಡಮನೆ, ರಾಜ್ಯ ಯುವ ಘಟಕ ಅಧ್ಯಕ್ಷ ಕೋಮಲಾಪುರ ಸೋಮೇಗೌಡ, ಜಿಲ್ಲಾಧ್ಯಕ್ಷ ಜೈ ರಾಮೇಗೌಡ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಕಾವೇರಮ್ಮ, ತಾಲೂಕು ಪ್ರಧಾನ ಕಾರ್ಯದರ್ಶಿ ಲೀಲಾವತಿ, ತಾಲೂಕು ಅಧ್ಯಕ್ಷ ಕುಮಾರ್, ತಾಲೂಕು ಸಮಿತಿ ಸದಸ್ಯ ಯೋಗೇಶ್ ಬೆಟ್ಟದಪುರ, ಬಿಲ್ಲಳ್ಳಿ ಸುರೇಶ್, ರೈತ ಮುಖಂಡರಾದ ನಾಗರಾಜಗೌಡ, ಸಣ್ಣೇಗೌಡ, ಗಣೇಶ್, ಶೇಕ್ ಇಬಾದ್, ಶಿವಣ್ಣ, ಪಾಂಡು, ಗ್ರಾಮಸ್ಥರರಾದ ದೇವಶೆಟ್ಟಿ, ನಾಗೇಂದ್ರ ಸೇರಿದಂತೆ ಹಲವರು ಇದ್ದರು.