ಮೈಸೂರು ನಗರಪಾಲಿಕೆಯಿಂದ ಉದ್ದೇಶಿತ ಕಟ್ಟಡ ತ್ಯಾಜ್ಯ ಸಂಸ್ಕರಣ ಘಟಕ ಬೇರೆಡೆ ಸ್ಥಳಾಂತರಿಸುವಂತೆ ಆಗ್ರಹಿಸಿ ಹಂಚ್ಯಾ ಗ್ರಾಮಸ್ಥರು, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಶ್ರೀನಿವಾಸ್, ಎಚ್.ವಿ.ವೆಂಕಟೇಗೌಡ, ಬೋರೇಗೌಡ, ತಮ್ಮೇಗೌಡ, ಮಹದೇವು, ಉಮೇಶ್, ಗವಿಸಿದ್ದೇಗೌಡ, ಸಿ.ಕುಮಾರ, ಅನಿಲ್ ಕುಮಾರ ಇತರರು ಇದ್ದರು.
- ಘಟಕ ನಿರ್ಮಾಣದಿಂದ ಪರಿಸರ ಮಾಲಿನ್ಯ ದುಷ್ಪರಿಣಾಮ ಬೀರುತ್ತದೆ
- ಉದ್ದೇಶಿತ ಘಟಕವನ್ನು ಕೂಡಲೇ ಸ್ಥಳಾಂತರಿಸಬೇಕು
ಮೈಸೂರು: ಹಂಚ್ಯಾ- ಸಾತಗಳ್ಳಿ ವಲಯದಲ್ಲಿ ಮೈಸೂರು ನಗರಪಾಲಿಕೆಯಿಂದ ನಿರ್ಮಿಸಲು ಮುಂದಾಗಿರುವ ಕಟ್ಟಡ ತ್ಯಾಜ್ಯ ಸಂಸ್ಕರಣ ಘಟಕವನ್ನು ಬೇರೆಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಹಂಚ್ಯಾ ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಿಂಗ್ ರಸ್ತೆ ಸಮೀಪದಲ್ಲಿ ಇಂತಹ ಕಟ್ಟಡ ತ್ಯಾಜ್ಯ ಘಟಕ ನಿರ್ಮಾಣ ಮಾಡುವುದರಿಂದ ಸ್ಥಳೀಯರಿಗೆ ತೊಂದರೆ ಆಗಲಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಬಡಾವಣೆ ಇರುವುದರಿಂದ ಧೂಳು, ಪರಿಸರ ಮಾಲಿನ್ಯ ದುಷ್ಪರಿಣಾಮ ಬೀರುತ್ತದೆ. ಇಂತಹ ಘಟಕಗಳನ್ನು ಬಡಾವಣೆಯ ದೂರ ಮತ್ತು ಈಗಾಗಲೇ ಪಾಲಿಕೆ ಒಳಪಡುವ ಜಾಗದ ಹೊರಗೆ ಅದರಲ್ಲೂ ಪೆರಿಪಲ್ ರಿಂಗ್ ರಸ್ತೆಯಿಂದಾಚೆಗೆ ನಿರ್ಮಿಸಬೇಕು. ಈಗ ಉದ್ದೇಶಿತ ಘಟಕವನ್ನು ಕೂಡಲೇ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.
15 ದಿನಗಳಲ್ಲಿ ಇದನ್ನು ವರ್ಗಾವಣೆ ಮಾಡದಿದ್ದರೆ ಗ್ರಾಮಸ್ಥರು ಸೇರಿ ಅಧಿಕಾರಿಗಳ ನಡೆ ವಿರುದ್ಧ ಶಾಂತಿಯುತವಾಗಿ ಹೋರಾಟ ಮಾಡಲಾಗುವುದು ಎಂದು ಆಗ್ರಹಿಸಿ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮುಖಂಡ ಶ್ರೀನಿವಾಸ್, ಎಚ್.ವಿ.ವೆಂಕಟೇಗೌಡ, ಬೋರೇಗೌಡ, ತಮ್ಮೇಗೌಡ, ಮಹದೇವು, ಉಮೇಶ್, ಗವಿಸಿದ್ದೇಗೌಡ, ಸಿ.ಕುಮಾರ,ಅನಿಲ್ ಕುಮಾರ, ಸಿದ್ದರಾಜು, ದೇವೇಗೌಡ, ಚಾಮುಂಡಿ, ನಂದೀಶ, ಪ್ರತಾಪಕುಮಾರ್, ನಾಗಣ್ಣ, ಮಹೇಶ್, ಚಾಮೇಗೌಡ ಇತರರು ಇದ್ದರು.