ನಗರದ ಇಂಜಿನಿಯರುಗಳ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಭೂಮಿಗೆ ರಾಗಿ ಬಂದಿದ್ದು’ ಪುಸ್ತಕ ಬಿಡುಗಡೆಗೊಂಡಿತು. ಸತೀಶ್ ತಿಪಟೂರು, ಡಾ.ಆರ್.ಸಂತೋಷ್ ನಾಯಕ್, ಜಿ.ಕೃಷ್ಣಪ್ರಸಾದ್, ರೂಪಾ ಮಾಚಿಗಣಿ, ಮಲ್ಲಿಕಾರ್ಜುನ ಹೊಸಪಾಳ್ಯ ಇದ್ದರು. 
ಮೈಸೂರು

ಜ್ಞಾನ ವಿಸ್ತರಣೆಗೆ ಕಥೆಗಳನ್ನು ಮಕ್ಕಳಿಗೆ ತಲುಪಿಸಿ: ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಸಲಹೆ

ಪ್ರಮುಖ ಮುಖ್ಯಾಂಶಗಳು

  • ಜನಪದ ಕಥೆ, ರಾಗಿ ಸೇರಿದಂತೆ ಸಂಪ್ರದಾಯಗಳು ಕಾಲದ ಪಳೆಯುಳಿಕೆಗಳಾಗುತ್ತಿವೆಯೇನೋ ಎಂಬ ಆತಂಕ ಮೂಡುತ್ತದೆ.

ಮೈಸೂರು:ನಮ್ಮಹಿರಿಯರು ತಮ್ಮ ಜ್ಞಾನವನ್ನುವಿಸ್ತರಿಸಿಕೊಳ್ಳಲು ಕಥೆಗಳನ್ನುರೂಪಿಸಿದ್ದರು. ಅವುತಲೆಮಾರಿನಿಂದ ತಲೆಮಾರಿಗೆ ಬಾಯಿಂದಬಾಯಿಗೆ ಹರಿದು ಬಂದಿವೆ. ಈಕಥೆಗಳನ್ನು ಈಗ ಮಕ್ಕಳಿಗೆತಲುಪಿಸಬೇಕು ಎಂದು ರಂಗಾಯಣದನಿರ್ದೇಶಕ ಸತೀಶ್ ತಿಪಟೂರುಅಭಿಪ್ರಾಯಪಟ್ಟರು.

ನಗರದಇಂಜಿನಿಯರುಗಳ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿತುಮಕೂರಿನ ಧಾನ್ಯ ಪ್ರಕಾಶನದಿಂದಪ್ರಕಟಿಸಿರುವ ‘ಭೂಮಿಗೆ ರಾಗಿಬಂದಿದ್ದು’ ಪುಸ್ತಕ ಬಿಡುಗಡೆಕಾರ್ಯಕ್ರಮದಲ್ಲಿ ಮಾತನಾಡಿದರು.

ನಾವು ಒಂದುವಿಚಿತ್ರ ಕಾಲಘಟ್ಟದಲ್ಲಿಬದುಕುತ್ತಿದ್ದೇವೆ. ಜನಪದಕಥೆಗಳು, ರಾಗಿಮುಂತಾದವುಗಳು ಕಾಲದಪಳೆಯುಳಿಕೆಗಳಾಗುತ್ತಿವೆಯೇನೋಎಂಬ ಆತಂಕ ಮೂಡುತ್ತದೆ. ನಗರಕೇಂದ್ರಿತ ಮಕ್ಕಳು ಮತ್ತು ಪಾಲಕರುರಾಗಿ, ಅಕ್ಕಿ ಅಂಗಡಿಯಲ್ಲಿಸಿಗುತ್ತವೆ ಎನ್ನ್ನುವುದುತಿಳಿದಿದೆ. ಆದರೆ ಅವುಎಲ್ಲಿ ಬೆಳೆಯಲಾಗುತ್ತದೆ ಎನ್ನುವಜ್ಞಾನ ಇಲ್ಲದಂತಹ ಸ್ಥಿತಿಯಲ್ಲಿಇದ್ದಾರೆ. ಗಿಡ,ಮರ, ಆಹಾರಧಾನ್ಯದ ಗಿಡಗಳು ಯಾವುವು ಎನ್ನುವುದುಅವರಿಗೆ ತಿಳಿಸಿಲ್ಲ ಎಂದು ವಿಷಾದವ್ಯಕ್ತಪಡಿಸಿದರು.

ಇಂತಹಸ್ಥಿತಿಯಲ್ಲಿ ಯಾವ ಕಥನಗಳನ್ನು,ಯಾವ ವಿಚಾರಗಳನ್ನು ಮಕ್ಕಳಮನದಲ್ಲಿ ಬಿತ್ತಬೇಕು ಎಂಬುದುಮುಖ್ಯ ಪ್ರಶ್ನೆ. ಅದಕ್ಕಾಗಿನಮ್ಮ ಹಿರಿಯರು ತಮ್ಮ ಜ್ಞಾನವನ್ನುವಿಸ್ತರಿಸಿಕೊಳ್ಳಲು ಕಥೆಗಳನ್ನುರೂಪಿಸಿದರು. ಅವುತಲೆಮಾರಿನಿಂದ ತಲೆಮಾರಿಗೆ ಹರಿದುಬಂದಿವೆ. ಈ ಕಥೆಗಳನ್ನುಮಕ್ಕಳಿಗೆ ತಲುಪಿಸಬೇಕು. ಅವರುಈ ಕಥೆಗಳನ್ನು ಸ್ವೀಕರಿಸಲುಸಾಧ್ಯವಾಗುವಂತೆ ಅವರ ಮನಸ್ಸನ್ನುಹಸನುಗೊಳಿಸಬೇಕು. ಈಪುಸ್ತಕವೂ ಅಂತಹ ಒಂದು ಪ್ರಯತ್ನವಾಗಿದೆಎಂದರು.

ಪುಸ್ತಕದಕುರಿತು ಮಾತನಾಡಿದ ಕರ್ನಾಟಕರಾಜ್ಯ ಮುಕ್ತ ವಿಶ್ವವಿದ್ಯಾಲಯದಪ್ರಸಾರಾಂಗದ ನಿರ್ದೇಶಕ ಡಾ.ಆರ್.ಸಂತೋಷ್ನಾಯಕ್, ನಾವೆಲ್ಲಜನಪದ ಕಥೆಗಳನ್ನು ಕೇಳುತ್ತಬೆಳೆದವರು. ಆದರೆ ಈಗಕಥೆಗಳಿಗಿಂತ ಪುರಾಣಗಳ ಪ್ರಾಬಲ್ಯಹೆಚ್ಚಾಗಿದೆ. ಯಾವುದೇವ್ಯಕ್ತಿ, ಸ್ಥಳ ಅಥವಾವಿಷಯವನ್ನು ಪುರಾಣಕ್ಕೆ ಜೋಡಿಸಿಹೇಳುವ ಪ್ರವೃತ್ತಿ ಹೆಚ್ಚಾಗಿದೆಎಂದರು.

ಆದರೆಪುರಾಣವು ನಮ್ಮ ಕಣ್ಣಿಗೆ ಕಾಣಿಸದಲೋಕವನ್ನು ಚಿತ್ರಿಸುತ್ತದೆ.ಅದು ಸಾಮಾನ್ಯ ಜೀವನಕ್ಕೆಅಷ್ಟಾಗಿ ಹತ್ತಿರವಾಗುವುದಿಲ್ಲ.ಅದರ ವಿರುದ್ಧವಾಗಿ,ಜನಪದ ಕಥೆಗಳು ಜನರ ಬದುಕಿನಅನುಭವಗಳನ್ನು, ಸುತ್ತಮುತ್ತಲಿನಲೋಕವನ್ನು ನೇರವಾಗಿ ದಾಖಲಿಸುತ್ತವೆ.ಅದರಿಂದಲೇ ಜನಪದ ಕಥೆಗಳಲ್ಲಿಪ್ರಾಣಿ-ಪಕ್ಷಿಗಳು,ಸಾಮಾನ್ಯ ಜನರು,ಬೆಟ್ಟ-ಗುಡ್ಡಗಳಂತಹನೈಸರ್ಗಿಕ ಅಂಶಗಳು ಕಾಣಿಸುತ್ತವೆಎಂದು ಹೇಳಿದರು.

ಈ ಪುಸ್ತಕದಲ್ಲಿನ41 ಕಥೆಗಳು ಭಾರತದ ಕೃಷಿಸಂಸ್ಕೃತಿ, ತಾತ್ವಿಕತೆ,ಮೌಲ್ಯಗಳು, ಪರಿಸರಕಾಳಜಿ ಮತ್ತು ಬದುಕಿನ ರೀತಿಯನ್ನುಅರ್ಥಮಾಡಿಕೊಳ್ಳಲು ನೆರವಾಗುತ್ತವೆ.ಇಂತಹ ಕಥೆಗಳು ಕಳೆದುಹೋಗುವಮೊದಲು ನಮ್ಮದೇ ಮೌಖಿಕ ಜ್ಞಾನಪರಂಪರೆಯನ್ನು ದಾಖಲಿಸುವುದುಅತ್ಯಂತ ಮುಖ್ಯ ಎಂದು ಅಭಿಪ್ರಾಯಪಟ್ಟರು.

ಲೇಖಕರಲ್ಲಿಒಬ್ಬರಾದ ಜಿ.ಕೃಷ್ಣಪ್ರಸಾದ್ಮಾತನಾಡಿ, ಕಥೆಗಳಸಂಗ್ರಹ ಮತ್ತು ದಾಖಲಾತಿಯಅನುಭವವನ್ನು ಹಂಚಿಕೊಂಡು,ನಾವು ಹಳ್ಳಿಗಳಲ್ಲಿಸುತ್ತಾಡುವ ತುಡಿತದಿಂದಲೇ ಇದುಸಾಧ್ಯವಾಯಿತು. ಇಂದಿನಡಿಜಿಟಲ್ ಯುಗದಲ್ಲಿ ಮಕ್ಕಳಿಗೆಈ ಕಥೆಗಳನ್ನು ಓದಿಸಬೇಕು.ಪಾಲಕರೂ ಓದಲೇಬೇಕಾದಕೃತಿ ಇದು ಎಂದರು.

ಮತ್ತೊಬ್ಬಲೇಖಕರಾದ ಮಲ್ಲಿಕಾರ್ಜುನ ಹೊಸಪಾಳ್ಯಅವರು ಪುಸ್ತಕ ರೂಪುಗೊಂಡ ಬಗೆಯನ್ನುವಿವರಿಸಿದರು.

ಧಾರವಾಡದಸಾಹಿತಿ ರೂಪಾ ಮಾಚಿಗಣಿ ಮಾತನಾಡಿದರು.ಬಳಿಕ ಸಂವಾದದಲ್ಲಿ ಸಂತೋಷಕೌಲಗಿ, ಲೀಲಾ ಶಿವಕುಮಾರ್,ಚಿನ್ನಸ್ವಾಮಿ ವಡ್ಡಗೆರೆ,ಡಾ. ರಾಮಕೃಷ್ಣಪ್ಪ,ಶಂಕರಗುರು, ಲಕ್ಷ್ಮಣ್,ಅಪೂರ್ವ ಡಿಸಿಲ್ವಾ,ಎಂ.ಎಲ್.ಸೋಮಮತ್ತಿತರರು ತಮ್ಮ ಅಭಿಪ್ರಾಯಗಳನ್ನುಹಂಚಿಕೊಂಡರು.